ಮನೆಯಲ್ಲಿ ಇಷ್ಟು ಗ್ರಾಂ ಮೇಲೆ ಚಿನ್ನ ಇಟ್ಟರೆ ಸಂಕಷ್ಟ!! ಬರುತ್ತೆ ನೋಟಿಸ್!!

ಇತ್ತೀಚೆಗಿನ ಜಿಎಸ್ಟಿ ನೋಟೀಸ್ ಮೂಲಕ ಸಣ್ಣ ಅಂಗಡಿಗಳ ವ್ಯಾಪಾರಸ್ಥರಲ್ಲಿ ಆತಂಕವನ್ನ ಮೂಡಿಸಿರುವ ಕರ್ನಾಟಕದ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆ ಇತ್ತೀಚೆಗೆ ಚಿನ್ನದ ಮೇಲೆ ಆದಾಯ ತೆರಿಗೆ ದಾಳಿಗೆ ಸಂಬಂಧಿಸಿದ ಸುದ್ದಿಗಳಿಂದ ಸಾಮಾನ್ಯ ಜನರಲ್ಲಿ ಗೊಂದಲ ಉಂಟಾಗಿದೆ. ಮನೆಗಳಲ್ಲಿ ಚಿನ್ನ ಇಟ್ಟುಕೊಳ್ಳುವುದರಿಂದ ಟ್ಯಾಕ್ಸ್ ನೋಟೀಸ್ ಬರುತ್ತಾ ಎಂಬ ಭಯವು ಜನರ ನಡುವೆ ಹೆಚ್ಚಾಗುತ್ತಿದೆ. ನಮ್ಮ ದೇಶದಲ್ಲಿ ಚಿನ್ನ ಖರೀದಿ ಒಂದು ಸಂಸ್ಕೃತಿಯ ಭಾಗವಾಗಿದೆ; ಮದುವೆ, ಹಬ್ಬ, ಮತ್ತು ವಿಶೇಷ ದಿನಗಳಲ್ಲಿ ಮಹಿಳೆಯರು ಮತ್ತು ಪುರುಷರು ಪರಸ್ಪರವಾಗಿ ಚಿನ್ನ ಖರೀದಿಸುತ್ತಾರೆ. ಈ ಮೂಲಕ ಸಂಪ್ರದಾಯದ ಭಾಗವಾಗಿ ಮನೆಗಳಲ್ಲಿ ಚಿನ್ನ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ.
ಆದಾಯ ತೆರಿಗೆ ಇಲಾಖೆಯ ಅನುಸಾರ, ನಮ್ಮ ಬಳಿ ಇರುವ ಚಿನ್ನಕ್ಕೆ ಸಂಬಂಧಿಸಿದಂತೆ ಕೆಲವೊಂದು ಸ್ಪಷ್ಟವಾದ ನಿಯಮಗಳಿವೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ 1994ರ ಸೂಚನೆಯ ಪ್ರಕಾರ, ವಿವಾಹಿತ ಮಹಿಳೆ 500 ಗ್ರಾಂ, ಅವಿವಾಹಿತ ಮಹಿಳೆ 250 ಗ್ರಾಂ, ಮತ್ತು ಪುರುಷರು 100 ಗ್ರಾಂ ಚಿನ್ನವನ್ನ ಕಾನೂನುಬದ್ಧವಾಗಿ ಇಟ್ಟುಕೊಳ್ಳಬಹುದು. ಈ ಪ್ರಮಾಣದ ಚಿನ್ನಕ್ಕೆ ಯಾವುದೇ ಬಿಲ್ ಅಥವಾ ದಾಖಲೆ ಇಲ್ಲದಿದ್ದರೂ ಅಧಿಕಾರಿಗಳು ಪ್ರಶ್ನೆ ಮಾಡುವಹಾಗಿಲ್ಲ. ಆದರೆ ಇದಕ್ಕಿಂತ ಹೆಚ್ಚು ಪ್ರಮಾಣದಲ್ಲಿದ್ದರೆ ಶಂಕೆಯ ಸ್ಥಾನ ಸೃಷ್ಟಿಯಾಗಬಹುದು.
ಆದಾಯ ಕಡಿಮೆ ಇದ್ದು, ಹೆಚ್ಚು ಚಿನ್ನ ಇಟ್ಟಿದ್ದರೆ ಮತ್ತು ಅದಕ್ಕೆ ಯಾವುದೇ ದಾಖಲೆಗಳಿಲ್ಲದಿದ್ದರೆ ಇನ್ಕಮ್ ಟ್ಯಾಕ್ಸ್ ಅಧಿಕಾರಿಗಳು ದಾಳಿ ನಡೆಸುವ ಸಾಧ್ಯತೆ ಇದೆ. 30 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಚಿನ್ನ ಇಟ್ಟುಕೊಂಡು ಆದಾಯ ತೆರಿಗೆ ವರದಿ ಮಾಡದೆ ಇದ್ದರೆ, ನೀವು ನೋಟೀಸ್ ಪಡೆಯುವ ಸಾಧ್ಯತೆ ಇದೆ. ಆದಾಯ ತೆರಿಗೆ ಕಾಯ್ದೆ 132ರ ಪ್ರಕಾರ, ಪೂರಕ ದಾಖಲೆಗಳಿಲ್ಲದ ಚಿನ್ನಕ್ಕೆ ಸಂಬಂಧಿಸಿದಂತೆ ನಿಮ್ಮ ಮನೆ ಮೇಲೆ ದಾಳಿ ಆಗಬಹುದೆಂಬ ಕಾನೂನು ಜಾರಿ ಉಂಟಾಗಿದೆ.
ಈಗ ನೀವು ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬೇಕಾದರೆ, ಖರೀದಿಸಿದ ಚಿನ್ನಕ್ಕೆ ಬಿಲ್ ಅಥವಾ ರಸೀದಿ ಇಟ್ಟುಕೊಳ್ಳುವುದು ಅತ್ಯಾವಶ್ಯಕ. ಪಿತ್ರಾರ್ಜಿತವಾಗಿ ಬಂದ ಚಿನ್ನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು, ಮದುವೆಯಲ್ಲಿ ಅಥವಾ ಉಡುಗೊರೆ ರೂಪದಲ್ಲಿ ಬಂದ ಚಿನ್ನಕ್ಕೆ ಸಂಬಂಧಿಸಿದ ಫೋಟೋಗಳು ಅಥವಾ ಬರವಣಿಗೆ ರೂಪದ ದಾಖಲೆಯನ್ನು ಇಟ್ಟುಕೊಳ್ಳುವುದು ಸೂಕ್ತ. ಹೆಚ್ಚಿನ ಮೌಲ್ಯದ ಚಿನ್ನವಿದ್ದರೆ ಇದನ್ನು ಐಟಿಆರ್ ನಲ್ಲಿ ಡಿಕ್ಲೇರ್ ಮಾಡುವುದು ಕಡ್ಡಾಯ.
ಸ್ನೇಹಿತರೆ, ಭಾರತದಲ್ಲಿ ಮನೆಗಳಲ್ಲಿ ಚಿನ್ನ ಇಟ್ಟುಕೊಳ್ಳುವ ಸಂಸ್ಕೃತಿ ಪ್ರಸಿದ್ಧವಾಗಿದೆ. ಆದರೆ ಸರಿಯಾದ ದಾಖಲೆಗಳಿಲ್ಲದೆ ಹೆಚ್ಚು ಮೌಲ್ಯದ ಚಿನ್ನ ಇಟ್ಟುಕೊಳ್ಳುವುದು ಕಾನೂನುಬದ್ಧವಲ್ಲ. ಈ ನಿಯಮಗಳ ಬಗ್ಗೆ ತಿಳಿದಿರಲು ಬಹುಮುಖ್ಯ. ನೀವು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ತಮ್ಮ ಚಿನ್ನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕಟ್ಟಿ ಕೊಳ್ಳಲು ಪ್ರೇರೇಪಿಸಿ.