ಬ್ಯಾಂಕ್ ನಲ್ಲಿ ಹೆಂಡತಿ ಹೆಸರಲ್ಲಿ ಹಣ ಇಟ್ಟಿರುವರಿಗೆ ಶಾಕ್ ಕೊಟ್ಟ ಸರ್ಕಾರ !! ಹೊಸ ರೂಲ್ಸ್ ಜಾರಿ !!
ಹಲೋ ಸ್ನೇಹಿತರೆ, ನಮಸ್ಕಾರ. ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಪತ್ನಿಯ ಖಾತೆಗೆ ಹಣ ವರ್ಗಾವಣೆ ಮಾಡುವ ಬಗ್ಗೆ ಒಂದು ಮಹತ್ವದ ಎಚ್ಚರಿಕೆಯನ್ನು ನೀಡಿದೆ. ತೆರಿಗೆ ಹೊಣಗಾರಿಕೆಯನ್ನು ಕಡಿಮೆ ಮಾಡಲು ತಮ್ಮ ಪತ್ನಿ ಅಥವಾ ಪಾಲುದಾರರ ಖಾತೆಗೆ ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸುವ ಅಭ್ಯಾಸ ಹಲವರಲ್ಲಿ ಸಾಮಾನ್ಯವಾಗಿದೆ. ಆದರೆ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ ಈ ತಂತ್ರವು ಕೆಲವೊಮ್ಮೆ ದೊಡ್ಡ ಟ್ಯಾಕ್ಸ್ ಟ್ರ್ಯಾಪ್ ಆಗಿ ಮಾರ್ಪಾಡಾಗಬಹುದು.
ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 69 ಅಡಿಯಲ್ಲಿ ಈ ನಿಯಮ ಅನ್ವಯವಾಗುತ್ತದೆ. ಒಬ್ಬ ವ್ಯಕ್ತಿ ತನ್ನ ಪತ್ನಿಯ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿದರೆ ಆ ವರ್ಗಾವಣೆಯ ಮೇಲೆ ತಕ್ಷಣಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಆದರೆ ಸಮಸ್ಯೆ ಉದ್ಭವಿಸುವುದು ಪತ್ನಿ ಆ ಹಣವನ್ನು ಹೂಡಿಕೆ ಮಾಡಿದಾಗ. ಉದಾಹರಣೆಗೆ ಶೇರು, ಮ್ಯೂಚುವಲ್ ಫಂಡ್, ಫಿಕ್ಸ್ಡ್ ಡೆಪಾಸಿಟ್ ಅಥವಾ ಆಸ್ತಿಯಲ್ಲಿ ಹೂಡಿಕೆ ಮಾಡಿದರೆ, ಆ ಹೂಡಿಕೆಯಿಂದ ಬರುವ ಬಂಡವಾಳ ಲಾಭ, ಡಿವಿಡೆಂಡ್ ಅಥವಾ ಬಾಡಿಗೆ ಆದಾಯವನ್ನು ಪತ್ನಿಯ ಆದಾಯವೆಂದು ಪರಿಗಣಿಸಲಾಗುವುದಿಲ್ಲ. ನಿಯಮದ ಪ್ರಕಾರ ಆ ಆದಾಯವನ್ನು ಮೂಲತಃ ಹಣ ವರ್ಗಾಯಿಸಿದ ವ್ಯಕ್ತಿಯ ಆದಾಯಕ್ಕೆ ಸೇರಿಸಿ ತೆರಿಗೆ ಲೆಕ್ಕ ಹಾಕಲಾಗುತ್ತದೆ.
ಈ ನಿಯಮದ ಮುಖ್ಯ ಉದ್ದೇಶವೇನೆಂದರೆ, ತೆರಿಗೆದಾರರು ತಮ್ಮ ಆದಾಯವನ್ನು ಕುಟುಂಬದ ಸದಸ್ಯರಿಗೆ ವರ್ಗಾಯಿಸುವ ಮೂಲಕ ವಿಭಜಿಸಿ ಕಡಿಮೆ ತೆರಿಗೆ ಪಾವತಿಸುವ ಪ್ರಯತ್ನವನ್ನು ತಡೆಯುವುದು. ಆದರೆ, ಹಣವನ್ನು ಕೇವಲ ಮನೆ ಖರ್ಚು ಅಥವಾ ವೈಯಕ್ತಿಕ ಅಗತ್ಯತೆಗಳಿಗೆ ಬಳಸಿದರೆ ಯಾವುದೇ ತೊಂದರೆ ಆಗುವುದಿಲ್ಲ. ಅದೇ ರೀತಿ, ಪತ್ನಿಯು ತನ್ನದೇ ಆದ ಕೌಶಲ್ಯ, ತಾಂತ್ರಿಕ ಜ್ಞಾನ ಅಥವಾ ಅನುಭವದ ಮೂಲಕ ಆದಾಯ ಗಳಿಸುತ್ತಿದ್ದರೆ ಈ ನಿಯಮ ಅನ್ವಯವಾಗುವುದಿಲ್ಲ.
ದಂಪತಿಗಳು ಕ್ಲಬ್ಬಿಂಗ್ ನಿಯಮಗಳನ್ನು ತಪ್ಪಿಸಲು ಬಯಸಿದರೆ, ಕಾನೂನುಬದ್ಧ ತೆರಿಗೆ ಯೋಜನೆಗಳನ್ನು ಅನುಸರಿಸಬೇಕು. ಉದಾಹರಣೆಗೆ, ಹೂಡಿಕೆಗಳನ್ನು ಇಬ್ಬರ ಜಂಟಿ ಹೆಸರಿನಲ್ಲಿ ಮಾಡಿ, ಆದಾಯದ ಹಂಚಿಕೆ ಆಧಾರದ ಮೇಲೆ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.
ಸ್ನೇಹಿತರೆ, ಈ ಮಾಹಿತಿ ನಿಮಗೆ ಉಪಯುಕ್ತವೆಂದು ಅನಿಸಿದರೆ ಒಂದು ಲೈಕ್ ನೀಡಿ ಮತ್ತು ನಮ್ಮ ಚಾನೆಲ್ ಅನ್ನು subscribe ಮಾಡಿ.




