ತನ್ನ ಸೋಷಿಯಲ್​ ಮೀಡಿಯಾ ಲೈಕ್​ಗೋಸ್ಕರ ಒಬ್ಬ ಅಮಾಯಕ ಯುವಕನ ಜೀವ ತೆಗೆದ ಯುವತಿ !! ಏನಾಯಿತು ನೋಡಿ ?

ತನ್ನ ಸೋಷಿಯಲ್​ ಮೀಡಿಯಾ ಲೈಕ್​ಗೋಸ್ಕರ  ಒಬ್ಬ ಅಮಾಯಕ ಯುವಕನ ಜೀವ ತೆಗೆದ ಯುವತಿ !! ಏನಾಯಿತು ನೋಡಿ ?

ಬಸ್‌ಗಳಲ್ಲಿ ಪ್ರಯಾಣಿಸುವಾಗ ಕೆಲವರು ಉದ್ದೇಶಪೂರ್ವಕವಾಗಿ ಮಹಿಳೆಯರನ್ನು ಸ್ಪರ್ಶಿಸುವ ಘಟನೆಗಳು ನಡೆಯುತ್ತವೆ. ಕೆಲವೊಮ್ಮೆ ಇದು ಅಚಾನಕ್ ಆಗಿ ಸಂಭವಿಸಬಹುದು. ಆದರೆ ಯಾವುದು ಉದ್ದೇಶಪೂರ್ವಕ, ಯಾವುದು ಅಜಾಗರೂಕತೆಯಿಂದ ಎಂಬುದನ್ನು ಮಹಿಳೆಯರು ಗುರುತಿಸುವುದು ಬಹಳ ಕಷ್ಟ. ಇತ್ತೀಚೆಗೆ ಕೇರಳದಲ್ಲಿ ನಡೆದ ಒಂದು ಪ್ರಕರಣ ಮಾತ್ರ ಭಾರಿ ಚರ್ಚೆಗೆ ಕಾರಣವಾಗಿದೆ.

ವಿಡಿಯೋ ಮತ್ತು ವೈರಲ್

ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಶಿಮ್ಜಿತಾ ಮುಸ್ತಫಾ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಕೈಯಲ್ಲಿ ಸೆಲ್ಫಿ ಸ್ಟಿಕ್ ಹಿಡಿದು ವಿಡಿಯೋ ಮಾಡುತ್ತಿದ್ದರು. ಆ ಸಮಯದಲ್ಲಿ ಅವರ ಹಿಂದೆ ನಿಂತಿದ್ದ ದೀಪಕ್ ಅವರನ್ನು ಸ್ಪರ್ಶಿಸಿದರೆಂದು ಶಿಮ್ಜಿತಾ ಆರೋಪಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಅವರು ಲೈಂಗಿಕ ದೌರ್ಜನ್ಯ ಎಂದು ಬರೆದು, ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರು. ವಿಡಿಯೋ ಮಿಲಿಯನ್‌ಗಟ್ಟಲೆ ವ್ಯೂವ್ಸ್ ಪಡೆದು, ಕಾಮೆಂಟ್‌ಗಳ ಸುರಿಮಳೆಯಾಯಿತು.

ಮತ್ತೊಂದು ಪೋಸ್ಟ್ ಮತ್ತು ಪರಿಣಾಮ

ಮುಂದಿನ ದಿನ ಶಿಮ್ಜಿತಾ ಈ ಘಟನೆಯ ಬಗ್ಗೆ ಮತ್ತೊಂದು ಪೋಸ್ಟ್ ಮಾಡಿದರು. ಅದಕ್ಕೂ ಹೆಚ್ಚಿನ ಪ್ರತಿಕ್ರಿಯೆಗಳು ಬಂದವು. ಆದರೆ ಅವರು ಪೊಲೀಸರಿಗೆ ಯಾವುದೇ ದೂರು ನೀಡಲಿಲ್ಲ. ವಿಡಿಯೋದಲ್ಲಿ ದೀಪಕ್ ಅವರ ಮುಖ ಸ್ಪಷ್ಟವಾಗಿ ಕಾಣುತ್ತಿದ್ದ ಕಾರಣ, ವಿಷಯವು ಅವರ ಕುಟುಂಬಕ್ಕೂ ತಲುಪಿತು. ಇದರಿಂದ ದೀಪಕ್ ಅವರ ಸಾಮಾಜಿಕ ಜೀವನವೇ ಬದಲಾಗಿಬಿಟ್ಟಿತು.

ದೀಪಕ್ ಅವರ ಬದುಕಿನ ಅಂತ್ಯ

ಎಲ್ಲೆಡೆಯಿಂದ ಬಂದ ಟೀಕೆಗಳು, ಕೆಟ್ಟ ಕಾಮೆಂಟ್‌ಗಳನ್ನು ಸಹಿಸಿಕೊಳ್ಳಲಾಗದೆ 41 ವರ್ಷದ ಮಾರಾಟ ವ್ಯವಸ್ಥಾಪಕ ದೀಪಕ್ ಆತ್ಮಹತ್ಯೆ ಮಾಡಿಕೊಂಡರು. ನಂತರ ಜನರು ಆ ವಿಡಿಯೋವನ್ನು ಮತ್ತೆ ನೋಡಿದಾಗ, ಶಿಮ್ಜಿತಾ ನಗುತ್ತಾ ವಿಡಿಯೋ ಮಾಡುತ್ತಿರುವುದು ಗಮನಕ್ಕೆ ಬಂತು. ದೀಪಕ್ ಅವರ ಕೈ ನಿಜವಾಗಿಯೂ ಸ್ಪರ್ಶಿಸಿದ್ದರೂ ಅದು ಉದ್ದೇಶಪೂರ್ವಕವಾಗಿತ್ತೋ ಅಥವಾ ಅಜಾಗರೂಕತೆಯಿಂದ ಆಗಿತ್ತೋ ಎಂಬುದು ಸ್ಪಷ್ಟವಾಗಿಲ್ಲ.

ಆರೋಪಗಳು ಮತ್ತು ಪ್ರಶ್ನೆಗಳು

ಕೆಲವರು ಈ ವಿಡಿಯೋ ಕೇವಲ ಲೈಕ್ಸ್ ಮತ್ತು ವ್ಯೂವ್ಸ್‌ಗಾಗಿ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಮಹಿಳೆಯರು ಬಸ್‌ನಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಸ್ಪರ್ಶಿಸಿದರೆ ಅವರ ಮುಖಭಾವದಲ್ಲೇ ಕೋಪ ವ್ಯಕ್ತವಾಗುತ್ತದೆ. ಆದರೆ ಈ ವಿಡಿಯೋದಲ್ಲಿ ಶಿಮ್ಜಿತಾ ಮುಗುಳ್ನಗುತ್ತಲೇ ಇದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.