ನಾಲ್ಕು ಮದುವೆಯಾಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮುಸ್ಲಿಂ ಯುವಕ..! ಧರ್ಮದೇಟು ಕೊಟ್ಟ ವಿಡಿಯೋ ನೋಡಿ
ಮದುವೆ ಎನ್ನುವುದು ಒಂದು ಅದ್ಭುತ ಕಾರ್ಯ. ಹಾಗೂ ಜೀವನದ ಮಹತ್ತರ ಘಟ್ಟ ಎಂದು ಹೇಳಬಹುದು. ಮದುವೆ ಹೆಸರಿನಲ್ಲಿ ಸಾಕಷ್ಟು ಘಟನೆಗಳು ಈಗಾಗಲೇ ನಮ್ಮ ಕಣ್ಣ ಮುಂದೆ ನಡೆದು ಹೋಗಿವೆ. ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಪ್ರೀತಿಯಿಂದ, ಮಮತೆಯಿಂದ ಸ್ನೇಹದಿಂದ, ಗಂಡ ಹೆಂಡತಿ ಒಳ್ಳೆಯ ಜೀವನವನ್ನೆ ಸಾಗಿಸುವಂತಹ ಘಟನೆಗಳು ನಮ್ಮ ಕಣ್ಣ ಮುಂದೆಯೆ ಕಂಡು ಬಂದಿವೆ. ಆದರೆ ಇದೇ ಮದುವೆ ಹೆಸರಿನಲ್ಲಿ ಇಂದಿಗೂ ಕೂಡ ಕೆಲವು ಕಡೆ ವಂಚನೆ ಆಗುತ್ತಲಿದೆ. ಅದು ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಅನ್ಯಾಯ ಆಗುತ್ತಿದೆ ಎಂದು ಹೇಳಬಹುದು. ಅಂತಹದ್ದೇ ಘಟನೆ ಇದೀಗ ದಾವಣಗೆರೆಯಲ್ಲಿ ನಡೆದಿದ್ದು, ಈತನ ಟಾರ್ಗೆಟ್ ಯಾವ ಯಾವ ಮಹಿಳೆಯರು ಗೊತ್ತಾ.? ಯಾರು ಎಂದರೆ ಗಂಡ ಸತ್ತವರು,. ಹಾಗೇನೇ ಗಂಡ ಬಿಟ್ಟ ಅ ಮಹಿಳೆಯರೇ ಈತನ ಟಾರ್ಗೆಟ್ ಎನ್ನಲಾಗಿದೆ.
ಅವರನ್ನು ಪ್ರೀತಿಯಿಂದ ಪುಸಲಾಯಿಸಿ, ಅವರಿಗೆ ನಾನು ಒಳ್ಳೆ ಬಾಳು ಕೊಡುತ್ತೇನೆ ಎಂದು ಹೇಳಿ ಹೇಳಿ ನಂಬಿಸಿ ಮದುವೆ ಮಾಡಿಕೊಂಡು ಆ ನಾಲ್ಕು ಮಹಿಳೆಯರಿಗೂ ಅನ್ಯಾಯ ಮಾಡಿದ್ದಾನಂತೆ.. ಹೀಗೆ ಹೇಳುತ್ತಲೇ ಸುಮಾರು ನಾಲ್ಕು ಮದುವೆ ಮಾಡಿಕೊಂಡಿರುವ ಈತ ದಾವಣಗೆರೆಯ ಅಜಾದ್ ನಗರದ ನಿವಾಸಿ..ಹೆಸರು ಮಹಮ್ಮದ್ ವಾಸಿಂ ಅಲಿಯಾಸ್ ಶಾರುಖ್ ಖಾನ್ ಎಂದು..ಈತ ಬೇರೆ ಬೇರೆ ಕಡೆ ಬೇರೆ ಹೆಸರುಗಳನ್ನು ಹೇಳಿಕೊಂಡು ಮೋಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸಾಧಿಕ್ ಎಂದೆಲ್ಲಾ ಹೇಳಿಕೊಂಡು ಈತ ಅ ಮಹಿಳೆಯರಿಗೆ ವಂಚಿಸಿದ್ದಾನೆ. ಹೌದು ಈತನನ್ನು ನಂಬಿ ಈಗಾಗಲೇ ನಾಲ್ಕು ಜನ ಮುಸ್ಲಿಂ ಮಹಿಳೆಯರು ಈತನಿಂದ ಮೋಸ ಹೋಗಿದ್ದು ಈತನಿಂದ ನಮಗೆ ಅನ್ಯಾಯ ಆಗಿದೆ ಎಂದು ಈ ನಾಲ್ಕು ಮಹಿಳೆಯರು ಪೋಲಿಸ್ ಮೆಟ್ಟಿಲು ಹತ್ತಿದ್ದಾರೆ.
ಹೌದು ದಾವಣಗೆರೆಯ ಅಜಾದ್ ನಿವಾಸಿ ಆಗಿರುವ ಈತ ಭಾಷಾ ನಗರದಲ್ಲಿ ನಾಲ್ಕನೇ ಮದುವೆಯಾಗಿದ್ದಾನೆ. ಅಜಾದ್ ನಗರದಲ್ಲಿ ಮೂರನೇ ಮದುವೆ ಆಗಿದ್ದಾನೆ. ಹಾಗೂ ಹರಿಹರದಲ್ಲಿ ಮೊದಲ ಮದುವೆ, ಮಲೆಬೆನ್ನೂರು ನಲ್ಲಿ ಎರಡನೇ ಮದುವೆ ಆಗಿ ವಂಚನೆ ಮಾಡಿದ್ದಾನೆ. ಈಗ ಮೂರನೇ ಪತ್ನಿ ಬಾನು ಎಂಬುವವರಿಂದ ಈತ ಸಾಕಷ್ಟು ಹಣ ಮತ್ತು ಬಂಗಾರ ತೆಗೆದುಕೊಂಡು ಮೋಸ ಮಾಡಿದ್ದಾನೆ ಎಂದು ಅವರೇ ಆರೋಪ ಮಾಡಿದ್ದಾರೆ. ಹೌದು ಇತ್ತೀಚಿಗೆ ಬೂದಾಳ ರಸ್ತೆಯಲ್ಲಿ ದಾವಣಗೆರೆಯಲ್ಲಿ ಕಾಣಿಸಿಕೊಂಡ ಈತನನ್ನು ಈತನ ನಾಲ್ಕು ಪತ್ನಿಯರೇ ಸೆರೆ ಹಿಡಿದು ಚೆನ್ನಾಗಿ ಬಾರಿಸಿದ್ದಾರೆ. ಧರ್ಮದೇಟು ನೀಡಿ ಪೊಲೀಸ್ ಠಾಣೆಗೆ ಈತನನ್ನು ಎಳೆದುಕೊಂಡು ಬಂದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಈ ವಿಡಿಯೋ ಮೂಲಕ ತಿಳಿದು ಬಂದಿದೆ.
ನಾಲ್ಕು ಮದುವೆ ಆಗಿರುವ ಈತ ಅದ್ಯಾವ ಕಾರ್ಯಕ್ಕೆ ಈ ರೀತಿ ಮಾಡಿದ ಗೊತ್ತಿಲ್ಲ..ಈ ರೀತಿ ಮದುವೆ ವಿಚಾರದಲ್ಲಿ ಸುಳ್ಳು ಹೇಳಿ ಮದುವೆ ಮಾಡಿಕೊಂಡರೆ ಕೊನೆಗೆ ಒಂದಲ್ಲ ಒಂದು ದಿವಸ ಈತನ ರೀತಿಯೇ ಸಿಕ್ಕಿಹಾಕಿಕೊಳ್ಳಲೇಬೇಕು. ಅದಕ್ಕೆ ಈ ವಿಡಿಯೋ ಸಾಕ್ಷಿ ವಿಡಿಯೋ ನೋಡಿ ಮತ್ತು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...
VIDEO CREDIT : POWER TV




