ನೈಜ ಘಟನೆ! ಯುವಕರೇ ಪ್ರೀತಿಸಿ ಮದುವೆ ಆಗುವ ಮುಂಚೆ ಹುಷಾರಾಗಿರಿ, ಇಲ್ಲದ್ದಿದರೆ ನಿಮ್ಮ ಬಾಳು ಗೋಳು
ಬೆಂಗಳೂರು ನಗರದ ಹೊರವಲಯದ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ವಿಚಿತ್ರ ಪ್ರಕರಣವೊಂದು ದಾಖಲಾಗಿದೆ. ಮೂವರನ್ನು ಪ್ರೀತಿಸಿ, ಮೂರನೇ ಮದುವೆಯಾದ ನಂತರ ಯುವತಿ ಮತ್ತೊಬ್ಬನ ಜೊತೆ ಎಸ್ಕೇಪ್ ಆಗಿರುವ ಘಟನೆ ಇದಾಗಿದೆ.
ಸೇವಂತಿ (ಹೆಸರು ಬದಲಾಯಿಸಲಾಗಿದೆ) ಕಾಲೇಜು ದಿನಗಳಲ್ಲಿ ಮಾವನ ಮಗ ಸುಮಂತ್ (ಹೆಸರು ಬದಲಾಯಿಸಲಾಗಿದೆ) ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಳು. ಇದೇ ವೇಳೆ ಗಿರೀಶ್ (ಹೆಸರು ಬದಲಾಯಿಸಲಾಗಿದೆ) ಎಂಬಾತನ ಜೊತೆಗೂ ಸಂಬಂಧ ಬೆಳೆಸಿದ್ದಳು ಎನ್ನಲಾಗಿದೆ. ಗಿರೀಶ್ ಕಡೆಯಿಂದ ಅರಿಶಿನಕೊಂಬನ್ನು ಕಟ್ಟಿಸಿಕೊಂಡಿದ್ದರೂ, ಪೋಷಕರು ರಾಜಿ ಪಂಚಾಯ್ತಿ ಮೂಲಕ ವಿಷಯವನ್ನು ಬಗೆಹರಿಸಿದ್ದರು. ನಂತರ, ಮಾವನ ಮಗ ಸುಮಂತ್ ಜೊತೆಯಲ್ಲಿಯೇ ಮೂರು ಬಾರಿ ಮದುವೆ ನಡೆದಿರುವುದು ತಿಳಿದು ಬಂದಿದೆ.
ಕುಟುಂಬಸ್ಥರ ವಿರೋಧದ ನಡುವೆಯೇ ಸೇವಂತಿ ಸುಮಂತ್ ನನ್ನು ಮದುವೆಯಾಗಿದ್ದಳು. ಪೋಷಕರು ಬೇರೆ ಮದುವೆ ಮಾಡಿಸುತ್ತಾರೆ ಎಂಬ ಭಯದಿಂದ ತೊಟ್ಟ ಬಟ್ಟೆಯಲ್ಲಿಯೇ ಸುಮಂತ್ ಮನೆ ಸೇರಿಕೊಂಡಿದ್ದಳು. ಜನವರಿ 26ರಂದು ಇವರ ಮದುವೆ ನೆರವೇರಿತು.
ಇದಾದ ಬಳಿಕ ಸೇವಂತಿ ಪೋಷಕರು ಮಗಳು ಕಾಣೆಯಾಗಿದ್ದಾಳೆ ಎಂದು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದರು. ವಿಚಾರಣೆಗೆ ಕರೆಸಿದಾಗ, ಸೇವಂತಿ ಪ್ರೀತಿಸಿ ಮದುವೆಯಾಗಿರುವುದಾಗಿ ಹೇಳಿಕೆ ನೀಡಿದಳು. ನಂತರ ಅಜ್ಜಿಯ ನೆಪ ಹೇಳಿ ಪೋಷಕರು ಅವಳನ್ನು ಮನೆಗೆ ಕರೆದುಕೊಂಡು ಹೋದರು. ಆದರೆ ತವರಿನಿಂದ ಸುಮಂತ್ ಮನೆಗೆ ಹಿಂದಿರುಗಿದ ಮೂರನೇ ದಿನವೇ ಸೇವಂತಿ ಎಸ್ಕೇಪ್ ಆಗಿದ್ದಾಳೆ.
ಪತ್ನಿ ಕಾಣೆಯಾಗಿದ್ದರಿಂದ ಸುಮಂತ್ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದನು. ದೂರು ದಾಖಲಾಗುತ್ತಿದ್ದಂತೆ, ನಿಶಾಂತ್ ಎಂಬ ಯುವಕನ ಜೊತೆ ಸೇವಂತಿ ಪೊಲೀಸರ ಮುಂದೆ ಹಾಜರಾದಳು. "ನನಗೆ ಬೆದರಿಸಿ ಮದುವೆ ಮಾಡಿಸಿದ್ದಾರೆ. ನನಗೆ ಮಂಜುನಾಥ್ ಜೊತೆ ಮದುವೆ ಇಷ್ಟ ಇರಲಿಲ್ಲ. ನಾನು ಪೋಷಕರ ಜೊತೆ ಹೋಗುತ್ತೇನೆ" ಎಂದು ಸೇವಂತಿ ಹೇಳಿಕೆ ನೀಡಿದಳು.
ಇದರಿಂದ ಬೇಸರಗೊಂಡ ಪತಿ ಸುಮಂತ್, "ನನಗೆ ಯುವತಿಯಿಂದ ಅನ್ಯಾಯವಾಗಿದೆ. ಲವ್, ಮ್ಯಾರೇಜ್ ಹೆಸರಲ್ಲಿ ವಂಚನೆ ಮಾಡಿದ್ದಾಳೆ. ನನಗೆ ನ್ಯಾಯ ಬೇಕು. ನನ್ನಂತೆ ಬೇರೆ ಹುಡುಗರಿಗೂ ಅನ್ಯಾಯವಾಗಬಾರದು. ಮೋಜು ಮಸ್ತಿಗಾಗಿ ಯುವಕರ ಬಾಳು ಹಾಳು ಮಾಡುತ್ತಿದ್ದಾಳೆ" ಎಂದು ಆಕ್ರೋಶ ವ್ಯಕ್ತಪಡಿಸಿದನು.




