ವಿವಾಹವಾದ ಮರುದಿನವೇ ಪ್ರಿಯಕರನ ಜೊತೆ ದುಡ್ಡು ಚಿನ್ನದೊಂದಿಗೆ ಓಡಿ ಹೋದ ಯುವತಿ..!
Updated: Tuesday, January 5, 2021, 10:56 [IST]

ಹೌದು ಮಾಧ್ಯಮ ಮೂಲಕ ಈಗ ಬಂದಿರುವ ಮಾಹಿತಿ ಪ್ರಕಾರ, ಮಂಗಳೂರು ತಾಲೂಕಿನ ಮೂಲ್ಕಿಯಲ್ಲಿ ಕಳೆದ ಭಾನುವಾರ ಯುವತಿಯ ವಿರುದ್ಧ ಯುವತಿಯ ತಂದೆ ದೂರು ನೀಡಿದ್ದು, ಶಿಕ್ಷಕರೊಂದಿಗೆ ಮದುವೆ ಮಾಡಿಕೊಟ್ಟ ಮರುದಿನ ಚಿನ್ನ ಹಣದೊಂದಿಗೆ ಸ್ವಂತ ನನ್ನ ಮಗಳು ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ಹೇಳಿದ್ದರೆನ್ನಲಾಗಿದೆ. ಹೌದು ಕಳೆದ ಶನಿವಾರ ಮೂಲ್ಕಿಯಲ್ಲಿ ಶಿಕ್ಷಕ ನೊಟ್ಟಿಗೆ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ.
ಬಳಿಕ ತನ್ನ ಪ್ರಿಯಕರನ ಜೊತೆ ಹಣ ಬಂಗಾರವನ್ನು ತೆಗೆದುಕೊಂಡು, ಪಲ್ಸರ್ ಬೈಕ್ ನಲ್ಲಿ ಓಡಿಹೋಗಿದ್ದು, ಇವರಿಬ್ಬರು ಓಡಿಹೋದ ದೃಶ್ಯವು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೌದು ಮೊದಲೇ ಪೋಷಕರಿಗೆ ಮಗಳು ಬೇರೊಬ್ಬರನ್ನು ಪ್ರೀತಿ ಮಾಡುವ ವಿಚಾರ ತಿಳಿದಿದ್ದು, ವಿಚಾರಣೆ ಮಾಡಿದ ಬಳಿಕ, ಆತನನ್ನು ತ್ಯಜಿಸುವುದಾಗಿ ಮಾತುಕೊಟ್ಟಿದ್ದರಂತೆ,ಇದೆ ಹಿನ್ನೆಲೆಯಲ್ಲಿ ಮಗಳಿಗೆ ಅದ್ದೂರಿಯಾಗಿ ಶಿಕ್ಷಕನೊಟ್ಟಿಗೆ ಮಗಳ ಮದುವೆ ಮಾಡಿಕೊಟ್ಟಿದ್ದರು ಈಕೆಯ ಪೋಷಕರು.
ಆದರೆ ಇದೀಗ ಸ್ವಂತ ಮಗಳೇ ಈ ರೀತಿ ಮಾಡಿದಳಲ್ಲ ಎಂದು, ಇವಳ ವಿರುದ್ಧವೇ ತಂದೆ ದೂರು ನೀಡಿದ್ದಾರೆ ಎನ್ನಲಾಗಿದೆ. ಅತ್ತ ವಿವಾಹವಾಗಿದ್ದ ಹುಡುಗನ ತಂದೆ ಅಸ್ವಸ್ಥಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ. ಮತ್ತು ತಪ್ಪದೇ ಶೇರ್ ಕೂಡ ಮಾಡಿ ಧನ್ಯವಾದಗಳು....