ಸಂಜು ಬಸಯ್ಯ- ಪಲ್ಲವಿ ಲವ್‌ ಸ್ಟೋರಿ! ಎಲ್ಲಿಯೂ ಹೇಳದ ಗುಟ್ಟು ರಟ್ಟು ಮಾಡಿದ ಕಾಮಿಡಿ ಕಿಲಾಡಿ ! ಕೇಳಿ ಎಲ್ಲರೂ ಶಾಕ್ ?

ಸಂಜು ಬಸಯ್ಯ- ಪಲ್ಲವಿ ಲವ್‌ ಸ್ಟೋರಿ! ಎಲ್ಲಿಯೂ ಹೇಳದ ಗುಟ್ಟು ರಟ್ಟು ಮಾಡಿದ ಕಾಮಿಡಿ ಕಿಲಾಡಿ ! ಕೇಳಿ ಎಲ್ಲರೂ ಶಾಕ್ ?

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋದಿಂದ ಫೇಮಸ್‌ ಆದ ಸಂಜು, ತಮ್ಮ ಕುಟುಂಬ ನಡೆಸಿಕೊಂಡು ಬರ್ತಿದ್ದ ಆರ್ಕೆಸ್ಟ್ರಾಗಳಲ್ಲಿಯೂ ಮತ್ತಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡರು. ಉತ್ತರ ಕರ್ನಾಟಕ ಭಾಗದ ಬಹುತೇಕ ಜಾತ್ರಾ ಸಮಯದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮಗಳು, ನಾಟಕಗಳಲ್ಲಿ ಕಾಣಿಸಿಕೊಂಡು ಫೇಮ್‌ ಗಿಟ್ಟಿಸಿಕೊಂಡರು. ಮದುವೆ ಬಳಿಕ ಜೋಡಿ ನಂಬರ್‌ 1 ಶೋನಲ್ಲಿಯೂ ಪತ್ನಿ ಪಲ್ಲವಿ ಬಳ್ಳಾರಿ ಅವರ ಜತೆಗೆ ತೆರಳಿದ್ದರು. ಆದರೆ, ಇದೇ ಸಂಜು ಬಸಯ್ಯ ಮತ್ತು ಪಲ್ಲವಿ ಜೋಡಿಯ ಮದುವೆ ಅಷ್ಟು ಸುಲಭವಾಗಿ ನಡೆದಿಲ್ಲ. ಏಕೆಂದರೆ, ಈ ಜೋಡಿ ಎರಡೂ ಮನೆ ಕಡೆಯಿಂದ ಒಪ್ಪಿ ಮದುವೆ ಆಗಿಲ್ಲ!

ಸಂಜು ಬಸಯ್ಯ ಮತ್ತು ಪಲ್ಲವಿ ಅವರ ಪ್ರೇಮ್‌ ಕಹಾನಿ, ಯಾವ ಸಿನಿಮಾ ಸ್ಟೋರಿಗೂ ಕಡಿಮೆ ಇಲ್ಲ. ಇಲ್ಲಿ ಪ್ರೀತಿ ಇದೆ, ಬ್ರೇಕಪ್‌ ಇದೆ, ಬಳಿಕ ಮನೆಯವರಿಗೆ ಹೇಳದೇ ರಿಜಿಸ್ಟರ್‌ ಮದುವೆ, ಅದಾದ ಬಳಿಕ ಮನೆ ಬಿಟ್ಟು ಹೊರಬಂದಿದ್ದು.. ಹೀಗೆ ಪ್ರೀತಿಗಾಗಿ ಎಲ್ಲ ಕಷ್ಟ ಸುಖಗಳನ್ನು ದಾಟಿ, ಇದೀಗ ಎರಡೂ ಕುಟುಂಬದ ಜತೆಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇವರಿಬ್ಬರ ಲವ್‌ಸ್ಟೋರಿ ಶುರುವಾಗಿದ್ದು ಯಾವಾಗಿನಿಂದ? ಮೊದಲು ಪ್ರಪೋಸ್‌ ಮಾಡಿದ್ದು ಯಾರು? ಅದಾದ ಮೇಲೆ ಏನೆಲ್ಲ ಆಯ್ತು? ಈ ಎಲ್ಲದರ ಬಗ್ಗೆ ಪ್ರಿಯಾ ಸವಡಿ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದೆ ಈ ಜೋಡಿ.

ಕಾಮಿಡಿ ಕಿಲಾಡಿಗಳು ಶೋಗೆ ಹೋಗುವುದಕ್ಕೂ ಮೊದಲು ನನ್ನ ಮತ್ತು ಪಲ್ಲವಿ ಅವರ ಮುಖಾಮುಖಿ ಆಗಿದ್ದು ಆರ್ಕೆಸ್ಟ್ರಾದಲ್ಲಿ. ಕಾಮಿಡಿ ಕಿಲಾಡಿ ಶೋಗೂ ಹೋಗಿರಲಿಲ್ಲ. ಅಂದರೆ 2016ರಿಂದಲೇ ಪರಿಚಯ. ಇಬ್ಬರೂ ಫ್ರೆಂಡ್ಸ್‌ ಆದ್ವಿ. ಅದಾದ ಮೇಲೆ ಆ ಸ್ನೇಹದ ಗಾಢತೆ ಹೆಚ್ಚಾಗುತ್ತ ಹೋಯಿತು. ಅದಾದ ಮೇಲೆ ಕಾಮಿಡಿ ಕಿಲಾಡಿಗಳೂ ಶೋಗೂ ಹೋಗಿ ಬಂದೆ. ಹೀಗಿರುವಾಗ ಒಂದು ದಿನ ನನ್ನ ಮತ್ತು ಪಲ್ಲವಿ ನಡುವೆ ಜಗಳ ಆಯ್ತು. ಮಾತಿಗೆ ಮಾತು ಬೆಳೆಯಿತು. ಹಾಗಂತ ದೂರ ಆಗಲಿಲ್ಲ. ಪಕ್ಕದಲ್ಲಿಯೇ ಕೂತಿದ್ದಾಗಲೇ ಐ ಲವ್‌ ಯೂ ಅಂತ ಮೆಸೆಜ್‌ ಮಾಡಿದೆ. ಮೆಸೆಜ್‌ ನೋಡಿ, ಬಿದ್ದು ಬಿದ್ದು ನಕ್ಲು" ಎಂದಿದ್ದಾರೆ ಸಂಜು.

"2021ರ ಸುಮಾರಿಗೆ ಇದೇ ವಿಚಾರವನ್ನು ಎರಡೂ ಮನೆಗಳಲ್ಲಿ ಪ್ರಸ್ತಾಪ ಮಾಡಿದ್ವಿ. ಆದರೆ ಮನೆಯಲ್ಲಿ ಒಪ್ಪಲಿಲ್ಲ. ಹಾಗಾಗಿ ಹೊರಗಿನವರಿಗೆ ಕಾಣಲಿ ಅಂತ ಬ್ರೇಕಪ್‌ ಸಹ ಮಾಡಿಕೊಂಡ್ವಿ. ಆದ್ರೆ, ನಾವು ಫೋನ್‌ನಲ್ಲಿ ಟಚ್‌ನಲ್ಲಿ ಇದ್ವಿ. ಪಲ್ಲವಿ ಅವರ ಮನೆಯಲ್ಲಿ, ಗಿಡ್ಡ ಇದ್ದಾನವ, ಅವನ್ನ ಕಟ್ಕೊಂಡ್‌ ಏನ್‌ ಮಾಡ್ತಿ ಅಂತ ಬೇಡ ಅಂದ್ರು. ನಮ್ಮ ಮನೆಯಲ್ಲೂ ಮದುವೆಗೆ ಒಪ್ಪಿರಲಿಲ್ಲ. ಆಗ ಹೆಚ್ಚು ತಡ ಮಾಡದೇ, ಮನೆಯಲ್ಲಿ ಹೇಳದೇ ಇಬ್ಬರೂ ರಿಜಿಸ್ಟರ್‌ ಮದುವೆ ಮಾಡಿಕೊಂಡ್ವಿ. ಅಫಿಷಿಯಲ್‌ ಆಗಿ ಬೈಲಹೊಂಗಲದಲ್ಲಿ ನಮ್ಮ ಮದುವೆ ಆಯ್ತು" ಎಂದು ಸಂಜು ಬಸಯ್ಯ ಹೇಳಿದ್ದಾರೆ.  ( video credit :Peepal pichhar )