ಡ್ರೈವರ್ ಇಲ್ಲದೆ ಕಾರನ್ನು ಡ್ರೈವ್ ಮಾಡುತ್ತಿರುವವರು ಯಾರು? ವಿಚಿತ್ರ ಆದರೂ ಸತ್ಯ ನೋಡಿ ವಿಡಿಯೋ ವೈರಲ್

Updated: Sunday, October 18, 2020, 14:21 [IST]

ಅದು ಯಾವುದೇ ಸ್ವಯಂಚಾಲಿತ ಆಧುನಿಕ ಕಾರಲ್ಲ. ಒಂದು ಕಾಲದಲ್ಲಿ ರಸ್ತೆಯಲ್ಲಿ ರಾರಾಜಿಸಿ ಈಗ ತೆರೆ ಮರೆಗೆ ಸರಿದಿರುವ ಪ್ರೀಮಿಯರ್ ಪದ್ಮಿನಿ ಅಥವಾ ಫಿಯೆಟ್ ಕಾರು. ಸದ್ಯ ಈ ಕಾರು ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಯಾಕೆಂದರೆ, ಇದು ಸ್ವಯಂಚಾಲಿತವಾಗಿ ಸಾಗುವಂತೆ ಕಾಣುವ ದೃಶ್ಯವೊಂದು ಈಗ ವೈರಲ್ ಆಗುತ್ತಿದೆ.    

Advertisement

ಈ ಹೆದ್ದಾರಿಯಲ್ಲಿ ವಾಹನಗಳ ನಡುವೆ ಸಾಗುತ್ತಿದೆ ಅದೊಂದು ಫಿಯೆಟ್. ಆದರೆ, ಇದಕ್ಕೆ ಚಾಲಕರು ಇಲ್ಲ...! ಡ್ರೈವರ್ ಪಕ್ಕದ ಪ್ಯಾಸೆಂಜರ್ ಸೀಟ್‌ನಲ್ಲಿ ವ್ಯಕ್ತಿಯೊಬ್ಬರು ಆರಾಮದಿಂದ ಕುಳಿತಿದ್ದಾರೆ ಅಷ್ಟೇ. ಇವರ ಬಳಿ ಸ್ಟೇರಿಂಗ್ ಇಲ್ಲ. ಇವರು ನಿಶ್ಚಿಂತೆಯಿಂದ ಕುಳಿತಿದ್ದಾರೆ. ಆದರೂ ಕಾರು ಸ್ವಯಂಚಾಲಿತವಾಗಿ ಸಾಗುತ್ತಿದೆ. ಈ ದೃಶ್ಯವನ್ನು ಹಿಂದಿನ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸೆರೆ ಹಿಡಿದಿದ್ದಾರೆ.  

Advertisement

ಈ ವಾಹನದಲ್ಲಿ ಇರುವುದು ಒಬ್ಬ ವ್ಯಕ್ತಿ ಮಾತ್ರ. ಹಾಗಾದರೆ ಈ ಕಾರನ್ನು ಚಲಾಯಿಸುತ್ತಿರುವವರು ಯಾರು...? ಇದೇ ಸದ್ಯ ಕಾಡುತ್ತಿರುವ ಪ್ರಶ್ನೆ. ಸದ್ಯ ಹರಿದಾಡುತ್ತಿರುವ ಸುದ್ದಿ ಪ್ರಕಾರ ಇದು ತಮಿಳುನಾಡಿನಲ್ಲಿ ಸೆರೆಯಾದ ದೃಶ್ಯವಂತೆ.

ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”