ಚಾಮುಂಡಿ ಬೆಟ್ಟದಲ್ಲಿ ಹೊಸ ಐಷಾರಾಮಿ ಕಾರಿನ ಜೊತೆ ಕಾಣಿಸಿದ ಡಿ ಬಾಸ್ ಕುಟುಂಬ..! ಇಲ್ಲಿದೆ ವಿಡಿಯೋ

ಚಾಮುಂಡಿ ಬೆಟ್ಟದಲ್ಲಿ ಹೊಸ ಐಷಾರಾಮಿ ಕಾರಿನ ಜೊತೆ ಕಾಣಿಸಿದ ಡಿ ಬಾಸ್ ಕುಟುಂಬ..! ಇಲ್ಲಿದೆ ವಿಡಿಯೋ

ನಟ ದರ್ಶನ್ ಅವರು ಒಂದಲ್ಲ ಒಂದು ವಿಚಾರವಾಗಿ ತುಂಬಾನೇ ಸುದ್ದಿಯಲ್ಲಿರುವ ನಟ. ನಟ ದರ್ಶನ್ ಅವರ ಅಭಿನಯದ ಕಾಟೇರ ಚಿತ್ರದ ಅಪ್ಡೇಟ್ಸ್ ಇದೀಗ ಬಂದಿದೆ. ಹೌದು ದರ್ಶನ್ ಅವರ ಕಾಟೇರ ಚಿತ್ರದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ. ಅಭಿಮಾನಿಗಳು ತುಂಬಾ ಖುಷಿಯಾಗಿದ್ದು ದರ್ಶನ್ ಅವರನ್ನು ವಿಭಿನ್ನ ರೀತಿಯಲ್ಲಿ ಕಾಟೆರಾದಲ್ಲಿ ಕಂಡಿದ್ದು ಅವರಿಗೆ ತುಂಬಾನೇ ಸಂತೋಷ ಆಗಿದೆಯಂತೆ. ದರ್ಶನ್ ಅವರು ಪ್ರಾಣಿ ಪಕ್ಷಿಗಳನ್ನು ಎಷ್ಟು ಇಷ್ಟಪಡುತ್ತಾರೋ, ಅದೇ ರೀತಿ ಅವರು ಬೈಕ್ ಮತ್ತು ಕಾರುಗಳನ್ನು ಕೂಡ ಅಷ್ಟೇ ಇಷ್ಟ ಪಡುತ್ತಾರೆ.

ಮಾರ್ಕೆಟ್ ಗೆ ಹೊಸ ಕಾರು ಬಂತು ಅಂದ್ರೆ, ಅದು ದರ್ಶನ್ ಅವರಿಗೆ ಇಷ್ಟ ಆಯ್ತು ಅಂದ್ರೆ ಸಾಕು ಡಿ ಬಾಸ್ ಅದನ್ನ ಖರೀದಿಸುತ್ತಾರೆ. ಚಾಮುಂಡೇಶ್ವರಿ ಬೆಟ್ಟದಲ್ಲಿ ಇದೀಗ ಕಾಣಿಸಿಕೊಂಡಿರುವ ದರ್ಶನ್, ಪೂರ ಕುಟುಂಬ ಸಮೇತ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬಂದಿದ್ದರು.. ಹೌದು ಈ ವೇಳೆ ಅಭಿಮಾನಿಗಳಿಗೆ ಹೊಸದಾದ ಒಂದು ವಿಚಾರವನ್ನು ತಿಳಿಸಿದ್ದಾರೆ ಡಿ ಬಾಸ್. ಅದು ಏನ್ ಅಂತೀರಾ ಅಂದ್ರೆ ಅದೇ ಕಾಟೇರ ಚಿತ್ರದ ಫಸ್ಟ್ ಪೋಸ್ಟರ್ ವಿಚಾರ. ಜೊತೆಗೆ ದರ್ಶನ್ ಅವರ ಪತ್ನಿ ವಿಜಯ್ ಲಕ್ಷ್ಮಿ, ಅವರ ಮಗ ವಿನೀಶ್ ಅವರೊಟ್ಟಿಗೆ ಕುಟುಂಬ ಸಮೇತ ಚಾಮುಂಡಿ ದೇವಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ದರ್ಶನ್ ಅವರು ಇನ್ನೊಂದು ಹೊಸದಾದ ಕಾರನ್ನ ಖರೀದಿ ಮಾಡಿದ್ದಾರೆ. 

ಅದ್ರಲ್ಲಿಯೇ ದೇವಸ್ಥಾನಕ್ಕೆ ಭೇಟಿ ನೀಡಿ ಕಾರಿಗೆ ವಿಶೇಷ ಪೂಜೆ ಮಾಡಿಸಿದರು. ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನ ಕೊಂಡುಕೊಂಡಿದ್ದಾರಂತೆ.. ಫ್ಯಾಮಿಲಿ ಸಮೇತ ಕಾಣಿಸಿಕೊಂಡ ಡಿ ಬಾಸ್ ಅವರನ್ನು ದೇವಸ್ಥಾನದಲ್ಲಿ ನೋಡಿ ಅಭಿಮಾನಿಗಳು ಹೆಚ್ಚು ಖುಷಿಯಾದ್ರು ಎಂದು ಹೇಳಬಹುದು. ಇಲ್ಲಿದೆ ನೋಡಿ ವಿಡಿಯೋ, ಒಮ್ಮೆ ನೋಡಿ ಇಷ್ಟ ಆದ್ರೆ ಶೇರ್ ಮಾಡಿ, ಧನ್ಯವಾದಗಳು... ( video credit : Kannada Taja Suddi )