ಎರಡನೇ ವಾರದಲ್ಲಿ ದೊಡ್ಡ ಮನೆಯಿಂದ ಹೋರ ಬೀಳುವ ಸ್ಪರ್ಧಿ ಇವರೇ ನೋಡಿ !!

ಎರಡನೇ ವಾರದಲ್ಲಿ ದೊಡ್ಡ ಮನೆಯಿಂದ ಹೋರ ಬೀಳುವ ಸ್ಪರ್ಧಿ ಇವರೇ ನೋಡಿ !!

ಇನ್ನೂ ನಮ್ಮ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಕನ್ನಡ. ಇನ್ನೂ ಹಿಂದಿಯ ಅವತರಣಿಕೆಯಲ್ಲಿ ಶುರುವಾದ ಈ ಶೋ ಈಗ ಎಲ್ಲಾ ಭಾಷೆಯಲ್ಲಿ ಕೂಡ  ಮೋಡಿ ಬರುತ್ತಿದೆ. ಇನ್ನೂ ಈ ಶೋ ಎಲ್ಲಾ ಭಾಷೆಯಲ್ಲಿ ಕೂಡ ಎರಡಂಕಿ ಸೀಸನ್ ಶುರುವಾಗಿದೆ. ಇನ್ನೂ ನಮ್ಮ ಕನ್ನಡದಲ್ಲಿ ಕೂಡ ಈ ಬಾರಿ ಎರಡನೇ ಅಂಕಿಯ ಸೀಸನ್ ಎಂದ್ರೆ ಅದು ಸೀಸನ್ 10 ಶುರುವಾಗಿ ಒಂದು ತಿಂಗಳು ಕಳೆದಿದೆ. ಇನ್ನೂ ಈ ಬಾರಿಯ ದಶಕದ ಸೀಸನ್ ಆಗಿರುವ ಕಾರಣದಿಂದ ಸಾಕಷ್ಟು ಟ್ವಿಸ್ಟ್ ಗಳನ್ನ ಒಳಗೊಂಡಿದೆ ಎಂದು ಈಗಾಗಲೇ ಅನಾವರಣ ಆಗಿದೆ. ಇನ್ನೂ ಈ ಕನ್ನಡ ಬಿಗ್ ಬಾಸ್ ಗ್ರಾಂಡ್ ಓಪನಿಂಗ್ ದಿನವೇ ದೊಡ್ಡ ಟ್ವಿಸ್ಟ್ ನೀಡಿತ್ತು. ಆ ಟ್ವಿಸ್ಟ್ ಜನರ ವೋಟಿಂಗ್ ಪಡೆದುಕೊಂಡರೆ ಮನೆಯ ಪ್ರವೇಶ. ಹಾಗಾಗಿ ಈ ಹೊಸ ಪ್ರಕ್ರಿಯೆ ಶುರುವಾದ ಕಾರಣ ಜನರ ವೋಟಿಂಗ್ ಪಡೆದುಕೊಂಡು ಅರ್ಹತೆ ಎಂದು ಗುರುತಿಸಿಕೊಂಡರೆ ಮಾತ್ರ ದೊಡ್ಡ ಮನೆಯ ಪ್ರವೇಶ ಸಾಧ್ಯವಾಗಿತ್ತು. 

ಇನ್ನೂ ಅದ್ರ ಅನುಸಾರವಾಗಿ ವೇದಿಕೆಯಿಂದ ಅನರ್ಹರು ಎಂದು ಗುರುತಿಸಿಕೊಂಡ ಮೂರು ಜನರು ನಿರಾಸೆಯಿಂದ ಮನೆಗೆ ತೆರಳಿದರು. ಇನ್ನೂ ಆರು ಮಂದಿ ಹೋಲ್ಡ್ ನಲ್ಲಿ ಇಟ್ಟು ಡೇಂಜರ್ ಜೋನ್ ನಿಂದಾ ಮನೆಗೆ ಪ್ರವೇಶ ನೀಡಿದ್ದರು. ಈಗ ಅವರು ಕೂಡ ಒಂದು ವಾರದ ಕಾಲ ಅನರ್ಹರು ಎಂದು ಗುರುತಿಸಿಕೊಂಡು ಮನೆಗೆ ಪ್ರವೇಶ ನೀಡಿ ಆ  ನಂತರ ಬಿಗ್ ಬಾಸ್ ನೀಡಿದ ಎಲ್ಲಾ ಚ್ಯಾಲೆಂಜ್ ಗಳನ್ನ ಎದುರಿಸಿ ಈಗ ಅರ್ಹರು ಎಂದು ಗುರುತಿಸಿಕೊಂಡಿದ್ದಾರೆ. ಈಗ ಎರಡನೇ ವಾರದ ಅಂತ್ಯದಲ್ಲಿ ಕೂಡ ಬಿಗ್ ಬಾಸ್ ಯಶಸ್ಸಿನ ದಾರಿಯಲ್ಲಿ ಇದ್ದು ಟ್ವಿಸ್ಟ್ ಮೂಲಕ  ಜನರ ಹೈಪ್ ಪಡೆದುಕೊಳ್ಳುತ್ತಿದೆ. ಇನ್ನೂ ಸೀಸನ್ 10ರ ಹೈಪ್ ನಿಂದಾ ಎರಡನೇ ಬಾರದ ಅಂತ್ಯಕ್ಕೆ ಬಂದಿರುವ ಬಿಗ್ ಬಾಸ್ ಈಗ ಎರಡನೇ ವಾರದಲ್ಲಿ ಯಾರು ಮನೆಯಿಂದ ಹೋರ ಬಿಳಲಿದ್ದಾರೆ  ಎಂದು ಎಲ್ಲರಲ್ಲೂ ದೊಡ್ಡ ಪ್ರಶ್ನೆ ಕಾಡುತ್ತಿದೆ.


ಇನ್ನೂ ಬಿಗ್ ಬಾಸ್ ಮೊದಲನೇ ವಾರದಲ್ಲಿ ಯಾವ ಕ್ಷೇತ್ರದಲ್ಲಿ ಗುರುತಿಸಿಕೊಳ್ಳದ ಸ್ನೇಕ್ ಶ್ಯಾಮ್ ಅವರು ಅತಿ ಕಡಿಮೆ ವೋಟ್ ಪಡೆದುಕೊಂಡ ಕಾರಣದಿಂದ ಮನೆಯಿಂದ ಹೊರಬಿದ್ದರು. ಈಗ ಎರಡನೇ ವಾರಕ್ಕೆ ನಾಮಿನೇಟ್ ಆಗಿರುವ "ಸಂಗೀತ, ಕಾರ್ತಿಕ್, ತನಿಷ, ಭಾಗ್ಯಶ್ರೀ, ಹಾಗೂ ಗೌರೀಶ್" ಅವರ ಪೈಕಿ ಯಾರೊಬ್ಬರೂ ದೊಡ್ಡ ಮನೆಯಿಂದ ಗೇಟ್ ಪಾಸ್ ಪಡೆದುಕೊಳ್ಳಲಿದ್ದಾರೆ ಎಂದು ಸಾಮಾಜಿಕ ಜಾಲತಣಗಳಲ್ಲಿ ಸುದ್ದಿ ಓಡಾಡುತ್ತಿದೆ. ಇನ್ನೂ ಸಂಗೀತ, ಕಾರ್ತಿಕ್ ಹಾಗೂ ತನಿಶಾ ಅವರು ಎಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ಟಾಸ್ಕ್ ವಿಷಯದಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. ಆದರೆ "ಗೌರೀಶ್ ಹಾಗೂ ಭಾಗ್ಯಶ್ರೀ" ಅವರು ಯಾವ ಕ್ಷೇತ್ರದಲ್ಲಿ ಕೂಡ ಗುರುತಿಸಿಕೊಳ್ಳದೆ ಮನೆಯ ಮಂದಿಯ ಜೊತೆ ಕೊಡ ಬೇರೆಯದೇ ಇರುವ ಕಾರಣದಿಂದ ಇವರಿಬ್ಬರಲ್ಲಿ ಒಬ್ಬರು ಮನೆಯಿಂದ ಹೊರ ಬೀಳಲಿದ್ದಾರೆ ಎಂದು ಎಲ್ಲರೂ ಅಭಿಪ್ರಾಯ ಹೊರಹಾಕಿದ್ದಾರೆ. ಆದ್ರೆ ಎರಡನೇ ವಾರದ ಎರಡನೇ ಸ್ಪರ್ಧಿಯಾಗಿ ಭಾಗ್ಯಶ್ರೀ ಅವರು ಅತಿ ಕಡಿಮೆ ವೋಟ್ ಪಡೆದು ಮನೆಯಿಂದ ಹೋರ ಬಿದ್ದಿದ್ದಾರೆ.