ಸಿಹಿಸುದ್ದಿ: ಜನವರಿ 1 ರಿಂದ ಚಿನ್ನದ ಆಭರಣಗಳ ಹೊಸ ನಿಯಮ ಜಾರಿಗೆ

Updated: Thursday, November 19, 2020, 16:52 [IST]

ನಮ್ಮ ಸಂಪ್ರದಾಯದಲ್ಲಿ ಚಿನ್ನಕ್ಕೆ ತನ್ನದೇ ಆದ ಮಹತ್ವ ಇದೆ. ಚಿನ್ನ ನಮ್ಮ ಪ್ರತಿ ಹಬ್ಬ ಹುಣ್ಣಿಮೆಯಲ್ಲೂ ಕೂಡ ಧರಿಸಲು ಇಷ್ಟಪಡುತ್ತಾರೆ. ಬಂಗಾರವನ್ನು ಕೇವಲ ಸುರಕ್ಷಿತ ಹೂಡಿಕೆ ಎಂದು ಮಾತ್ರವಲ್ಲ ಬದಲಾಗಿ ತಮ್ಮ ಸ್ಟೇಟಸ್ ಎಂದು ಕೂಡ ಹಲವಾರು ಜನ ಬಯಸುತ್ತಾರೆ. ಹೀಗೆ ಭಾರತ ಅತಿದೊಡ್ಡ ಬಂಗಾರದ ಮಾರುಕಟ್ಟೆ ಆಗಿದೆ. ಭಾರತದ ಚಿನ್ನದ ಮಾರುಕಟ್ಟೆ ಎಷ್ಟು ದೊಡ್ಡದಾಗಿದೆಯೋ ಅದೇ ರೀತಿ ಇಲ್ಲಿ ನಕಲಿ ಚಿನ್ನದ ಹಾವಳಿ ಕೂಡ ಅಷ್ಟೇ ಇದೆ. ಚಿನ್ನದ ಕಳಪೆ ಗುಣಮಟ್ಟ ಕೂಡ ಜನರಿಗೆ ಗುರುತಿಸಲು ಕಷ್ಟವಾಗುತ್ತಿದೆ.

 

Advertisement

ಎಷ್ಟೋ ಜನರು ಇವತ್ತಿಗೂ ಕೂಡ ತಮ್ಮ ಹಣಕ್ಕೆ ಉತ್ತಮ ಗುಣಮಟ್ಟದ ಚಿನ್ನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಚಿನ್ನದ ಗುಣಮಟ್ಟದ ಬಗ್ಗೆ ಸರ್ಕಾರ ವಿಶೇಷ ಕಾಳಜಿ ಬಹಳ ಹಿಂದಿನಿಂದಲೂ ವಹಿಸಿತ್ತು. ಚಿನ್ನವನ್ನು ಖರೀದಿಸುವಾಗ, ಮನಸ್ಸಿನಲ್ಲಿರುವ ದೊಡ್ಡ ಪ್ರಶ್ನೆಯೆಂದರೆ ಚಿನ್ನದ ಗುಣಮಟ್ಟದ ಬಗ್ಗೆ. ಆದರೆ ಶೀಘ್ರದಲ್ಲೇ ಈ ಚಿಂತೆ ಸಂಪೂರ್ಣವಾಗಿ ಮುಗಿಯುತ್ತದೆ. ಮುಂದಿನ ವರ್ಷದಿಂದ ಮೋದಿ ಸರ್ಕಾರ ದೇಶಾದ್ಯಂತ ಹಾಲ್‌ಮಾರ್ಕ್ ಚಿನ್ನದ ನಿಯಮಗಳನ್ನು ಜಾರಿಗೆ ತರಲಿದೆ. 2020 ರ ಜನವರಿಯಲ್ಲಿ ಚಿನ್ನದ ಆಭರಣಗಳಲ್ಲಿ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ. ಈಗ ಇಡೀ ದೇಶದಲ್ಲಿ 1  ಜನವರಿ 2021 ರಿಂದ ಚಿನ್ನದ ಹಾಲ್ಮಾರ್ಕಿಂಗ್ ಕಡ್ಡಾಯವಾಗಲಿದೆ.

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ ಕರೆ ಮಾಡಿ 85489 98564

ಹೊಸ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಕೂಡ ಜಾರಿಗೆ ಬಂದಿದೆ. ಈ ಹೊಸ ನಿಯಮವು ಚಿನ್ನಾಭರಣಕ್ಕೂ ಅನ್ವಯಿಸುತ್ತದೆ. ಈ ಹೊಸ ಕಾನೂನು ಜಾರಿಗೆ ಬಂದ ನಂತರ ಆಭರಣ ವ್ಯಾಪಾರಿ ನಿಮಗೆ ಮೋಸ ಮಾಡಿದರೆ ನೀವು ನಿಮ್ಮ ದೂರನ್ನು ಸಲ್ಲಿಸಬಹುದು. ಇದರ ಆಧಾರದ ಮೇಲೆ ನಿಮ್ಮ ದೂರು ನಿಜವೆಂದು ಸಾಬೀತಾದರೆ ಆಭರಣ ವ್ಯಾಪಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಹೊಸ ನಿಯಮಗಳ ಪ್ರಕಾರ ಆಭರಣ ವ್ಯಾಪಾರಿ 22 ಕ್ಯಾರೆಟ್ ಚಿನ್ನವನ್ನು ಹೇಳುವ ಮೂಲಕ 18 ಕ್ಯಾರೆಟ್ ಚಿನ್ನವನ್ನು ಮಾರಾಟ ಮಾಡಿದ ದಂಡ ಮತ್ತು ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

 

2021 ರ ಜನವರಿ 15 ರಿಂದ ಚಿನ್ನದ ಆಭರಣಗಳ ಕಡ್ಡಾಯ ಹಾಲ್ಮಾರ್ಕಿಂಗ್ ಅನ್ವಯವಾಗಲಿದೆ ಎಂದು ತಿಳಿಸಿ ಕೇಂದ್ರ ಸರ್ಕಾರ ಈ ವರ್ಷದ ಜನವರಿಯಲ್ಲಿ ಅಧಿಸೂಚನೆ ಹೊರಡಿಸಿತ್ತು, ಆದರೆ ಈ ವರ್ಷದ ಜುಲೈ ತಿಂಗಳಲ್ಲಿ ಕೇಂದ್ರ ಸರ್ಕಾರವು ಇದನ್ನು 2021 ಜೂನ್ 1 ರಿಂದ ಜಾರಿಗೆ ತಂದಿತ್ತು. ಕೇಂದ್ರ ಸರ್ಕಾರವು ಆಭರಣ ವ್ಯಾಪಾರಿಗಳಿಗೆ ಒಂದು ವರ್ಷ ಕಾಲಾವಕಾಶ ನೀಡಿದೆ, ಈ ಮಧ್ಯೆ ಆಭರಣಕಾರರು ತಮ್ಮ ಹಳೆಯ ದಾಸ್ತಾನು ತೆರವುಗೊಳಿಸಬೇಕಾಗುತ್ತದೆ. ದೇಶದಲ್ಲಿ ಹಾಲ್ಮಾರ್ಕಿಂಗ್ ಕೇಂದ್ರಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಪ್ರಸ್ತುತ ದೇಶದಲ್ಲಿ ಸುಮಾರು 900 ಹಾಲ್‌ಮಾರ್ಕಿಂಗ್ ಕೇಂದ್ರಗಳಿವೆ, ಇದನ್ನು ಇನ್ನಷ್ಟು ಹೆಚ್ಚಿಸಲಾಗುತ್ತಿದೆ. ಒಟ್ಟಾರೆ ಬಂಗಾರ ಪ್ರಿಯರಿಗೆ ಚಿನ್ನ ಸುಲಭವಾಗಿ ಖರೀದಿಸಲು ಇನ್ಮೇಲೆ ಸಾಧ್ಯವಾಗಲಿದೆ.