ಮನಿಷಾ ಈ ಸಾವು ಎಷ್ಟು ನ್ಯಾಯವೇ? ಭಯಾನಕ ಘಟನೆಯ ಬಗ್ಗೆ ತಿಳಿಯಿರಿ

Updated: Thursday, October 1, 2020, 15:51 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಸೆಪ್ಟಂಬರ್ 14ರಂದು ಮನಿಷಾ ಎನ್ನುವ ಉತ್ತರ ಪ್ರದೇಶದ 19 ವರ್ಷದ ಹುಡುಗಿ ,ಪ್ರಾಣಿಗಳಿಗಾಗಿ ಮೇವು ತರಲು ಹೊರಗಡೆ ಹೋದ ಸಮಯದಲ್ಲಿ ಮೇಲ್ಜಾತಿಯ ನಾಲ್ಕು ಯುವಕರು ಈಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದು, ನಾಲಗೆಯನ್ನು ಕತ್ತರಿಸಿ ಬೆನ್ನುಮೂಳೆಗೆ ಪೆಟ್ಟು ಕೊಟ್ಟು ಚಿತ್ರಹಿಂಸೆ ಕೊಟ್ಟು ದುಪ್ಪಟ್ಟಿನಿಂದ ಸಾಯಿಸಲು ಪ್ರಯತ್ನಿಸಿದ್ದರು ಎಂದು ಮಾಧ್ಯಮ ಮೂಲಕ ಈ ಘಟನೆಯ ವಿಷಯ ಹೊರಬಿದ್ದಿತ್ತು. 

Advertisement

ಮತ್ತು 19 ವರ್ಷದ ಮನಿಷಾ ಎನ್ನುವ ಉತ್ತರ ಪ್ರದೇಶದ ಹುಡುಗಿ ದಲಿತ ಜಾತಿಯವರು ಎಂದು ತಿಳಿದುಬಂದಿದೆ. ಮತ್ತು ದಿನೇ ದಿನೇ ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಘಟನೆಗಳು ಕೇಳಿಬರುತ್ತಲಿವೆ. ಅತ್ಯಾಚಾರ ಘಟನೆ ನಡೆದ ಬಳಿಕ ಮೇಲ್ಜಾತಿಯ 4 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದದ್ದು ಜೈಲಿಗೆ ಹಾಕಿದ್ದಾರೆ. ಆದರೆ ಅತ್ಯಾಚಾರಕ್ಕೊಳಗಾದ ಉತ್ತರಪ್ರದೇಶದ ಮನಿಷಾ ಹುಡುಗಿ ಪರಿಸ್ಥಿತಿ ಊಹೆ ಮಾಡಿಕೊಳ್ಳದ ಹಾಗೆ  ಚಿತ್ರಹಿಂಸೆ ನೀಡಿದ್ದಾರೆ ಎಂದು ತಿಳಿದುಬಂದಿದ್ದು, ತದನಂತರ ಈಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿ ಆದರೆ ಸತತ ಎರಡು ವಾರಗಳಿಂದ ಚಿಕಿತ್ಸೆ ನೀಡಿದರು, ಯಾವುದೇ ಪ್ರಯೋಜನವಾಗದೇ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಿಂದ ತಿಳಿದುಬಂದಿದೆ. 

Advertisement

 ಈ ವಿಷಯ ತಿಳಿದ ಬಳಿಕ ಅತ್ಯಾಚಾರ ಮಾಡಿದ ಆ ನಾಲ್ವರು ಆರೋಪಿಗಳನ್ನು ಈಗಾಗಲೇ ಜೈಲಿನಲ್ಲಿ ಇರಿಸಿದ್ದು ಇವರಿಗೆ ಕಠಿಣ ಶಿಕ್ಷೆ ಕೊಡಿ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ.ಮತ್ತು ಈ ನಾಲ್ವರನ್ನು ಗಲ್ಲಿಗೆ ಏರಿಸಿ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಜೊತೆಗೆ ಈಕೆಗೆ ಆಗಿರುವ ಅನ್ಯಾಯಕ್ಕೆ ಮತ್ತು ಸಾವಿಗೆ ನ್ಯಾಯ ಕೊಡಿಸಿ ಎಂದು ಸಾಕಷ್ಟು ಜನರು ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನಲಾಗಿದೆ. 

Advertisement

 ಇದೇ ವಿಷಯವಾಗಿ ಮಾತನಾಡಿದ ಯುಪಿ ಸಚಿವ ಸಿದ್ದಾರ್ಥ್ ಸಿಂಗ ನಾಥ್ ಏನ್ ಹೇಳಿದ್ದಾರೆ ಗೊತ್ತಾ? ಮುಂದೆ ಓದಿ “ಈ ಘಟನೆ ತುಂಬಾ ದುಃಖಕರವಾಗಿದೆ.  ನಮ್ಮ ಸರ್ಕಾರ ಬಲಿಪಶುವಿನ ಕುಟುಂಬದೊಂದಿಗೆ ನಿಂತಿದೆ. ಕೂಡಲೇ ತನಿಖೆ ಆರಂಭಿಸಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.  ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನು ತನ್ನ ಹಾದಿಯನ್ನು ಹಿಡಿಯುತ್ತದೆ ”ಎಂದು ಯುಪಿ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿದ್ದಾರೆ... ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ .ಜೊತೆಗೆ ಅತ್ಯಾಚಾರ ಮಾಡಿದ ಈ ನಾಲ್ವರಿಗೂ ಗಲ್ಲು ಶಿಕ್ಷೆ ಆಗುವ ವರೆಗೂ ಮತ್ತು ಈಕೆಗೆ ನ್ಯಾಯ ಸಿಗುವವರೆಗೂ ಈ ವಿಷಯವನ್ನು ಎಲ್ಲರೂ ಶೇರ್ ಮಾಡಿ ,ಮತ್ತು ಮನಿಷಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಾಮೆಂಟ್ ಮಾಡಿ ಓಂ ಶಾಂತಿ...