ಗುಡ್ ನ್ಯೂಸ್ : ಜನ ಸಾಮಾನ್ಯರಿಗೆ ಈ ಕೊರೊನ ಲಸಿಕೆ ಬೆಲೆ ಎಷ್ಟು ಗೊತ್ತಾ..? ಆರೋಗ್ಯ ಸಚಿವ ಹೇಳಿದ್ದೇನು ನೋಡಿ..!

Updated: Saturday, January 16, 2021, 18:42 [IST]

ಹೌದು ಇಂದು ಬೆಂಗಳೂರಿನಲ್ಲಿ ಕೊರೋನಾ ಲಸಿಕೆ ವಿತರಣೆ ಆರಂಭವಾಗಿದ್ದು, 247 ಕೇಂದ್ರಗಳಲ್ಲಿ 24 ಸಾವಿರ 700 ಜನಕ್ಕೆ ಲಸಿಕೆಯನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಬೆಂಗಳೂರಿನಲ್ಲಿ ಹೇಳಿಕೊಂಡರು. ಹೌದು ಈ ಕರೋನಾ ಲಸಿಕೆಯನ್ನು ಕೇವಲ 10 ದಿನಗಳಲ್ಲಿ ಕಂಡುಹಿಡಿಯಲಾಗಿದೆ, ಮತ್ತು ಇಪ್ಪತ್ತರಿಂದ ಮೂವತ್ತು ಸಾವಿರ ಕ್ಲಿನಿಕಲ್ ಟ್ರಯಲ್ ಕೂಡ ಆಗಿದ್ದು, ವಿದೇಶಗಳಲ್ಲಿಯು ಕೂಡ ಈ ಲಸಿಕೆ ಬೇಡಿಕೆಯಾಗಿದೆ.   

ಮುಂದಿನ ದಿನಗಳಲ್ಲಿ ಇಡೀ ಕರ್ನಾಟಕ ರಾಜ್ಯಾದ್ಯಂತ ಕರೋನ ಲಸಿಕೆಯನ್ನು ಹಂತ ಹಂತವಾಗಿ ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ, ಎಂದು ಭರವಸೆ ಮಾತುಗಳನ್ನು ಆಡಿದರು. ಜೊತೆಗೆ ಬೆಂಗಳೂರಿನ ಆಸ್ಪತ್ರೆಯ ಡಾಕ್ಟರ್ ಸುದರ್ಶನ್ ಅವರು ಜನರ ಆತಂಕ ದೂರ ಮಾಡುವುದಕ್ಕೆ ಮೊದಲು ಈ ಲಸಿಕೆಯನ್ನು ತೆಗೆದುಕೊಂಡರು. ಮತ್ತು ಕೇವಲ 210 ರೂಪಾಯಿಗೆ ಈ ಕರೋನ ಲಸಿಕೆ ದೊರೆಯುತ್ತಿದೆ ಖುಷಿ ಪಡೋಣ, ಎಂದರು. ಕರೋನವೈರಸ್ ದೂರಮಾಡುವ ಸಾಹಸಕ್ಕೆ ಆರೋಗ್ಯ ಸಚಿವ ಡಾಕ್ಟರ್ ಸುಧಾಕರ್ ಅವರು ಕೈ ಹಾಕಿದ್ದಾರೆ.     

ಜೊತೆಗೆ ಈ ವಿಷಯಕ್ಕೆ ಸ್ಪಂದಿಸಿ ಸಹಕಾರ ಕೊಟ್ಟ ನಮ್ಮ ದೇಶದ ಪ್ರದಾನ ಮಂತ್ರಿ ನರೇಂದ್ರ ಮೋದಿಯವರಿಗೂ, ಮತ್ತು ರಾಜ್ಯದ ಬಿಎಸ್ ಯಡಿಯೂರಪ್ಪನವರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂಬುದಾಗಿ ಹೇಳಿದರು. ಈ ಕೊರೊನ ಲಸಿಕೆ ಕೇವಲ 210 ರೂ. ಸಿಗಲಿದ್ದು ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ, ಹಾಗೆ ಶೇರ್ ಮಾಡಿ ಧನ್ಯವಾದಗಳು....