ನನಗಿಲ್ಲಿ ಉಸಿರಾಡಲೂ ಕಷ್ಟವಾಗುತ್ತಿದೆ' ಎಂದು ಹೇಳಿ ಪ್ರಾಣ ಬಿಟ್ಟ ಮಗ..! ಮಗ ಕಳಿಸಿದ ವಿಡಿಯೋ ನೋಡಿ ಗಳಗಳನೇ ಅತ್ತ ತಂದೆ..!

Updated: Tuesday, June 30, 2020, 17:02 [IST]

ಹೌದು ಕೊರೊನ ಹಿನ್ನೆಲೆಯಲ್ಲಿ 34 ವರ್ಷದ ಒಬ್ಬ ತಂದೆಯ ಮಗ, ಆಸ್ಪತ್ರೆಗೆ ಸೇರಿ ಸರಿಯಾದ ರೀತಿಯಲ್ಲಿ ಆಕ್ಸಿಜನ್ ನೀಡುತ್ತಿಲ್ಲ, ಎಂದು ತನ್ನ ತಂದೆಗೆ ವಿಡಿಯೋ ಮೆಸೇಜ್ ಒಂದನ್ನು ಕಳಿಸಿ ಪ್ರಾಣ ಬಿಟ್ಟ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಎಸ್ ವಿಪರೀತ ಜ್ವರ ಮತ್ತು ನೆಗಡಿ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, 34 ವರ್ಷದ ಮಗನನ್ನು ಹೈದರಾಬಾದ್ ನ ಖಾಸಗಿ ಅಸ್ಪತ್ರೆಗೆ ಈತನ ತಂದೆ ಸೇರಿಸಲು ಪ್ರಯತ್ನ ಪಟ್ಟು. 

ಕೊನೆಗೆ ಎಲ್ಲಾ ಕೊರೊನ ಹಿನ್ನೆಲೆಯಲ್ಲಿ ಭಯ ಇರುವ ಕಾರಣ, ಖಾಸಗಿ ಆಸ್ಪತ್ರೆಗೆ ಸೇರಿಸಲಾಗಲಿಲ್ಲ, ತದನಂತರ ಸರಕಾರಿ ಅಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಈತನ ತಂದೆ ಸೇರಿಸಿದ ಬಳಿಕ, 34 ವರ್ಷದ ಈತ ಒಂದು ವಿಡಿಯೋ ಮಾಡಿ ಯಾವ ರೀತಿ ಹೇಳಿದ್ದಾರೆ ಗೊತ್ತಾ, ಮುಂದೆ ಓದಿ "ನನಗಿಲ್ಲಿ ಉಸಿರಾಡಲೂ ಕಷ್ಟವಾಗುತ್ತಿದೆ, ನನಗೆ ಆಕ್ಸಿಜನ್​ ನೀಡುವಂತೆ 3 ಗಂಟೆಗಳಿಂದ ವೈದ್ಯರು, ನರ್ಸ್​ಗಳ ಬಳಿ ಬೇಡಿಕೊಳ್ಳುತ್ತಿದ್ದೇನೆ. ಆದರೆ, ಅವರು ನನ್ನ ಮಾತನ್ನೇ ಕೇಳಿಸಿಕೊಳ್ಳುತ್ತಿಲ್ಲ. 

ನನ್ನ ಹೃದಯ ಬಡಿತ ನಿಂತು ಹೋಗುತ್ತಿದೆ ಎಂದೆನಿಸುತ್ತಿದೆ. ಎಲ್ಲರಿಗೂ ಬೈ, ಬೈ ಅಪ್ಪಾ" ಎಂದು ಆತ ಅಪ್ಪನಿಗೆ ವಿಡಿಯೋ ಮಾಡಿ ಕಳಿಸಿದ ಬಳಿಕ, ವಿಡಿಯೋ ಕಳಿಸಿದ ಬಳಿಕ ಕೇವಲ ಒಂದು ಗಂಟೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ತದನಂತರ ಮಗನ ಎಲ್ಲಾ ಅಂತ್ಯ ಕ್ರಿಯೆ ಮುಗಿದ ಬಳಿಕ, ವೈದ್ಯಕೀಯ ರಿಪೊರ್ಟ್ ನಲ್ಲಿ ವ್ಯಕ್ತಿಗೆ ಕೊರೊನ ಇದ್ದಿದ್ದು ದೃಢಪಟ್ಟಿದ್ದು, ಮನೆಗೆ ಹೋಗಿ ಮೊಬೈಲ್ ನೋಡಿದ ತಂದೆ ಮಗನ ವಿಡಿಯೋ ನೋಡಿ ಕಣ್ಣೀರು ಇಟ್ಟು, ತದನಂತರ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಈ ರೀತಿ ನನ್ನ ಮಗ ಸಾವನ್ನಪ್ಪಿದ್ದಾರೆ ಎಂದು ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಮತ್ತು ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ...