ಹುಷಾರು : ಮಾಸ್ಕ್ ಹಾಕದೆ ದಂಡ ಕಟ್ಟದಿದ್ರೆ ಠಾಣೆಗೆ ಕರೆದೊಯ್ದು ಕೇಸ್!. ಜೇಬಲ್ಲಿ ದುಡ್ಡು ಇರಲಿ

Updated: Sunday, October 4, 2020, 11:49 [IST]

ನಿಮಗೆ  ಗೊತ್ತಿರುವ ಹಾಗೆ ಕೊರೋನಾ ಕರ್ನಾಟಕದಲ್ಲಿ ವ್ಯಾಪಕವಾಗಿ ಹರಡುತ್ತಿದೆ.  ಇದನ್ನು ತಡೆಗಟ್ಟಲು ನಮ್ಮ ರಾಜ್ಯ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ.  ಮತ್ತು ಮೊನ್ನೆ ತಾನೆ ಮಾಸ್ಕ್ ಹಾಕಿಲ್ಲ ಎಂದರೆ ಬೆಂಗಳೂರಿನಲ್ಲಿ ಸಾವಿರ ರೂಪಾಯಿ ದಂಡ ಮತ್ತು ಗ್ರಾಮೀಣ ಪ್ರದೇಶದಲ್ಲಿ 500 ದಂಡ ಎಂದು ಘೋಷಿಸಿತ್ತು.   ಈಗ ಮತ್ತೊಂದು ರೂಲ್ಸ್ ಅನ್ನು ಜಾರಿಮಾಡಿದೆ.  ಪೊಲೀಸರು ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಸ್ಥಳದಲ್ಲೇ ಒಂದು ಸಾವಿರ ರೂ. ದಂಡ ಕಟ್ಟಲು ಯಾರು ಸಿದ್ಧರಾಗುವುದಿಲ್ಲವೋ ಅವರನ್ನು ಕೂಡಲೇ ಪೊಲೀಸ್ ಠಾಣೆಗೆ ಕರೆದೊಯ್ದು ವಿಪತ್ತು ನಿರ್ವಹಣೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.     

Advertisement

ಮಾಸ್ಕ್ ಹಾಕದವರನ್ನು ಹಿಡಿದ ತಕ್ಷಣ ಅವರ ಮೊಬೈಲ್ ನಂಬರ್ ಮತ್ತು ಹೆಸರು, ವಿಳಾಸ ಮುಂತಾದ ವಿವರಗಳನ್ನು ಮಾರ್ಷಲ್‌ಗಳು ದಾಖಲಿಸಿಕೊಳ್ಳುತ್ತಾರೆ. ದಂಡ ಕಟ್ಟಿದರೆ ಸ್ಥಳದಲ್ಲೇ ಒಟಿಪಿ ಬರುವ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ. ಠಾಣೆಯವರೆಗೆ ಹೋದವರು ನೋಟಿಸ್ ಪಡೆದು ಕೋರ್ಟ್‌ನಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ. ಈ ಎಲ್ಲ ಅಧಿಕಾರವನ್ನು ಬೆಂಗಳೂರಿನಲ್ಲಿ ಮಾರ್ಷಲ್‌ಗಳು ಮತ್ತು ಪೊಲೀಸರಿಗೆ ನೀಡಲಾಗಿದ್ದು, ಗ್ರಾಮೀಣ ಭಾಗದಲ್ಲಿ ಪಂಚಾಯ್ತಿ ಅಧಿಕಾರಿಗಳಿಗೆ ನೀಡಲಾಗಿದೆ.   

Advertisement

 ದ್ವಿಚಕ್ರವಾಹನ ಓಡಿಸುವಾಗ ಇಬ್ಬರಿದ್ದು ಮಾಸ್ಕ್ ಹಾಕಿರದಿದ್ದರೆ ದಂಡ ವಿಧಿಸಲಾಗುತ್ತದೆ. ಒಬ್ಬರೇ ಇದ್ದು ಹೆಲ್ಮೆಟ್ ಧರಿಸಿದ್ದರೆ ದಂಡ ವಿಧಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.     ಠಾಣೆಯವರೆಗೆ ಹೋದವರು ನೋಟಿಸ್ ಪಡೆದು ಕೋರ್ಟ್‌ನಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ. .

 ಸಾರ್ವಜನಿಕರಲ್ಲಿ ಒಂದೇ ವಿನಂತಿ ದಯವಿಟ್ಟು ಮಾಸ್ಕ್ ಅನ್ನು ಧರಿಸಿ ಮತ್ತು ಕರೋನ ವೈರಸ್ ಹರಡುವುದನ್ನು ಕಮ್ಮಿ ಮಾಡಬಹುದು ಧನ್ಯವಾದಗಳು.