ಸುವರ್ಣ ಅವಕಾಶ : ಸರ್ಕಾರದಿಂದ ಆರು ತಿಂಗಳು ಬಡ್ಡಿ ಇಲ್ಲದೆ ಸಾಲ ಯಾರಿಗೆಲ್ಲ ಸಿಗುತ್ತೆ ನೋಡಿ

Updated: Saturday, October 10, 2020, 13:44 [IST]

ಹೌದು ಈ ಕರೋನ ಸಂಕಷ್ಟದಿಂದ ಎಲ್ಲರ ಆರ್ಥಿಕ ಪರಿಸ್ಥಿತಿ ತುಂಬಾ ಹದ ಗೆಟ್ಟಿದೆ .ಅದಕ್ಕಾಗೇ ಕರ್ನಾಟಕ ಸರ್ಕಾರ ಒಂದು ಹೊಸ  ಯೋಜನೆ ಜಾರಿಗೆ ತಂದಿದೆ  ಅದು ಏನೆಂದ್ರೆ 'ಬಡವರ ಬಂಧು' ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಈ ಯೋಜನೆಯಲ್ಲಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿನ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆಯ ಬಹುದಾಗಿದೆ   

Advertisement

ಈ ಯೋಜನೆಯನ್ನು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದ್ದು, ನೋಂದಾಯಿತ ಬೀದಿ ಬದಿ ವ್ಯಾಪಾರಿಗಳು ಸೌಲಭ್ಯ ಪಡೆಯಬಹುದಾಗಿದೆ. ವ್ಯಾಪಾರಿಗಳು ಡಿಸಿಸಿ ಬ್ಯಾಂಕ್‌ಗಳು, ಮಹಿಳಾ ಸಹಕಾರಿ ಬ್ಯಾಂಕ್‌ಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಬಹುದಾಗಿದೆ.ರಸ್ತೆ ಬದಿಯಲ್ಲಿ ತಳ್ಳುಬಂಡಿ, ಆಟೊಗಳಲ್ಲಿ ತಿಂಡಿ, ಊಟ ಹಾಗೂ ಪಾನೀಯ ಪದಾರ್ಥಗಳನ್ನು ಮಾರಾಟ ಮಾಡುವವರು ಮತ್ತು ಮನೆಗಳ ಬಳಿ ತೆರಳಿ ತರಕಾರಿ, ಹೂ, ಕಾಯಿ ಮಾರುವವರು ಮತ್ತು ರಸ್ತೆ ಬದಿಯಲ್ಲಿ ಬುಟ್ಟಿ ವ್ಯಾಪಾರಿಗಳು ಈ ಸಾಲ ಸೌಲಭ್ಯ ಪಡೆಯಬಹುದು. 

Advertisement

ಪಾದರಕ್ಷೆಗಳು, ಚರ್ಮ ಉತ್ಪನ್ನಗಳ ರಿಪೇರಿ ಹಾಗೂ ಮಾರಾಟ ಮಾಡುವವರು ಮತ್ತು ಆಟದ ಸಾಮಾನು, ಇತರೆ ಗೃಹಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರು ಈ ಯೋಜನೆಗೊಳಪಡುತ್ತಾರೆ.

ಫಲಾನುಭವಿಗಳ ವ್ಯಾಪಾರಕ್ಕೆ ಅನುಗುಣವಾಗಿ ಮೂರು ಸಾವಿರದಿಂದ 10 ಸಾವಿರ ರೂ.ವರೆಗೆ ಸಾಲ ನೀಡಬಹುದು. ಹಂತ- ಹಂತವಾಗಿ ಸಾಲವನ್ನು ರೂಪೇ ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕ ವಿತರಿಸಬೇಕಾಗುತ್ತದೆ. ಸಾಲದ ಮರುಪಾವತಿ ಅವಯು ಆರು ತಿಂಗಳು ಒಳಗೊಂಡಿರುತ್ತದೆ. ಈ ಅವಯೊಳಗೆ ಫಲಾನುಭವಿಗಳು ಎಷ್ಟು ಬಾರಿಯಾದರೂ ಹಣ ಡ್ರಾ ಮಾಡಬಹುದು ಅಥವಾ ಜಮೆ ಮಾಡಬಹುದು. ಆರು ತಿಂಗಳ ಅವಯಲ್ಲಿ ಬ್ಯಾಂಕ್‌ಗಳು ಯಾವುದೇ ಬಡ್ಡಿ ವಿಧಿಸುವಂತಿಲ್ಲ .      

Advertisement

ಸಾಲ ಪಡೆಯವುದು ಹೇಗೆ?

ನೋಂದಾಯಿತ ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಸಹಕಾರಿ ಬ್ಯಾಂಕ್‌ಗಳಲ್ಲಿ ಶೂನ್ಯ ಉಳಿತಾಯ ಖಾತೆ ತೆರೆಯಬೇಕು. ಬಳಿಕ ತಮ್ಮ ಆಧಾರ್‌ ಕಾರ್ಡ್‌, ಬಿಪಿಎಲ್‌ ಕಾರ್ಡ್‌, ವ್ಯಾಪಾರ ನಡೆಸುತ್ತಿರುವ ಸ್ಥಳದ ಪೋಟೊ ಮತ್ತು ಸ್ಥಳೀಯ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿಯ ಜತೆ ಸಹಕಾರಿ ಬ್ಯಾಂಕ್‌ಗಳು ನಿಗದಿಪಡಿಸಿದ ಅರ್ಜಿಯನ್ನು ಆಯಾ ಬ್ಯಾಂಕಿನ ಮೊಬೈಲ್‌ ಘಟಕ(ಶಾಖೆ)ಕ್ಕೆ ಸಲ್ಲಿಸಬೇಕು.

 

ವಂಶಪಾರಂಪರಿತ ಜ್ಯೋತಿಷ್ಯ ಪ್ರವೀಣಾ   ಶ್ರೀ ಜ್ಞಾನೇಶ್ವರ್ ರಾವ್ ದೈವಜ್ಞ ಪಂಡಿತ್ ಸಮಸ್ಯೆಗಳೇನಿದ್ದರೂ ಸವಾಲಾಗಿ ಸ್ವೀಕಾರ, ದಿಟ್ಟಉತ್ತರ ನೇರ ಪರಿಹಾರ, 
ಪಂಚಭೂತ-ದೈವದೇವರುಗಳ ಸಾಕ್ಷಿಯಾಗಿ ಕೇವಲ ಮೂರು ದಿನಗಳಲ್ಲಿ 100%ಚಾಲೆಂಜ್ನೊಂದಿಗೆ ಶಾಶ್ವತ ಪರಿಹಾರ ನೀಡಲಾಗುವುದು ಪೋನ್ ನಂ:- 8548998564