ಅರಮನೆಯಂತೆ ಇರುವ ವರ್ತೂರು ಅವರ ಮನೆ! ಇವ್ರ ಮನೆಯಲ್ಲಿ ಏನೇನಿದೆ ಗೊತ್ತಾ?

ಅರಮನೆಯಂತೆ ಇರುವ ವರ್ತೂರು ಅವರ ಮನೆ! ಇವ್ರ ಮನೆಯಲ್ಲಿ ಏನೇನಿದೆ ಗೊತ್ತಾ?


ಈಗ ಸದ್ಯದಲ್ಲಿ ಹೆಚ್ಚಿನ ವೈರಲ್ ಆಗಿರುವ ಸುದ್ದಿ ಎಂದರೆ ಅದು ವರ್ತೂರು ಸಂತೋಷ್ ಅರೆಸ್ಟ್. ಹೌದು ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿ ಎಂದು ಗುರುತಿಸಿಕೊಂಡಿರುವ ವರ್ತೂರು ಸಂತೋಷ್ ಅವರು ಈಗ ಅರಣ್ಯ ಅಧಿಕಾರಿಗಳ ಬಂಧನದಲ್ಲಿ ಇದ್ದಾರೆ. ಇನ್ನೂ ಈ ಪ್ರಕರಣ ಎಲ್ಲಾ ಭಾಷೆಯ ಬಿಗ್ ಬಾಸ್ ಶೋ ನಲ್ಲಿಯೇ ಮೊದಲು. ಈ ರೀತಿ ಮನೆ ಒಳಗಡೆ ಇರುವ ವ್ಯಕ್ತಿ ಅರೆಸ್ಟ್ ಆಗಿರುವುದು. ಇನ್ನೂ ವರ್ತೂರು ಸಂತೋಷ್ ಅವರು ಓಪನಿಂಗ್ ದಿನ ಹಾಗೂ ನೆನ್ನೆ ನಡೆದ ಸುದೀಪ್ ಅವರ ವೀಕೆಂಡ್ ಎಪಿಸೋಡ್ ನಲ್ಲಿ ಹುಲಿಯ ಉಗುರನ್ನು ಧರಿಸಿರುವುದನ್ನು ಕಣ್ಣಿಗೆ ಬಿದ್ದಿದ್ದು. ಈ ದೂರನ್ನು ದಾಖಲು ಮಾಡಲಾಗಿತ್ತು. ಈಗ ಅರಣ್ಯ ಇಲಾಖೆ ಆ ಆರೋಪವನ್ನು ಪರಿಗಣಿಸಿ ವರ್ತೂರು ಅವರನ್ನು ಕಸ್ಟೆಡಿಗೆ ತೆಗೆದುಕೊಂಡಿದ್ದಾರೆ.

ಇನ್ನೂ ವರ್ತೂರು ಸಂತೋಷ್ ಅವರು ಕೊಡ ಒಬ್ಬ ರೈತನ ಹಿನ್ನಲೆ ಇಂದ ಹೆಮ್ಮೆಯ ಹಾಗೂ ಸ್ಪೂರ್ತಿದಾಯಕ  ರೈತ  ಎನ್ನುವ ಹೆಸರಿನಲ್ಲಿ ದೊಡ್ಡ ಮನೆಯ್ ಪ್ರವೇಶ ಮಾಡಿದ್ದರು. ಇನ್ನೂ ಡೇಂಜರ್ ಜೋನ್ ನಲ್ಲಿ ಇದ್ದು ದೊಡ್ಡ ಮನೆ ಪ್ರವೇಶ ಮಾಡಿದ್ದ ಈ ವ್ಯಕ್ತಿ ಎರಡೇ ವಾರದಲ್ಲಿ ಇವರು ಮನೆಯ ಸದಸ್ಯರ ಹಾಗೂ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಇನ್ನೂ ವರ್ತೂರು ಸಂತೋಷ್ ಅವರು ರೈತನ ಹಿನ್ನಲೆ ಇದ್ದರೂ ಕೂಡ ಅವರ ಆಸ್ತಿ ಹಾಗೂ ಹಿನ್ನಲೆ ಎಲ್ಲರಿಗೂ ಸ್ಪೂರ್ತಿದಾಯಕ ಎಂದರೆ ತಪ್ಪಾಗಲಾರದು. ಇನ್ನೂ ಅವರ ತಂದೆ ಬಿಟ್ಟು ಹೋದ ಒಂದು ಎಕೆರೆಯಿಂದ ಶುರುವಾದ ಇವರ ಪಯಣ ಇಂದು ಹತ್ತು ಲಕ್ಷ ಬಾಡಿಗೆ ತೆಗೆದುಕೊಳ್ಳುವ ವರೆಗೂ ಬೆಳೆದುನಿಂತಿದ್ದಾರೆ. 

ಇನ್ನೂ ವರ್ತೂರು ಸಂತೋಷ್ ಅವರ ಮನೆ ಯಾವ ಅರಮನೆಗೆ ಕೂಡ ಕಡಿಮೆ ಇಲ್ಲ. ಇನ್ನೂ ವರ್ತೂರು ಅವರು ತಮ್ಮ ಕನಸಿನ ಮನೆಯನ್ನು ಬಹಳ ಅಚ್ಚುಕಟ್ಟಾಗಿ ಎಲ್ಲವನ್ನೂ ಪ್ಲಾನ್ ಮಾಡಿ ಕಟ್ಟಿಸಲಾಗಿದೆ ಎಂದು ಒಂದು ಟಿವಿ ಸಂದರ್ಶನದಲ್ಲಿ ಅವರ ಮನೆಯನ್ನು ತೋರಿಸುತ್ತಾ ತಿಳಿಸಿದ್ದಾರೆ. ಇನ್ನೂ ಅವರ ಬಾಗಿಲಿಗೆ ಅದೆಷ್ಟು ಲಕ್ಷದ ವರೆಗೆ ಖರ್ಚು ಮಾಡಿ ಆಕರ್ಷಣೀಯವಾಗಿ ಮಾಡಿದ್ದಾರೆ. ಇನ್ನೂ ಅವರ ದೇವರ ಕೋಣೆ ಯಾವುದೋ ದೇವಸ್ಥಾನವನ್ನು ನಿರ್ಮಿಸುವ ಹಾಗೆ ಮನೆಯಲ್ಲಿ ಒಂದು ಪುಟ್ಟ ಗರ್ಭ ಗುಡಿಯ ರೀತಿ ನಿರ್ಮಿಸಿದ್ದಾರೆ.  ಹಳ್ಳಿಕಾರ್ ಸಂಘದ ಅಧ್ಯಕ್ಷರಾಗಿ ಇರುವ ವರ್ತೂರು ಅವರ ಮನೆ ಹೆಚ್ಚಾಗಿ ಅವರ ಅಭಿಮಾನಿಗಳ ಕೊಟ್ಟ ಉಡುಗೊರೆ ಯಿಂದ ಅಲಂಕೃತ ಗೊಂಡಿದೆ. ( video credit :National Tv )