ಕನ್ನಡಿ ಮುಂದೆ ಇನ್ನೊಮ್ಮೆ ಮುಖ ನೋಡ್ಕೋ ಶೋಭಾ ಅಕ್ಕ ಎಂದ ಕುಸುಮಾ..! ಕಾರಣವೇನು ಗೊತ್ತಾ..?

Updated: Thursday, October 15, 2020, 19:57 [IST]

" ಡಿ.ಕೆ. ರವಿ ಹೆಸರನ್ನು ಯಾರೇ ಬಳಸಿಕೊಂಡರೂ ಅವರಿಗೆ ಒಳ್ಳೆಯದಾಗಲ್ಲ" ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಅಭಿಪ್ರಾಯ ಪಟ್ಟಿದ್ದರು. ಈ ಅಭಿಪ್ರಾಯಕ್ಕೆ ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ರವಿ ಪತ್ನಿ ಕುಸುಮಾ ಅವರು ತಿರುಗೇಟು ನೀಡಿದ್ದಾರೆ ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ...

Advertisement

" ಪ್ರೀತಿಯ ಅಕ್ಕ ನನ್ನ ಗಂಡನ ಹೆಸರಿನಲ್ಲಿ ರಾಜಕೀಯ ಮಾಡಿದವರು, ಮತ್ತು ರಾಜಕೀಯ ಮಾಡುತ್ತಿರುವವರು ಯಾರು.? ಎನ್ನುವುದನ್ನು ಇಡೀ ದೇಶವೇ ನೋಡಿದೆ. ಜೊತೆಗೆ ನೋಡುತ್ತಿದೆ. ಈ ಸಂದರ್ಭದಲ್ಲಿ ನನಗೆ ಅಕ್ಕಮಹಾದೇವಿ ಅವರ ' ನೊಂದವರ ನೋವ ನೋಯ ದವರೆತ್ತ ಬಲ್ಲರೊ' ಎಂಬ ವಚನವು ನೆನಪಿಗೆ ಬರುತ್ತಿದೆ " ಎಂದು ಸಂಸದೆ ಕರಂದ್ಲಾಜೆ ಅವರನ್ನು ಉದ್ದೇಶಿಸಿ ಲೇವಡಿ ಮಾಡಿದ್ದಾರೆ ಎಂದು ಕೇಳಿಬಂದಿದೆ. 

Advertisement

ಡಿ ಕೆ ರವಿ ಅವರ ಹೆಸರನ್ನು ಉಪಯೋಗಿಸಿಕೊಂಡು,
ಬಳಕೆ ಮಾಡಿದವರಿಗೆ ಒಳ್ಳೆಯದಾಗುವುದಿಲ್ಲ ಎಂದಿದ್ದೀರಿ.., ಇದು ನಿಮಗೆ ನೀವೇ ಹೇಳಿಕೊಂಡಂತಿದೆ. ಎಂದುಕುಸುಮಾ ಅವರು ಹೇಳುತ್ತಾ, "ಕನ್ನಡಿ ಮುಂದೆ ನಿಂತುಕೊಂಡು ಇನ್ನೊಮ್ಮೆ,ನೀವು ಹೇಳಿರುವ ಹೇಳಿಕೆಯನ್ನು ಕೊಟ್ಟು ನೋಡಿ. ಸತ್ಯ ಮನದಟ್ಟಾಗಬಹುದು" ಎಂದು ಡಿ ಕೆ ರವಿ ಅವರ ಪತ್ನಿ ಕುಸುಮಾ ಹೇಳಿದ್ದಾರೆ ಎಂದು ಕೇಳಿಬಂದಿದೆ. ಹೌದು ಈ ಹಿಂದೆ ಡಿ.ಕೆ. ರವಿ ಮೃತಪಟ್ಟ ಸಮಯದಲ್ಲಿ, ಬಿಜೆಪಿ ಮತ್ತು ಶೋಭಾ ಕರಂದ್ಲಾಜೆ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದರು ಎಂದು ಕೇಳಿಬಂದಿದೆ. ಹಾಗಾಗಿ ಈ ವಿಚಾರವನ್