ನಿಷ್ಠ ಐಪಿಎಸ್‌ ಆಫಿಸರ್‌ ರವಿ ಡಿ ಚೆನ್ನಣ್ಣರವರ ಸಂಬಳ ಏಷ್ಟು ಗೋತ್ತಾ.? ಸೌಲಭ್ಯಗಳೇನು.?

Updated: Tuesday, October 13, 2020, 09:46 [IST]

ಖಡಕ್‌ ಐಪಿಎಸ್‌ ಆಫಿಸರ್‌ ಎಂದೇ ಹೆಸರುವಾಸಿಯಾಗಿರುವ ರವಿ ಡಿ ಚೆನ್ನಣ್ಣ ಅವರು ಅನೇಕ ಯುವಕರಿಗೆ ಸ್ಪೂರ್ತಿ .ತಮ್ಮದೇ ಕಾರ್ಯ ವೈಖರಿ ಮತ್ತು ನಿಷ್ಟಾವಂತ ಕೆಲಸಗಳಿಂದ ಕರ್ನಾಟಕದ ಜನರ ಮೆಚ್ಚುಗೆ ಗಳಿಸಿದ್ದಾರೆ. ಐಪಿಎಸ್‌ ಅಧಿಕಾರಿ ಅಂದರೆ ಈ ರೀತಿ ಇರಬೇಕು ಎಂದು ತೋರಿಸಿಕೊಟ್ಟ ರವಿ ಡಿ ಚೆನ್ನಣ್ಣ ಅವರಿಗೆ ಸರ್ಕಾರ ನೀಡುವ ವೇತನ ಎಷ್ಟು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ.  

Advertisement

ಹೌದು ರವಿ ಡಿ ಚೆನ್ನಣ್ಣ ಅವರಿಗೆ ತಿಂಗಳಿಗೆ ಒಂದು ಲಕ್ಷದ ಐದು ಸಾವಿರ ರೂಪಾಯಿ ಸಂಬಳ ಬರುತ್ತದೆ.ಇನ್ನು ಇದರ ಜೊತೆಗೆ ಅನೇಕ ಸರ್ಕಾರಿ ಸೌಲಭ್ಯಗಳನ್ನು ಸರ್ಕಾರ ನೀಡುತ್ತದೆ.ಖಡಕ್‌ ಅಧಿಕಾರಿಗೆ ಕೆಲಸದ ಸಂದರ್ಭ ಯಾವುದೇ ರೀತಿ ಮನೆ ನೆನಪು ಬರದಿರಲಿ ಎಂದು ಸರ್ಕಾರವೇ ಇವರ ಮನೆ ಖರ್ಚುಗಳನ್ನು ನೋಡಿಕೊಳ್ಳುತ್ತದೆ.ಎಂಟು ಎಕರೆ ಪ್ರದೇಶದಲ್ಲಿ ದೊಡ್ಡ ಮನೆಯನ್ನು ನೀಡಲಾಗುತ್ತದೆ.ಇದಕ್ಕೆ ಎರಡು ಗೇಟ್‌ ಕೀಪರ್‌ಗಳನ್ನು ಸರ್ಕಾರವೇ ನೇಮಿಸಿರುತ್ತದೆ.  

Advertisement

ಮನೆಯ ಕೆಲಸಕ್ಕೆ ಎರಡು ಮಂದಿ ಇರುತ್ತಾರೆ.ಇನ್ನು ಅಡುಗೆ ಕೆಲಸಕ್ಕೆ ಇಬ್ಬರು ಅಡುಗೆ ಕೆಲಸದವರು ನೇಮಕವಾಗಿರುತ್ತಾರೆ.ಆದರೆ ಇಷ್ಟೆಲ್ಲಾ ಸರ್ಕಾರದ ಐಷಾರಾಮಿ ಸೌಲಭ್ಯಗಳಿದ್ದರೂ , ರವಿ ಡಿ ಚೆನ್ನಣ್ಣ ಅವರು ಬಡವರ ನಡುವೆ ಬದುಕಲು ಇಷ್ಟಪಡುತ್ತಾರೆ. ಬಡವರ ಕಷ್ಟಗಳನ್ನು ತಿಳಿದಿರುವ ರವಿ ಡಿ ಚೆನ್ನಣ್ಣನವರು , ಗ್ರಾಮ ವಾಸ್ತವ್ಯ ಮಾಡುವುದರ ಜೊತೆ ,ಹಳ್ಳಿಗಳನ್ನು ದತ್ತು ತೆಗೆದುಕೊಂಡು.  

Advertisement

ಬಯಲುಮುಕ್ತ ಶೌಚಲಯದಂತಹ ಸಾಮಾಜಿಕ ಕೆಲಸಗಳನ್ನು ಮಾಡಿ ಹಳ್ಳಿಗಳನ್ನು ಉದ್ದಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಕ್ರಿಮಿನಲ್‌ಗಳನ್ನು ಹಿಡಿಯುವ ಜೊತೆ , ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಇಂತಹ ಅಧಿಕಾರಿಯನ್ನು ಪಡೆದಿರುವ ನಾವೇ ಪುಣ್ಯವಂತರು.ದೇವರು ಇವರಿಗೆ ಒಳ್ಳೆಯದನ್ನು ಮಾಡಲಿ.