ಪ್ರತಾಪ್ ಸಿಂಹ ಅಂಬರೀಶ್ ಹಾಗೂ ಸುಮಲತಾ ಇಬ್ಬರ ಬಗ್ಗೆಯೂ ಹೇಳಿದ ಮಾತು ನೋಡಿ

Updated: Tuesday, November 17, 2020, 16:07 [IST]

ಇತ್ತ ಸಂಸದರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದು ಇದೀಗ ಮತ್ತೆ ಸುಮಲತಾ ಅವರ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿ ತಿರುಗೇಟು ನೀಡಿದ್ದಾರೆ.. ಹೌದು ನಿನ್ನೆ ಸುಮಲತಾ ಅವರು ಸಂಸದ ಪ್ರತಾಪ್ ಸಿಂಹ ಅವರನ್ನು ಪೇಟೆ ರೌಡಿ ಎಂದದ್ದಕ್ಕೆ ಇದೀಗ ಪ್ರತಾಪ್ ಸಿಂಹ ಸುಮಲತಾ ಹಾಗೂ ಅಂಬರೀಶ್ ಇಬ್ಬರ ಬಗ್ಗೆಯೂ ಮಾತನಾಡಿದ್ದು ಪಾಳೆಗಾರಿಕೆ ಅವಶ್ಯಕತೆ ಇಲ್ಲ ಎಂದಿದ್ದಾರೆ..

ಹೌದು ಮಂಡ್ಯ ಹಾಗೂ ಮೈಸೂರು ಸಂಸದರ ವಾಕ್ಸಮರ ಅದ್ಯಾಕೋ ಮುಗಿಯುವಂತೆ ಕಾಣುತ್ತಿಲ್ಲ.. ಕೆಲ ದಿನಗಳ ಹಿಂದೆ ಮಂಡ್ಯದ ಯಲಿಯೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಾಪ್ ಸಿಂಹ ಅವರು ಅಧಿಕಾರಿಯೊಬ್ಬರ ಜೊತೆ ಫೋನಿನಲ್ಲಿ ಮಾತನಾಡುವ ಸಮಯದಲ್ಲಿ ಆ ಯಮ್ಮಾ ಏನು ಕೆಲ್ಸಾ ಮಾಡಲ್ಲ.. ಸುಮ್ನೆ ದೇವೇಗೌಡರ ಫ್ಯಾಮಿಲಿ ವಿರುದ್ಧ ಅಂತ ಗೆಲ್ಸಿದ್ದು.. ಆದರೆ ಆ ಯಮ್ಮನಿಗೆ ಏನೂ ಬರಲ್ಲ.. ಮಂಡ್ಯದ ಏನೇ ಕೆಲಸ ಇದ್ರೂ ನನಗೆ ಹೇಳಿ ಎಂದಿದ್ದರು.. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನಿನ್ನೆ ಈ ಬಗ್ಗೆ ಮಾದ್ಯಮಗಳಿಗೆ ಸುಮಲತಾ ಅವರು ಪ್ರತಿಕ್ರಿಯೆ ನೀಡಿದ್ದರು..

ಇದು ಪ್ರತಿಕ್ರಿಯೆ ನೀಡುವ ವಿಚಾರವೇ ಅಲ್ಲ.. ಇಂತಹ ಮಾತು ಹೊಸದೇನಲ್ಲ.. ಅಂಬರೀಶ್ ಇದ್ದಾಗ ಯಾರಿಗೂ ಮಾತನಾಡಲು ಧೈರ್ಯ ಇರಲಿಲ್ಲ.. ಈಗ ಎಲ್ಲರೂ ಮಾತನಾಡ್ತಾರೆ.. ಆಡಲಿ.. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಜನರಿಗೆ ಉತ್ತರ ಕೊಡಬೇಕೆ ಹೊರತು ಪಕ್ಕದ ಸಂಸದರಿಗಲ್ಲ.. ನನ್ನನ್ನು ಪ್ರಶ್ನೆ ಮಾಡುವ ಅಧಿಕಾರ ಅವರಿಗಿಲ್ಲ.. ಸಂಸದದ ಭಾಷೆ ಬಳಸಿ ಕೇಳಿದ್ದರೆ ನಾನು ಪ್ರತಿಕ್ರಿಯೆ ನೀಡುತ್ತಿದ್ದೆ.. ಆದರೆ ಅವರೊಬ್ಬ ಪೇಟೆ ರೌಡಿ ತರ ಮಾತನಾಡಿದ್ದಾರೆ.. ಆವರಿಗೆಲ್ಲಾ ನಾನು ಪ್ರತಿಕ್ರಿಯೆ ನೀಡೋ ಅಗತ್ಯ ಇಲ್ಲ.. ಆ ಅರ್ಹತೆಯೂ ಅವರಿಗಿಲ್ಲ ಎಂದಿದ್ದರು..

ಇದೀಗ ಸುಮಲತಾ ಅವರ ಪೇಟೆ ರೌಡಿ ಮಾತಿಗೆ ಸಂಸದ ಪ್ರತಾಪ್ ಸಿಂಹ ಅವರು ಪ್ರತಿಕ್ರಿಯೆ ನೀಡಿದ್ದಾರೆ.. ಹೌದು ಇಂದು ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು.. ಸುಮಲತಾ ಬಣ್ಣದ ಜಗತ್ತಿನಿಂದ‌ ಬಂದವರು.. ಅವರು ನಾಗರಹಾವು ಸಿನಿಮಾದ ಜಲೀಲನ ಡೈಲಾಗ್ ಹೊಡೆದಿರ್ತಾರೆ.. ಅದನ್ನ ನಾನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದರು.. ಅಷ್ಟೇ ಅಲ್ಲದೇ ಅಂಬರೀಶ್‌ ಇದ್ದರೆ ಯಾರೂ ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ನಿನ್ನೆ ಸುಮಲತಾ ಅವರು ಹೇಳಿರುವ ಮಾತಿಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ ಅವರು ಚಮ್ಮಾರನ ಮಗ ಅಬ್ರಾಹಂ ಲಿಂಕನ್.. ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ.. ಈ ರೀತಿ ಇರುವಾಗ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪಾಳೆಗಾರಿಕೆಗೆ ಅವಕಾಶವಿಲ್ಲ.. ಎಂದು ಸುಮಲತಾ ಅವರಿಗೆ ತಿರುಗೇಟು ನೀಡಿದ್ದಾರೆ..

ಇನ್ನು ಕೊಡಗಿನ ರಸ್ತೆಗಳು ಸರಿಯಿಲ್ಲಾ ಅಂತ ನನಗೂ ಕೂಡ ಜನರು ಹೇಳ್ತಾರೆ.. ಮೊದಲು ಅದರ ಕಡೆ ಗಮನ ಕೊಡಲಿ ಎಂದು ಹೇಳಿದ ಸುಮಲತಾ ಅವರ ಮಾತಿಗೆ ಪ್ರತಿಕ್ರಿಯೆ ನೀಡಿ “ಯಾವ ಯಾವ ರಸ್ತೆಗಳು ಯಾರ ವ್ಯಾಪ್ತಿಗೆ ಬರುತ್ತವೆ ಎಂಬ ಕನಿಷ್ಠ ಜ್ಞಾನ ಜನಪ್ರತಿನಿಧಿಗೆ ಇರಬೇಕು.. ನಾನು ಬಸವಣ್ಣನ ಕಾಯಕನಿಷ್ಟೆಯಲ್ಲಿ ನಂಬಿಕೆ ಇಟ್ಟವನು.. ಯಾವಾಗಲು ನನ್ನ ಕೆಲಸ ಕಾರ್ಯಗಳು ನನ್ನ ಕೈ ಹಿಡಿಯುತ್ತವೆ.. ನಾನು ಯಾವ ಸ್ಟಾರೂ ಅಲ್ಲ, ನನಗೆ ಯಾವ ಅಭಿಮಾನಿಗಳು ಬಂದು ಓಟ್ ಮಾಡಲ್ಲ ಎಂದು ಸುಮಲತಾಗೆ ಟಾಂಗ್ ಕೊಟ್ಟರು..

ಸ್ಟಾರ್ ಆದರೂ ಆಗಲಿ.. ಇನ್ನೊಬರಾದರು ಆಗಲಿ.. ಒಟ್ಟಿನಲ್ಲಿ ಜನಪ್ರತಿನಿಧಿಗಳು ಯಾರೇ ಆದರೂ ವ್ಯಯಕ್ತಿಕ ಟೀಕೆ ಟಿಪ್ಪಣಿಗಳನ್ನು ಬಿಟ್ಟು ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿ ಕಡೆಗೆ ಹಾಗೂ ಸದ್ಯ ಕೊರೊನಾದಿಂದ ತತ್ತರಿಸಿ ಹೋಗಿರುವ ಜನರ ಬಗ್ಗೆ ಗಮನ ಕೊಟ್ಟರೆ ಎಷ್ಟೋ ಒಳ್ಳೆಯದು ಎಂಬುದು ಜನರ ಅಭಿಪ್ರಾಯವಾಗಿದೆ..