ನಿಮ್ಮ ಜೊತೆ ನಾನಿದ್ದೀನಿ ಕಣೋ ಎಂದಿದ್ದರು ಎಂದು, ಕಣ್ಣೀರು ಹಾಕುತ್ತಿರುವ ರವಿ ಬೆಳೆಗೇರಿ ಪುತ್ರ..!

Updated: Friday, November 13, 2020, 11:47 [IST]

ಹೌದು ಇದೀಗ ಮಾಧ್ಯಮ ಮೂಲಕ ತಿಳಿದುಬಂದಿರುವ ಹಾಗೆ ರವಿ ಬೆಳಗೇರಿ ಅವರ ಪುತ್ರನಿಗೆ, ರವಿಬೆಳಗೆರೆ ಅವರು, ನಾನು ನಿಮ್ಮ ಜೊತೆ ಇದ್ದೀನಿ ಕಣೋ ಎನ್ನುವ ಮಾತನ್ನು ಹೇಳಿದ್ದರಂತೆ. ಹೌದು 'ನಾನು ನಿಮ್ಮ ಜೊತೆ ಇದೀನಿ ಕಣೋ, ನೀನು ತುಂಬಾ ಚೆನ್ನಾಗಿ ಬೆಳೆಯಬೇಕು' ಎಂದು ನಮ್ಮ ತಂದೆಯವರು ಹೇಳಿದ್ದರು. ಆದರೆ ಇದೀಗ ಅವರ ಸಾವಿನ ವಿಚಾರ ತಿಳಿದು ಶಾಕ್ ಆಗಿದೆ ಎಂದು ರವಿಬೆಳಗೆರೆಯವರ ಪುತ್ರ ಕಣ್ಣೀರು ಹಾಕುತ್ತಿದ್ದಾರೆ. ಜೊತೆಗೆ ರವಿ ಬೆಳಗೆರೆ ಅವರು ನಿನ್ನೆ ರಾತ್ರಿ ಪದ್ಮನಾಭ ಕಚೇರಿಯಲ್ಲಿ ಸಾವನ್ನಪ್ಪಿದ್ದು ಎಂಬ ವಿಚಾರವನ್ನು ಹೇಳಿದ್ದಾರೆ.  

Advertisement

ರಾತ್ರಿ ಸರಿಸುಮಾರಿಗೆ 12:15ಕ್ಕೆ ಎದೆನೋವು ಕಾಣಿಸಿಕೊಂಡ ಬೆನ್ನಲ್ಲೇ, ನಾನು ಅಲ್ಲಿಗೆ ಹೋದೆ, ಆ ಸಮಯಕ್ಕೆ ಆಸ್ಪತ್ರೆಗೆ ತಂದೆಯನ್ನು ಕರೆದೊಯ್ಯುತ್ತಿದ್ದರು, ಆದರೆ ಸಮಯ ಆಗಲೇ ಮೀರಿದ್ದ ಕಾರಣಕ್ಕೆ ನಮ್ಮ ತಂದೆ ನಿಧನರಾದರು ಎಂಬುದಾಗಿ ಇವರ ಪತ್ರ ಮಾಧ್ಯಮದ ಮುಂದೆ ಬೇಸರ ವ್ಯಕ್ತಪಡಿಸಿದರು. ಜೊತೆಗೆ ನಮ್ಮ ತಂದೆ ಬಹಳಷ್ಟು ದಿನಗಳವರೆಗೆ ನಮ್ಮ ಜೊತೆಗಿರುತ್ತಾರೆ ಎಂದುಕೊಂಡಿದ್ವಿ, ಪ್ರಾರ್ಥನಾ ಶಾಲೆಯನ್ನು ಹೆಚ್ಚಿನ ಮಟ್ಟದಲ್ಲಿ ಎತ್ತರಕ್ಕೆ ಬೆಳೆಸಬೇಕು ಎನ್ನುವ ದೊಡ್ಡ ಆಸೆಯನ್ನು ನಮ್ಮ ತಂದೆ ಹೊಂದಿದ್ದರು.  

Advertisement

ಜೊತೆಗೆ ನಮ್ಮ ತಂದೆಯವರಿಗೆ ಡಯಾಬಿಟೀಸ್ ಮತ್ತು ಕಾಲುಗಳ ನೋವು ಕೂಡ ಇತ್ತು. ಮೊನ್ನೆ ಮೂರು ದಿನಗಳ ಹಿಂದೆ ನನ್ನ ಜೊತೆ ಮಾತನಾಡಿ, ನಿಮ್ಮ ಜೊತೆ ನಾನು ಇದ್ದೀನಿ ಕಣೋ ಎನ್ನುವ ಭರವಸೆ ನೀಡಿದ್ದರು. ಜೊತೆಗೆ ನೀನು ತುಂಬಾ ಚೆನ್ನಾಗಿರಬೇಕು, ಚೆನ್ನಾಗಿ ಬೆಳೆಯಬೇಕು ಎಂದವರು, ಇದೀಗ ಅವರ ಸಾವಿನ ವಿಚಾರ ಕೇಳಿ ದೊಡ್ಡ ಶಾಕ್ ಬಡಿದಂತಾಗಿದೆ ಎಂದು ಮಾತನಾಡಿದರು.  

 ಮತ್ತು ಬೆಳಗ್ಗೆ 9ಗಂಟೆಗೆ ಪ್ರಾರ್ಥನಾ ಶಾಲೆಯ ಮೈದಾನದ ಒಳಗೆ ತಂದೆಯ ಮೃತದೇಹದ ಅಂತಿಮ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಿದ್ದೇವೆ. ಸಂಜೆ 4ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ತಂದೆಯವರ ಅಂತ್ಯಕ್ರಿಯೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂಬುದಾಗಿ, ಮಾಧ್ಯಮದ ಮುಂದೆ ತಿಳಿಸಿದರು...