ಇಷ್ಟರಲ್ಲೇ ಡಿಸೀಸ್ ಎಕ್ಸ್ ವೈರಸ್ ಬರುತಿದೆಯಂತೆ ಎಚ್ಚರವಿರಲಿ..! ಎಬೋಲದಷ್ಟೇ ಡೇಂಜರ್..!
Updated: Tuesday, January 5, 2021, 10:31 [IST]

ಕರೋನ ವೈರಸ್ ಚೇತರಿಕೆ ಈಗೀಗ ಸ್ವಲ್ಪ ಮಟ್ಟದಲ್ಲಿ ಚೇತರಿಕೆಗೊಳ್ಳುತ್ತಿದೆ. ಇದರ ನಡುವೆಯೇ ಇದೀಗ ಇನ್ನೊಂದು ವೈರಸ್ ಸದ್ಯದಲ್ಲೇ ಜಗತ್ತಿಗೆ ಪಸರಿಸಲಿದೆ ಎಂದು ವೈದ್ಯಲೋಕ ಬೆಚ್ಚಿಬೀಳುವ ಸುದ್ದಿಯೊಂದನ್ನು ಈಗಾಗಲೇ ವರದಿ ಮಾಡಿದೆ ಎಂದು ಮಾಧ್ಯಮ ಒಂದರ ಮೂಲಕ ನಮಗೆ ತಿಳಿದುಬಂದಿದೆ. ಹೌದು ಡಿಸಿಸಿ ಎಕ್ಸ್ ಎನ್ನುವ ಹೊಸ ವೈರಸ್, ಕೊರೊನಗಿಂತ ಸಿಕ್ಕಾಪಟ್ಟೆ ಸ್ಪೀಡಾಗಿ ಹರಡಲಿದೆಯಂತೆ. ಇದು ಎಬೋಲಾದಷ್ಟೇ ತುಂಬಾ ಡೇಂಜರ್ ಎಂಬುದಾಗಿ ಜೀನ್-ಜಾಕ್ವೆಸ್ ಮುಯೆಂಬೆ ಟಾಮ್ಫಮ್ ತಿಳಿಸಿದ್ದಾರೆ.
ಹೌದು ಈ ಜೀನ್ ಜಾಕ್ವೆಸ್ ಬೇರೆ ಯಾರು ಅಲ್ಲ, 1976 ರಲ್ಲಿ ಮೊದಲ ಬಾರಿಗೆ ಕಂಡುಬಂದ ಎಬೋಲಾ ವೈರಸ್ ಅನ್ನು ಪತ್ತೆಹಚ್ಚಿದ ವೈದ್ಯರು. ಮತ್ತು ಇವರು ಹೇಳಿದ ಹಾಗೆ ಈ ವೈರಸ್ ಕೇವಲ ಕಾಲ್ಪನಿಕವಾಗಿದ್ದರೂ, ಒಮ್ಮೆ ಬಂದರೆ ಇಡೀ ಜಗತ್ತೇ ನಡುಕ ಹುಟ್ಟಿಸುವ ಹಾಗೆ ಇದು ಪರಿಣಾಮ ಬೀರುತ್ತದೆ, ಆರ್ಭಟ ಜೋರಾಗಿರುತ್ತದೆ ಎಂದು ಹೇಳಿದ್ದಾರೆ. ಇದೇ ಹಿನ್ನೆಲೆಯಲ್ಲಿ ಇದೀಗ ಯುವಕನೊಬ್ಬನಿಗೆ ರಕ್ತಸ್ರಾವ ಮತ್ತು ಜ್ವರ ಕಾಣಿಸಿಕೊಂಡಿದೆ.
ಆಮೇಲೆ ಇದು ಎಬೋಲಾ ಇರಬಹುದೆಂದು ವೈದ್ಯರು ತಪಾಸಣೆಗೆ ಒಳಪಡಿಸಿದ ಬಳಿಕ, ವರದಿ ನೆಗೆಟಿವ್ ಆಗಿ, ಇದು 'ಡಿಸೀಸ್ ಎಕ್ಸ್' ವೈರಸ್ ಎಂದು ಪತ್ತೆ ಹಚ್ಚಿದ್ದಾರೆ. ಹಾಗಾಗಿ ಇದು ಮೊದಲ ಪ್ರಕರಣ ಎಂದು ಡೇಲಿ ಮೇಲ್ ಮಾಧ್ಯಮ ವರದಿ ಮಾಡಿದೆ. ಹೌದು ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ ಮತ್ತು ಡಿಸೀಸ್ ಎಕ್ಸ್ ವೈರಸ್ ಬರುವ ಮುನ್ನ ತುಂಬಾ ಎಚ್ಚರವಾಗಿರಿ, ಎಲ್ಲರಿಗೂ ಈ ಮಾಹಿತಿಯನ್ನು ಶೇರ್ ಕೂಡ ಮಾಡಿ ಧನ್ಯವಾದಗಳು...