ಆಘಾತಕಾರಿ ಮಾಹಿತಿ: ಭಾರತದಲ್ಲಿ 6 ಜನರಲ್ಲಿ ಮ್ಯೂಟೆಡ್ ಕೊರೋನಾ ಸೋಂಕು ದೃಢ
Updated: Tuesday, December 29, 2020, 12:50 [IST]

ICMR ಎಲ್ಲಾ ರಾಜ್ಯಗಳಿಂದ ಮಾಹಿತಿಯನ್ನು ಕಲೆಹಾಕಿದೆ. RT-PCR ಪರೀಕ್ಷೆಯ ಮಾಹಿತಿಯನ್ನೂ ಕಲೆಹಾಕಿ ಈವರೆಗೆ ಎಷ್ಟು ಜನರಿಗೆ ಈ ಸೋಂಕು ತಗುಲಿದೆ ಎಂಬ ಮಾಹಿತಿಯನ್ನು ನೀಡಿದೆ. ಅಲ್ಲದೆ, ಮುಂದೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆಯೂ ಸೂಚನೆ ನೀಡಲಿದೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಚೀನಾದಲ್ಲಿ ಪತ್ತೆಯಾದ ಕೊರೋನಾ ವೈರಸ್ ಇದೀಗ ಇಡೀ ವಿಶ್ವವನ್ನು ಬಿಟ್ಟೂ ಬಿಡದೆ ಕಾಡುತ್ತಿದೆ. ಜಗತ್ತಿನಾದ್ಯಂತ ಮಿಂಚಿನ ವೇಗದಲ್ಲಿ ಹರಡಿದ್ದ ಈ ವೈರಸ್ ಲಕ್ಷಾಂತರ ಜನರ ಪ್ರಾಣಕ್ಕೆ ಕುತ್ತಾಗಿದೆ. ಭಾರತದಲ್ಲೂ ಸಹ 1.4 ಲಕ್ಷಕ್ಕೂ ಅಧಿಕ ಜನ ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈ ಸೋಂಕಿಗೆ ಲಸಿಕೆಯನ್ನು ಸಂಶೋಧಿಸುವ ಕೆಲಸವೂ ನಡೆಯುತ್ತಿದೆಯಾದರೂ ಈ ವರೆಗೆ ಲಸಿಕೆಗಳು ಕ್ಲಿನಿಕಲ್ ಟ್ರಯಲ್ ಹಂತವನ್ನು ದಾಟಿಲ್ಲ. ಹೀಗಾಗಿ ಕೊರೋನಾದಿಂದ ತಪ್ಪಿಸಿಕೊಳ್ಳುವ ದಾರಿ ಕಾಣದಾಗಿದೆ. ಹೀಗಿರುವಾಗಲೇ ಇತ್ತೀಚೆಗೆ ಇಂಗ್ಲೆಂಡ್ ಹೊಸ ರೂಪಾಂತರ ಪ್ರಭೇದದ ಕೊರೋನಾ ವೈರಸ್ ಪತ್ತೆಯಾಗಿದ್ದು, ಮತ್ತೊಮ್ಮೆ ಇಡೀ ಜಗತ್ತನ್ನು ಆತಂಕಕ್ಕೆ ದೂಡಿದೆ. ಅಲ್ಲದೆ, ಲಂಡನ್ನಿಂದ ಭಾರತಕ್ಕೆ ಆಗಮಿಸಿರುವ ಅನೇಕ ಪ್ರಯಾಣಿಕರು ಈ ಹೊಸ ರೂಪಾಂತರಿ ವೈರಸ್ಗೆ (ಮ್ಯೂಟೆಡ್ ವೈರಸ್) ತುತ್ತಾಗಿದ್ದಾರೆ ಎನ್ನಲಾಗಿತ್ತು. ಆದರೆ, ಎಷ್ಟು ಜನರಿಗೆ ಈ ಸೋಂಕು ತಗುಲಿದೆ? ಎಂಬ ಮಾಹಿತಿ ಈ ವರೆಗೆ ದಕ್ಕಿರಲಿಲ್ಲ. ಇದೀಗ ಈ ಕುರಿತ ಅಧಿಕೃತ ಮಾಹಿತಿಯನ್ನು ಹೊರಹಾಕಿದೆ. ಈ ವರದಿಯ ಪ್ರಕಾರ ದೇಶದಲ್ಲಿ 6 ಜನರಿಗೆ ಈ ಮ್ಯೂಟೆಡ್ ವೈರಸ್ ತಗುಲಿರುವುದು ಖಚಿತವಾಗಿದೆ.
ಬ್ರಿಟನ್ ನಿಂದ ಬಂದವರ ಪೈಕಿ ಮ್ಯೂಟೆಡ್ ವೈರಸ್ ಪೀಡಿತರು ಎಷ್ಟು? ದೇಶಾದ್ಯಂತ ಎಷ್ಟು ಮಂದಿ ಮ್ಯೂಟೆಡ್ ವೈರಸ್ ಪೀಡಿತರಿದ್ದಾರೆ? ಕರ್ನಾಟಕದಲ್ಲಿ ಎಷ್ಟು ಮಂದಿ ಮ್ಯೂಟೆಡ್ ವೈರಸ್ ಪೀಡಿತರಿದ್ದಾರೆ? ಎಂಬ ಅಧಿಕೃತ ಮಾಹಿತಿಯನ್ನು ICMR- ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಇಂದು ಹೊಸಹಾಕಿದೆ.
ICMR ಎಲ್ಲಾ ರಾಜ್ಯಗಳಿಂದ ಮಾಹಿತಿಯನ್ನು ಕಲೆಹಾಕಿದೆ. RT-PCR ಪರೀಕ್ಷೆಯ ಮಾಹಿತಿಯನ್ನೂ ಕಲೆಹಾಕಿ ಈವರೆಗೆ ಎಷ್ಟು ಜನರಿಗೆ ಈ ಸೋಂಕು ತಗುಲಿದೆ ಎಂಬ ಮಾಹಿತಿಯನ್ನು ನೀಡಿದೆ. ಅಲ್ಲದೆ, ಮುಂದೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆಯೂ ಸೂಚನೆ ನೀಡಲಿದೆ ಎಂದು ಹೇಳಲಾಗುತ್ತಿದೆ.
ಈ ರೂಪಾಂತರಿ ಕೊರೋನಾ ಮ್ಯೂಟೆಡ್ ವೈರಸ್ ಕೊರೋನಾಗಿಂತ ಶೇ.70 ರಷ್ಟು ಹೆಚ್ಚು ವೇಗವಾಗಿ ಹರಡುತ್ತದೆ. ಅಲ್ಲದೆ, ಸೋಂಕಿತರಿಗೆ ಶೀಘ್ರದಲ್ಲಿ ಸಾವನ್ನು ತರುವಷ್ಟು ಮಾರಣಾಂತಿಕವಾಗಿದೆ. ಇದೇ ಕಾರಣಕ್ಕೆ ಭಾರತ ಇಂಗ್ಲೆಂಡ್ನಿಂದ ಎಲ್ಲಾ ವಿಮಾನಯಾನಗಳ ಸಂಚಾರಕ್ಕೂ ನಿರ್ಬಂಧ ಹೇರಿದೆ. ಆದರೂ ಕೊನೆಯ ವಿಮಾನದಲ್ಲಿ ಆಗಮಿಸಿದ್ದ ಹಲವರಲ್ಲಿ ಈ ವೈರಸ್ ಸೋಂಕು ಇದೆ ಎಂದು ಅನುಮಾನಿಸಲಾಗಿತ್ತು.