ಪಂಚಾಯ್ತಿಯಲ್ಲಿ ಅಂದು ಕಸಗುಡಿಸಿದಳು, ಇಂದು ಅದೇ ಪಂಚಾಯ್ತಿಗೆ ಏನಾಗಿದ್ದಾಳೆ ನೋಡಿ .! ಇದೆ ಅಲ್ವಾ ಪ್ರಜಾಪ್ರಭುತ್ವ

Updated: Saturday, January 2, 2021, 09:39 [IST]

ಹೌದು ಇತ್ತೀಚೆಗಷ್ಟೇ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಕರ್ಷಕ ಅಭ್ಯರ್ಥಿಗಳನ್ನು ಆಯಾ ಜಿಲ್ಲೆಗಳ ಊರುಗಳ ಜನರು ಆಯ್ಕೆ ಮಾಡಿಕೊಂಡು ಈಗಾಗಲೇ ಗೆಲ್ಲಿಸಿ ವಿಜಯ ಪತಾಕೆ ಹಾರಿಸಿದ್ದಾರೆ.ಇದರ ನಡುವೆ ಕೇರಳದ ಪತನಪುರಂ ಎಂಬ ಪಂಚಾಯಿತಿಯ ಒಂದು ಸುದ್ದಿ ಇದೀಗ ತುಂಬಾ ವೈರಲ್ ಆಗುತ್ತಿದೆ. ಹೌದು ಕೇರಳದ ಪಥನಪುರಂ ಪಂಚಾಯಿತಿಯಲ್ಲಿ ಸುಮಾರು ಒಂದು ದಶಕಗಳ ಹಿಂದೆ, ಕಸ ಗುಡಿಸುತ್ತಿದ್ದ ಅದೇ ಪಂಚಾಯಿತಿಯ ಮಹಿಳೆ ಇಂದು ಈ ಬಾರಿಯ ಗ್ರಾಮಪಂಚಾಯಿತಿ ಎಲೆಕ್ಷನ್ ನಲ್ಲಿ ಗೆದ್ದು ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.  

Advertisement

ಜೊತೆಗೆ ಈ ರೀತಿಯ ಆಯ್ಕೆ ಮಾಡಿರುವ ನಮ್ಮ ಪ್ರಜಾಪ್ರಭುತ್ವಕ್ಕೆ ಧನ್ಯವಾದ ತಿಳಿಸಲೇಬೇಕು ಎಂಬುದಾಗಿಯೂ ಕೂಡ ಹೇಳಿದ್ದಾರೆನ್ನಲಾಗಿದೆ. ಹೌದು ಸ್ನೇಹಿತರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗಿ ಆಳ್ವಿಕೆ ಮಾಡುತ್ತಾರೆ ಎಂಬುದು ಮತ್ತೆ ಈ ಮಹಿಳೆಯ ಮೂಲಕ ಸಾಬೀತಾಗಿದೆ. 46 ವರ್ಷದ ಆನಂದವಳ್ಳಿ ಎನ್ನುವ ಮಹಿಳೆ, ತಾನು ಎಂದಿಗೂ ಇದೆ ಸ್ಥಳೀಯ ಸಂಸ್ಥೆಯಲ್ಲಿ ಮುಖ್ಯಸ್ಥೆಯಾಗಿ ನೇಮಕವಾಗುತ್ತೆನೆ ಎಂದು ಅಂದುಕೊಂಡಿರಲಿಲ್ಲವಂತೆ.  

Advertisement

ಮತ್ತು ಈ ರೀತಿಯ ಅಧ್ಯಕ್ಷಸ್ಥಾನ ಸ್ವೀಕರಿಸಿದ ಮಹಿಳೆ ಹೇಳಿದ್ದು ಸದ್ಯ ಪ್ರಜಾಪ್ರಭುತ್ವದಲ್ಲಿ ಹೊಸ ಮುನ್ನೋಟ ಬದಲಾವಣೆ ಎದ್ದುಕಾಣುತ್ತಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಮತ್ತು ಅಂದು ಇದೆ ಪಥನಪುರ ಪಂಚಾಯಿತಿಯಲ್ಲಿ ಕಸಗುಡಿಸುತ್ತಿದ್ದ ಮಹಿಳೆ, ಇಂದು ಅಧ್ಯಕ್ಷೆ ಆಗಿರುವುದರ ಬಗ್ಗೆ ನಿಮ್ಮ ಅಭಿಪ್ರಾಯ ಕೂಡ ಕಾಮೆಂಟ್ ಮಾಡಿ. ಮತ್ತು ತಪ್ಪದೆ ಎಲ್ಲರೂ ಶೇರ್ ಮಾಡಿ ಧನ್ಯವಾದಗಳು....