ವಿದ್ಯಾಗಮ ಯೋಜನೆಯಿಂದಲೇ ಕೊರೊನ ಬರುತ್ತಾ? ಈ ಮುಖ್ಯ ಸುದ್ದಿಯನ್ನು ತಪ್ಪದೆ ಓದಿ..!

Updated: Wednesday, October 14, 2020, 14:17 [IST]

ಬಸ್ಸಲ್ಲಿ, ಬಜಾರಿನಲ್ಲಿ, ಮಾಲ್ ಗಳಲ್ಲಿ, ದೇವಸ್ಥಾನ, ಮಸಿದಿ, ಚರ್ಚ್ ಗಳು, ಹೋಟೇಲ್ ನಲ್ಲಿ ಬೇಕಾಬಿಟ್ಟಿ ತಿರುಗಾಡುವ ಸ್ಥಳಗಳಲ್ಲಿ, ಮದುವೆ ,ಮುಂಜಿ, ಚುನಾವಣೆಯ ಮತದಾನದ ಸಮಯದಲ್ಲಿ ಬರದೇ ಇರುವ ಕೊರೊನ ಶಾಲೆಗಳಲ್ಲಿ ಕುಳಿತರೆ ಮಾತ್ರ ಬರುತ್ತಾ??.....ಕೋರೊನ ಹೊರಗಡೆ ಹೋಗಿ ಬರುವ ಪಾಲಕರು & ಪೋಷಕರ ಮೂಲಕ ಮಕ್ಕಳಿಗೆ ಬರಲ್ವಾ?? ವಿದ್ಯಾಗಮ ಕಾರ್ಯಕ್ರಮದಿಂದ ನಷ್ಟವಾಗಿದ್ದು ಬಡಮಕ್ಕಳಿಗೆ ಹೊರತು ಶ್ರೀಮಂತರಿಗೆ ಅಲ್ಲಾ, ಶ್ರೀಮಂತ ಮಕ್ಕಳಿಗೆ ವಿವಿಧ ತಂತ್ರಜ್ಞಾನ ಬಳಸಿ ಕಲಿಯುವ ಸಾಮಾರ್ಥ್ಯವಿದೆ, ಆದರೆ ಬಡ ಮಕ್ಕಳಿಗೆ ಇರುವ ಏಕೈಕ ದಾರಿ ಈ ವಿದ್ಯಾಗಮ, ಕೊರೊನದಿಂದ ಮರಣಹೊಂದಿದ ಶಿಕ್ಷಕರ ಬಗ್ಗೆ ನಮಗೂ ಆತಂಕವಿದೆ, ಆದರೆ ಕೊರೊನದಿಂದಾಗಿ ಯಾವುದಾದರೂ ಮಕ್ಕಳು ಮರಣ ಹೊಂದಿದ್ದಾರಾ??    

Advertisement

ಮರಣ ಹೊಂದಿದ ಎಲ್ಲಾ ಶಿಕ್ಷಕರಲ್ಲಿ ಇನ್ಯಾವುದೇ ಬೇರೆ ಕಾಯಿಲೆಯ ಜೊತೆಗೆ ಕೊರೊನ ಸಹ ಬಂದಿರಬಹುದು? ಅಥವಾ ಕೆಲವು ಶಿಕ್ಷಕರು ಕೊರೊನದಿಂದಲೆ ಮರಣ ಸಹ ಹೊಂದಿರಬಹುದು, ಯಾವುದೇ ವ್ಯಕ್ತಿ (ಶಿಕ್ಷಕರೇ ಇರಲಿ ಯಾವುದೇ ಪ್ರಜೆಗಳೇ ಇರಲಿ) ಮರಣ ಹೊಂದಿದರೆ ಅದು ಆ ಕುಟುಂಬಕ್ಕೆ ತುಂಬಲಾರದ ನಷ್ಟನೆ, ಹಾಗಂತ ಇಡಿ ವಿದ್ಯಾಗಮ ಯೋಜನೇಯನ್ನೆ ಕೈಬಿಡುವುದು ತಪ್ಪಾಗುತ್ತೆ, ಅನಾರೋಗ್ಯ ಸಮಸ್ಯೆ ಅಥವಾ ಕೊರೊನದ ಭಯ ಇರುವ ಶಿಕ್ಷಕರು ಅಥವಾ ಮಕ್ಕಳು ದೀರ್ಘಾವದಿ ರಜೆ ತೆಗೆದುಕೊಂಡು ಮನೆಯಲ್ಲಿ ಕೂಡಲಿ, ಸಮಸ್ಯೆಗೆ ಎದುರಿ ಬಡ ಮಕ್ಕಳ ಕಲಿಕೆಯನ್ನೆ ಕಸಿಯುವುದು ಯಾವ ಧರ್ಮ?? ಇತ್ತಿಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ  ಕಾರ್ಯವನ್ನೆ ಮೆಚ್ಚಿ ಲಕ್ಷಾಂತರ ಮಕ್ಕಳು ಖಾಸಗಿ ಶಾಲೆಯನ್ನು ತೊರೆದು   

Advertisement

ನಮ್ಮ ಸರ್ಕಾರಿ ಶಾಲೆಗೆ ಸೇರುತ್ತಿರುವದನ್ನು ನೋಡಿ ಕಾಣದ ಕೈಗಳು (ಖಾಸಗಿ ಶಾಲೆ ಸ್ಥಾಪನೆ ಮಾಡಿದ ದೊಡ್ಡ ದೊಡ್ಡ ಕುಳಗಳು) ವಿದ್ಯಾಗಮ ಯೋಜನೆ ವಿರುದ್ದವೇ ಅಪಪ್ರಚಾರ ಮಾಡಿ ಇಂದು ಲಕ್ಷಾಂತರ ಬಡ ಮಕ್ಕಳ ಕಲಿಕೆಯನ್ನೆ ಕಸಿದುಬಿಟ್ಟಿವೆ ಎಂಬ ಅನುಮಾನ ಮೂಡುತ್ತಿದೆ.....

ಸಮಸ್ಯೆಗೆ (ಕೊರೊನಕ್ಕೆ) ಪರಿಹಾರದ ದಾರಿ ಹುಡಕಬೇಕೆ ಹೊರತು ಅದಕ್ಕೆ ಎದುರಿ ಓಡುವುದು ಅಲ್ಲಾ. ಎಲ್ಲಾ ಕಡೆಯೂ ಮುನ್ನೆಚ್ಚರಿಕೆ ಅಗತ್ಯ, ನಮ್ಮ ಜೀವ, ಜೀವನ ಎರಡೂ ನಮ್ಮ ಕೈಯಲ್ಲಿ ಇದೆ, ಇದು ನನ್ನ ಅನಿಸಿಕೆ ಅಷ್ಟೇ, ಅವರವರ ಅಭಿಪ್ರಾಯಗಳು ಅವರವರಿಗೆ ಬಿಟ್ಟದ್ದು....ಮೇಲಿನ ಎಲ್ಲಾ ಮಾಹಿತಿ ನಮಗೆ ಸಾಮಾಜಿಕ ಜಾಲತಾಣಗಳಲ್ಲಿ ದೊರಕಿದೆ.ಈ ಮಾಹಿತಿ ಬಗ್ಗೆ ತಪ್ಪದೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಗೆ ತಿಳಿಸಿ.ಎಲ್ಲರೂ ಶೇರ್ ಮಾಡಿ ಧನ್ಯವಾದಗಳು...

 

ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.