ಕಣ್ಣೀರು ಹಾಕಿದರೆ ಮತದಾರರು ಕರಗುವುದಿಲ್ಲ ಎಂದು ಕುಸುಮಾಗೆ ಟಾಂಗ್ ಕೊಟ್ಟ ಮುನಿರತ್ನ..!

Updated: Wednesday, November 11, 2020, 12:02 [IST]

ಕೇವಲ ಕಣ್ಣೀರು ಹಾಕಿದರೆ ಮತ ಹಾಕುವವರು ಕರಗುವುದಿಲ್ಲ ಎಂದು ಈಗಷ್ಟೇ ಉಪಚುನಾವಣಾ ಫಲಿತಾಂಶದಲ್ಲಿ ಜಯ ಬಾರಿಸಿರುವ ಮುನಿರತ್ನ ಅವರು, ಅತ್ತ ಕಾಂಗ್ರೆಸ್ಸಿನ ಕುಸುಮಾ ಅವರಿಗೆ ಟಾಂಗ್ ನೀಡಿದ್ದಾರೆ ಎಂಬುದಾಗಿ ಮಾಧ್ಯಮವೊಂದರ ಮೂಲಕ ತಿಳಿದುಬಂದಿದೆ. ಜಯಶಾಲಿಯಾಗಿ ಹೊರ ಹೊಮ್ಮಿರುವ ಮುನಿರತ್ನ ಅವರು ಸುದ್ದಿಗಾರರೊಂದಿಗೆ ಮಾತನಾಡುವ ಸಮಯದಲ್ಲಿ, ರಾಜರಾಜೇಶ್ವರಿ ಕ್ಷೇತ್ರದ ಎಲ್ಲಾ ಮತದಾರರಿಗೂ ಮೊದಲಿಗೆ ಧನ್ಯವಾದಗಳನ್ನು ತಿಳಿಸಿದರು.   

Advertisement

ತದನಂತರ ಪ್ರತಿಸ್ಪರ್ಧಿ ಕುಸುಮಾ ಅವರ ಬಗ್ಗೆ ಮಾತನಾಡಿದ ಮುನಿರತ್ನ ಅವರು, ' ಸತ್ಯ ಮಾತನಾಡಿ, ಕೊನೆಯ ಹಂತದಲ್ಲಿ ನಾನು ಬಳಸದಿರುವ ಪದವನ್ನು ಬಳಸಿದ್ದೇನೆ ಎಂಬುದಾಗಿ ಹೇಳಿ ಕಣ್ಣೀರು ಹಾಕಿದ್ದೀರಲ್ವ, ಇದಕ್ಕಿಂತ ಮತ್ತೊಂದು ದೊಡ್ಡ ತಪ್ಪು ಇಲ್ಲ. ಇನ್ಮುಂದೆ ಯಾದರೂ, ಇಂತಹ ತಪ್ಪುಗಳನ್ನು ಮಾಡಬೇಡಿ. ನನ್ನ ಕೊನೆಯ ಉಸಿರು ಇರುವವರೆಗೂ ಯಾವುದೇ ಹೆಣ್ಣುಮಗಳಿಗೆ ಕೆಟ್ಟದಾಗಿ ಬೈದಿಲ್ಲ, ಬೈಯುವುದಿಲ್ಲ'  ಇದರ ನಡುವೆಯೂ ಕುಸುಮಾ ಅವರು ಆ ರೀತಿ ಹೇಳಿದ್ದು ತಪ್ಪು ಎಂಬುದಾಗಿ ಮಾತನಾಡಿದ ಮುನಿರತ್ನ ಅವರು, ಇನ್ನುಮುಂದೆ ಆದರೂ ಸತ್ಯವನ್ನು ಮಾತನಾಡಿ ಎಂದು ಸಲಹೆ ನೀಡಿದರು.  

' ಜೊತೆಗೆ ಈ ಕ್ಷೇತ್ರಕ್ಕೆ ನ್ಯಾಯ ಒದಗಿಸುತ್ತೇನೆ, ಮತ್ತು ಕ್ಷೇತ್ರದ ಅಭಿವೃದ್ಧಿಯಾಗಬೇಕು. ಜೊತೆಗೆ ಹಳೆಯ ಬೆಂಗಳೂರು ಸುಮಾರು ಐವತ್ತು ವರ್ಷಗಳಿಂದ ಅಭಿವೃದ್ಧಿಯಾಗಿದೆ ಹೌದು, ಆದ್ರೆ ಅದಕ್ಕಿಂತ ಉತ್ತಮವಾದ ರೀತಿಯಲ್ಲಿ ನಮ್ಮ ಕ್ಷೇತ್ರದ ಅಭಿವೃದ್ದಿಗಾಗಿ ದುಡಿಯುತ್ತೇನೆ' ಎಂಬುದಾಗಿ ಹೇಳಿದರು. ಜೊತೆಗೆ ನನ್ನ ಮೇಲೆ ನಂಬಿಕೆ ಇಟ್ಟು ಮತ ಹಾಕಿದ್ದಕ್ಕೆ ,ಖಂಡಿತವಾಗಿಯೂ, ಪ್ರಾಮಾಣಿಕವಾಗಿ ಸೇವೆ ಮಾಡುತ್ತ ಇಲ್ಲಿ ಕೆಲಸ ಮಾಡುತ್ತೇನೆ.  

Advertisement

ನಮಗೆ ಇನ್ನೂ ಎರಡೂವರೆ ವರ್ಷ ಸಮಯವಿದೆ, ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತೇನೆ, ಮತ್ತು ಏನೇ ಇರಲಿ ಕ್ಷೇತ್ರದ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ಜನರ ಋಣ ತೀರಿಸುವುದಾಗಿ ಚಾಮುಂಡೇಶ್ವರಿ ಮೇಲೆ ಆಣೆ ಪ್ರಮಾಣ ಮಾಡುತ್ತೇನೆ' ಎನ್ನುವ ನಿಟ್ಟಿನಲ್ಲಿ ಭರವಸೆ ನೀಡಿ ಮುನಿರತ್ನ ಮಾತನಾಡಿರು. ಜೊತೆಗೆ 'ಕಳೆದ ಬಾರಿ ಸುಮಾರು 26 ಸಾವಿರ ಲೀಡ್ ಬಂದಿತ್ತು. ಆದರೆ ಈ ಬಾರಿ ಸುಮಾರು 57000 ಬಂದಿದೆ. ಇದು ನನ್ನ ಕ್ಷೇತ್ರದ ಮತದಾರ ದೇವರುಗಳು ನನ್ನ ಮೇಲೆ ಇಟ್ಟಿರುವ ನಂಬಿಕೆಯಾಗಿದೆ. ಹಾಗಾಗಿ ಮೊದಲನೇ ಚುನಾವಣೆಯಲ್ಲಿ 17000 ಎರಡನೆಯ ಚುನಾವಣೆಯಲ್ಲಿ 26000 ಹಾಗೂ ಮೂರನೆಯ ಚುನಾವಣೆಯಲ್ಲಿ 57000 ಲೀಡ್  ಬಂದಿದೆ' ಜೊತೆಗೆ ಬಂದಿರುವುದಾಗಿ ಮುನಿರತ್ನ ಅವರು ಮಾಧ್ಯಮದ ಮುಂದೆ ಮಾತನಾಡಿದರು.   

Advertisement

ಜೊತೆಗೆ ' ತಮ್ಮ ಗೆಲುವಿಗೆ ಭಾರತೀಯ ಜನತಾ ಪಾರ್ಟಿಯ ನಾಯಕರು, ಮುಖ್ಯಮಂತ್ರಿ, ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವ್ರು, ಎಲ್ಲಾ ಸಚಿವರು ಮತ್ತು ಶಾಸಕರ ಮಿತ್ರರು ಹಾಗೂ ಕಾರ್ಯಕರ್ತರು ಕೂಡ ಕಾರಣವಾಗಿದ್ದಾರೆ. ಅವ್ರೆಗೆಲ್ಲರಿಗೂ ಈ ಗೆಲುವಿನ ಅಂತರವನ್ನು ಅರ್ಪಿಸುವುದಾಗಿ ಮುನಿರತ್ನ ಅವರು ಮಾಧ್ಯಮ ಮುಂದೆ ಮಾತನಾಡಿದರು....