ಉಡುಪಿ ಯುವತಿಯೊಬ್ಬಳ ಅನುಮಾನಸ್ಪದ ಸಾವು..! ಕಾಲ್ ರೆಕಾರ್ಡ್ ನಲ್ಲಿ ಸ್ಪೋಟಕ ಮಾಹಿತಿ..!

Updated: Wednesday, October 28, 2020, 08:05 [IST]

ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ ಯುವಕನೊಬ್ಬ, ಚಿಂತಾಜನಕ ಸ್ಥಿತಿಯಲ್ಲಿದ್ದ ಹುಡುಗಿ ತಲೆತಿರುಗಿ ಬಿದ್ದಿದ್ದಾಳೆ, ಆಕೆಗೆ ಚಿಕಿತ್ಸೆಯನ್ನು ನೀಡಿ ಎಂದು ಹೇಳಿದ ಯುವಕನು ಆಸ್ಪತ್ರೆಯಿಂದ ಮರೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ.. ಹೌದು ಶನಿವಾರ ಅಕ್ಟೋಬರ್ 24 ರಂದು ಸಂಜೆ ಆರು ಗಂಟೆ 30 ನಿಮಿಷದ ಹೊತ್ತಿಗೆ ಉಡುಪಿಯ ಗಾಂಧಿ ಆಸ್ಪತ್ರೆಯ ಬಾಗಿಲಿಗೆ ಆಟೋರಿಕ್ಷಾದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು, ಯುವಕನು ಆಸ್ಪತ್ರೆಯ ಸ್ಟ್ರಕ್ಚರ್ ಗೆ ಹಾಕಿದ. ಈ ಹುಡುಗಿ ತಲೆತಿರುಗಿ ಬಿದ್ದಿದ್ದಾಳೆ, ಚಿಕಿತ್ಸೆಯನ್ನು ನೀಡಿ ಎಂದು ಹೇಳಿದವನೇ ಅಲ್ಲಿಂದ ಕಾಲ್ಕಿತ್ತಿದ್ದ. ಆಸ್ಪತ್ರೆಗೆ ದಾಖಲಿಸಿಕೊಂಡ ಕೆಲವೇ ಸಮಯದಲ್ಲಿ ಯುವತಿ ಸಾವನ್ನಪ್ಪಿದ್ದಾಳೆ ಎಂದು ಸುದ್ದಿ ಮಾಧ್ಯಮಗಳ ಮೂಲಕ ತಿಳಿದುಬಂದಿದೆ.

ಇತ್ತ ಯುವತಿಯ ಮನೆಯವರಿಗೆ ಅವನೇ ವಿಷಯವನ್ನು ತಿಳಿಸಿದ್ದು, ಬಳಿಕ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಕುಟುಂಬದವರು ಆಸ್ಪತ್ರೆಗೆ ಧಾವಿಸಿ ಬಂದಿದ್ದಾರೆ. ಮೃತ ಯುವತಿಯನ್ನು ಉಡುಪಿಯ ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಬರುವ ಕುಕ್ಕೆ ಹಳ್ಳಿಯ ನಿವಾಸಿ ರಕ್ಷಿತ ನಾಯಕ ಎಂದು ಗುರುತಿಸಲಾಗಿದೆ. ದ್ವಿತೀಯ ವರ್ಷದ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದರು. ಸಣ್ಣ ವಯಸ್ಸಿನಲ್ಲೇ ದೊಡ್ಡ ಮಹತ್ವಾಕಾಂಕ್ಷೆಯನ್ನು ಹೊಂದಿದ್ದ ರಕ್ಷಿತಾ ಮಾಡಲಿಂಗ್ ಕ್ಷೇತ್ರದಲ್ಲಿ ಮುಂದುವರೆಯುವ ಬಗ್ಗೆ ಕನಸುಕಂಡಿದ್ದರು. 

ಇನ್ಸ್ಟಾಗ್ರಾಂ ನಲ್ಲಿ 44000 ಫಾಲವರ್ಸ್ ಹೊಂದಿರುವ  ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದರು. ಜೊತೆಗೆ ಒಂದು ವರ್ಷದಿಂದ ಪ್ರಶಾಂತ್ ಕುಂದರ್ ಜೊತೆ ಲಿವಿಂಗ್ ರಿಲೇಶನ್ ಶಿಪ್ನಲ್ಲಿದ್ದರು. ಆದರೆ ಪೋಷಕರಿಂದ ದೂರವಿದ್ದರೂ. ದೂರವುಳಿದಿದ್ದೆ ಇದಕ್ಕೆ ಕಾರಣ ಎಂಬ ಮಾತುಗಳು ಸ್ಥಳೀಯರಿಂದ ಕೇಳಿಬರುತ್ತಿವೆ. ಕೊರೋನ ಸಮಯದಲ್ಲಿ ಮಂಗಳೂರಿನ ಹೋಟೆಲೊಂದರಲ್ಲಿ ನನಗೆ ಕೆಲಸ ಸಿಕ್ಕಿದೆ. ಉಡುಪಿಯ ಅಂಬಾಗಿಲು ಪರಿಸರದಲ್ಲಿ ಸ್ನೇಹಿತೆಯ ಜೊತೆಗೆ ವಾಸವಾಗಿದ್ದೇನೆ ಎಂದು ಮನೆವರೆಗೆ ತಿಳಿಸಿದ್ದ ರಕ್ಷಿತಾ, 15 ದಿನಕ್ಕೊಮ್ಮೆ ಮನೆಗೆ ಹೋಗಿಬಂದು ಮಾಡುತ್ತಿದ್ದಳು. ಆಗಾಗಿ ಹೆತ್ತವರು ಆಕೆಯ ಬಗ್ಗೆ  ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.

ಇನ್ನು ರಕ್ಷಿತಾಳನ್ನು ಆಸ್ಪತ್ರೆಗೆ ಸೇರಿಸಿ ನಾಪತ್ತೆಯಾಗಿದ್ದ ಯುವಕನು, ಕೊಲ್ಲೂರು ಸಮೀಪದ ಜಡ್ಕಲ್ ನಿವಾಸಿ ಪ್ರಶಾಂತ್ ಕುಂದರ್ ಎಂದು ಗುರುತಿಸಲಾಗಿದೆ. ಸದ್ಯ ಪ್ರಶಾಂತ್ ನಗರದ ಫರ್ನಿಚರ್ ವರ್ಲ್ಡ ನಲ್ಲಿ ಕೆಲಸದಲ್ಲಿದ್ದ. ಇಂಟೀರಿಯರ್ ಡಿಸೈನ್ ಹಾಗೂ ಫರ್ನಿಚರ್ ಸೇಲ್ ಮಾಡುತ್ತಿದ್ದ. ಇದಕ್ಕೂ ಮೊದಲೇ ಒಬ್ಬರನ್ನು ಪ್ರೀತಿಮಾಡಿ ಮದುವೆಯಾಗಿದ್ದ ಈತ ಪತ್ನಿಯ ಜೊತೆಗೆ ಉಪ್ಪೂರಿನಲ್ಲಿ ವಾಸವಾಗಿದ್ದ. ಇತ್ತ ರಕ್ಷಿತಾ ಉಡುಪಿಯ ಅಂಬಾಗಿಲಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಈಗಾಗಲೇ ವಿವಾಹಿತ ನಾಗಿರುವ ಪ್ರಶಾಂತ್ ರಕ್ಷಿತಾಳನ್ನು ಎಲ್ಲಿಂದ ಕರೆತಂದಿದ್ದ ಎಂಬ ತನಿಖೆ ನಡೆಯುತ್ತಿದೆ..

ಈಗಾಗಲೇ ಪೊಲೀಸರ ವಶದಲ್ಲಿರುವ ಪ್ರಶಾಂತ್ ಹಾಗೂ ರಕ್ಷಿತಾ ಕಾಲ್ ರೆಕಾರ್ಡರ್ ನಿಂದ ಸ್ಫೋಟಕ ವಿಚಾರ ಬಯಲಾಗಿದೆ. ನಾನು ವಿಪರೀತ ಕುಡಿದಿದ್ದೇನೆ. ಸಾಯುತ್ತೇನೆ ಎಂದು ರಕ್ಷಿತಾ, ಪ್ರಶಾಂತ್ ಗೆ ಕರೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಇನ್ನು ಪ್ರಶಾಂತ್ ತಕ್ಷಣ ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು. ಆಕೆ ಮರಣ ಹೊಂದುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾನೆ. ಎಂದು ತಿಳಿದುಬಂದಿದೆ. ರಕ್ಷಿತಾ ಪೋಷಕರು ನಗರದ ಪೊಲೀಸ್ ಠಾಣೆಗೆ ಮಗಳ  ಅನುಮಾನಸ್ಪದ ಸಾವಿನ ಬಗ್ಗೆ ದೂರು ದಾಖಲಿಸಿದ್ದಾರೆ. ಉಡುಪಿ ನಗರದ ಠಾಣಾ ಪೊಲೀಸರು ನಿಗೂಢ ಸಾವಿನ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. 

ರಕ್ಷಿತಾ ಮೃತದೇಹದ ಕತ್ತಿನ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವ ಗಾಯಗಳು ಪತ್ತೆಯಾಗಿದ್ದು. ಇದು ಆತ್ಮಹತ್ಯೆಯೋ? ಅಥವಾ ಕೊಲೆಯೋ? ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ಮೃತದೇಹದ ಪರಿಶೀಲನೆ ಮಾಡಿರುವ ವೈದ್ಯರು ದೇಹದಲ್ಲಿ ಆಲ್ಕೋಹಾಲ್ ಕಂಟೆಂಟ್ ಇರುವುದಾಗಿ ತಿಳಿಸಿದ್ದಾರೆ. ಜೊತೆಗೆ ರಕ್ಷಿತಾ ಪಂಚೆಯಿಂದ ನೇಣುಬಿಗಿದುಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ. ಆದರೆ ಅನುಮಾನಾಸ್ಪದ ಸಾವಿನ ಬಗ್ಗೆ ನಿಖರವಾದ ಮಾಹಿತಿಗಾಗಿ ಪೊಲೀಸರು ತೀವ್ರತರ ತನಿಖೆ ಆರಂಭಿಸಿದ್ದಾರೆ ಎಂದು ಈ ಎಲ್ಲಾ ಮಾಹಿತಿ ನಮಗೆ ಸಾಮಾಜಿಕ ಸುದ್ದಿಮಾಧ್ಯಮಗಳಿಂದ ತಿಳಿದುಬಂದಿದೆ...