ಅತ್ತ ಯುವರಾಜ್ ಜೈಲಿನಲ್ಲಿ, ಈತನ ಪತ್ನಿ ಪ್ರೇಮಾಗೆ ಇತ್ತ ಜೀವ ಬೆದರಿಕೆ..! ಹಾಕಿದವರ್ ಯಾರ್ ನೋಡಿ

Updated: Thursday, January 7, 2021, 12:49 [IST]

ಹೌದು ನಿನ್ನೆಯಷ್ಟೇ ಯುವರಾಜ್ ಸ್ವಾಮಿಯವರು ನಟಿ ರಾಧಿಕಾ ಕುಮಾರಸ್ವಾಮಿ ಬ್ಯಾಂಕ್ ಅಕೌಂಟ್ ಗೆ 75 ಲಕ್ಷ ಹಣ ನೀಡಿದ್ದೇನೆ ಎಂದು ಸಿಸಿಬಿಯವರ ವಿಚಾರಣೆ ವೇಳೆ ಮಾಹಿತಿ ಬಿಚ್ಚಿಟ್ಟು ಆರೋಪ ಮಾಡಿದ್ದರು. ಯುವರಾಜ್ ರಾಜಕಾರಣಿಗಳಿಗೆ ಸಿಎಂ ಮಾಡುವುದಾಗಿ ಹೇಳಿ ಪಡೆದ ಹಣದ ಹಿನ್ನೆಲೆಯಲ್ಲಿ ಇದೀಗ ಜೈಲು ಸೇರಿದ್ದಾರೆ. ಮತ್ತು ಇತ್ತ ನಟಿ ರಾಧಿಕಾ ಕುಮಾರಸ್ವಾಮಿ ಅವರು ಹೇಳಿದ ಹಾಗೆ, ಯುವರಾಜ್ ಸ್ವಾಮಿ ನಮ್ಮಪ್ಪನಿಗೆ ಪರಿಚಯ 17 ವರ್ಷದಿಂದ ಕೆಲವೊಂದು ವಿಚಾರಗಳನ್ನು ಜ್ಯೋತಿಷ್ಯದ ತರ ಇವರು ಹೇಳುತ್ತಿದ್ದರು, ನಾವು ಪಾಲಿಸುತ್ತಿದ್ದೆವು ಎಂಬುದಾಗಿ ಹೇಳಿದ್ದರು.

Advertisement

ಕೇವಲ ಯುವರಾಜ್ ಅವರು ನನಗೆ ಕೊಟ್ಟಿದ್ದು 15 ಲಕ್ಷ ಹಣ ಮಾತ್ರ,ಅದು ಸಿನಿಮಾದಲ್ಲಿ ಅಭಿನಯ ಮಾಡಲಿಕ್ಕೆ ಎಂದು ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು. ಮತ್ತು ಈ ರೀತಿ ಸುಳ್ಳು ಆರೋಪ ನಮ್ಮ ಮೇಲೆ ಮಾಡುತ್ತಿದ್ದಾರೆ ಎಂಬುದಾಗಿಯೂ ಕೂಡ ನಿನ್ನೆಯಷ್ಟೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ ರಾಧಿಕಾ ಕುಮಾರಸ್ವಾಮಿ. ಇದರ ನಡುವೆ ಯುವರಾಜ್ ಸ್ವಾಮಿಯವರ ಕುಟುಂಬ ಇದೀಗ ಸಂಕಷ್ಟದಲ್ಲಿದ್ದು, ಅತ್ತ ಸ್ವಾಮಿಯವರು ಜೈಲಿನಲ್ಲಿರುವಾಗ ಈತನ ಹೆಂಡತಿ ಪ್ರೇಮಾರವರಿಗೆ ಜೀವ ಬೆದರಿಕೆಗಳು ಬರುತ್ತಿವೆಯಂತೆ.

Advertisement

ಹೌದು ಇದೆ ವಿಚಾರದ ಹಿನ್ನೆಲೆಯಲ್ಲಿ ಈಗ ಮಾಧ್ಯಮದ ಮುಂದೆ ಕಾಣಿಸಿಕೊಂಡ, ಯುವರಾಜ್ ಸ್ವಾಮಿಯ ಪತ್ನಿ ಪ್ರೇಮಾರವರು, ನಮಗೆ ಲೈಫ್ ತೇಟರ್ನ್ ಬೆದರಿಕೆಗಳು ಬರುತ್ತಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಕೂಡ ಯಾರಿಗೂ ಯಾವತ್ತೂ ಮೋಸ ಮಾಡಿಲ್ಲ, ಹಣ ಕೊಟ್ಟಿರುವುದಕ್ಕೆ ನಮ್ಮ ಹತ್ತಿರ ದಾಖಲೆಗಳಿವೆ. ಅಬ್ಬಬ್ಬಾ ಅಂದರೆ ಏನು ಮಾಡುತ್ತಾರೆ, ಜೀವ ತೆಗೆಯುತ್ತಾರೋ ತೆಗೆಯಲಿ ಬಿಡಿ, ತದನಂತರ ಅವರು ಅನುಭವಿಸುತ್ತಾರೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಮತ್ತು ಯುವರಾಜ್ ಪತ್ನಿ ಪ್ರೇಮಾರವರು,  ತಮಗೆ ಯಾರು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂಬ ವಿಷಯವನ್ನು ಬಹಿರಂಗವಾಗಿ ಹೇಳಿಲ್ಲ. ಬದಲಿಗೆ ರಾಜಕೀಯದ ಕುತಂತ್ರವಿರಬಹುದು ಎಂದು ಯುವರಾಜ್ ಸ್ವಾಮಿಯ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ..