ಬಾಡಿಗೆ ಮನೆಯಲ್ಲಿದ್ದವರಿಗೆ ಕೇಂದ್ರದಿಂದ ಹೊಸ ರೂಲ್ಸ್ ಘೋಷಣೆ !! ನಿಯಮ ಮೀರಿದರೆ 5000/- ರು ದಂಡ !!
ಸ್ನೇಹಿತರೆ, ನಮಸ್ಕಾರ. ಮನೆ ಬಾಡಿಗೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ದೇಶಾದ್ಯಂತ ಹೊಸ ನಿಯಮವನ್ನು ಜಾರಿಗೆ ತಂದಿದೆ. ಬಾಡಿಗೆ ಮನೆಯಲ್ಲಿ ವಾಸಿಸುವವರು ಹಾಗೂ ಬಾಡಿಗೆಗೆ ಮನೆಯನ್ನು ನೀಡುವವರು ಇಬ್ಬರಿಗೂ ಈ ನಿಯಮ ಅನ್ವಯವಾಗುತ್ತದೆ. ಬಾಡಿಗೆ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರವು ಪಾರದರ್ಶಕತೆ ಮತ್ತು ಕಾನೂನುಬದ್ಧ ರಕ್ಷಣೆಯನ್ನು ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ.
ಹೊಸ ನಿಯಮಗಳ ಪ್ರಕಾರ, ಬಾಡಿಗೆ ಕರಾರಿಗೆ ಸಹಿ ಹಾಕಿದ ನಂತರ ಎರಡು ತಿಂಗಳೊಳಗಾಗಿ ಆ ಕರಾರು ಪತ್ರವನ್ನು ಸಂಬಂಧಿತ ವಲಯದ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು. ಇದನ್ನು ಆನ್‌ಲೈನ್ ಮೂಲಕವೂ ಮಾಡಬಹುದಾಗಿದೆ, ಏಕೆಂದರೆ ರಾಜ್ಯ ಸರ್ಕಾರಗಳು ಅಧಿಕೃತ ಆನ್‌ಲೈನ್ ನೋಂದಣಿ ಸೌಲಭ್ಯಗಳನ್ನು ಒದಗಿಸಿವೆ. ಈ ನಿಯಮವನ್ನು ಉಲ್ಲಂಘಿಸಿದರೆ ಮನೆ ಮಾಲೀಕರಿಗೆ 5,000 ರೂ. ದಂಡ ವಿಧಿಸಲಾಗುತ್ತದೆ.
ಇದುವರೆಗೆ ಕೆಲವು ರಾಜ್ಯಗಳಲ್ಲಿ ಅಥವಾ ನಗರಗಳಲ್ಲಿ ಮನೆ ಬಾಡಿಗೆ ನಿಗದಿಯಾದ ಮೊತ್ತದ 10 ತಿಂಗಳ ಬಾಡಿಗೆಯನ್ನು ಡೆಪಾಸಿಟ್ (ಅಡ್ವಾನ್ಸ್) ರೂಪದಲ್ಲಿ ಪಡೆಯುವ ಅಘೋಷಿತ ನಿಯಮ ಜಾರಿಯಲ್ಲಿತ್ತು. ಆದರೆ ಈಗ ಅದಕ್ಕೆ ಅಂತ್ಯವಾಗಲಿದೆ. ಮನೆ ಮಾಲೀಕರು ಕೇವಲ 2 ತಿಂಗಳ ಬಾಡಿಗೆಯಷ್ಟೇ ಅಡ್ವಾನ್ಸ್ ಪಡೆಯಲು ಅವಕಾಶವಿರುತ್ತದೆ. ವಾಣಿಜ್ಯ ಬಳಕೆಗೆ ಕಟ್ಟಡವನ್ನು ಬಾಡಿಗೆಗೆ ನೀಡಿದರೆ, ಗರಿಷ್ಠ 6 ತಿಂಗಳ ಬಾಡಿಗೆಯಷ್ಟೇ ಅಡ್ವಾನ್ಸ್ ಪಡೆಯಬಹುದು.
11 ತಿಂಗಳ ಕರಾರು ಮುಗಿದ ನಂತರ, ಬಾಡಿಗೆಯನ್ನು ಏರಿಸಿದರೆ ಹೊಸ ಕರಾರು ಪತ್ರವನ್ನು ಕಡ್ಡಾಯವಾಗಿ ಮಾಡಿಸಬೇಕು. ಈ ಹೊಸ ಕರಾರನ್ನು ಸಹ ಉಪನೋಂದಾವಣಿ ಕಚೇರಿಗಳಲ್ಲಿ ಅಥವಾ ಆನ್‌ಲೈನ್ ಮೂಲಕ ನೋಂದಾಯಿಸುವುದು ಅನಿವಾರ್ಯವಾಗಿರುತ್ತದೆ.
ಮನೆಯಿಂದ ಬಾಡಿಗೆದಾರರನ್ನು ಬಿಡಿಸಲು, ಕನಿಷ್ಠ ಮೂರು ತಿಂಗಳ ಮುಂಚಿತವಾಗಿ ಸೂಚನೆ ನೀಡಬೇಕು. ಏಕಾಏಕಿ ಮನೆ ಬಿಡುವಂತೆ ಹೇಳುವುದು ನಿಯಮ ಉಲ್ಲಂಘನೆಯಾಗುತ್ತದೆ. ಅದೇ ರೀತಿ ಬಾಡಿಗೆದಾರರೂ ಏಕಾಏಕಿ ಮನೆ ಬಿಡಲು ಸೂಚಿಸಿದರೆ ಅದು ಸಹ ನಿಯಮ ಉಲ್ಲಂಘನೆಯಾಗುತ್ತದೆ.
ಬಾಡಿಗೆದಾರರು ಮತ್ತು ಮನೆ ಮಾಲೀಕರ ನಡುವಿನ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲು ಜಿಲ್ಲಾ ಮಟ್ಟದಲ್ಲಿ ವಿಶೇಷ ಬಾಡಿಗೆ ನ್ಯಾಯಾಲಯಗಳು ಅಥವಾ ನ್ಯಾಯಾಧೀಕರಣಗಳನ್ನು ಸ್ಥಾಪಿಸಲಾಗುತ್ತದೆ. ಇವುಗಳಿಗೆ ಬರುವ ವ್ಯಾಜ್ಯಗಳನ್ನು 60 ದಿನಗಳೊಳಗಾಗಿ ಇತ್ಯರ್ಥಗೊಳಿಸುವ ವ್ಯವಸ್ಥೆ ಮಾಡಲಾಗುತ್ತದೆ.




