ಪಿತ್ರಾರ್ಜಿತ ಆಸ್ತಿ ಪಾಲು ಕೇಳುವವರಿಗೆ ರಾಜ್ಯ ಸರ್ಕಾರದಿಂದ ಹೊಸ ನಿಯಮ !!

ಪಿತ್ರಾರ್ಜಿತ ಆಸ್ತಿ ಪಾಲು ಕೇಳುವವರಿಗೆ  ರಾಜ್ಯ ಸರ್ಕಾರದಿಂದ  ಹೊಸ ನಿಯಮ !!

ಇತ್ತೀಚಿನ ದಿನಗಳಲ್ಲಿ ಆಸ್ತಿ ಹಂಚಿಕೆಗೆ ಸಂಬಂಧಿಸಿದ ವಿವಾದಗಳು ಹೆಚ್ಚುತ್ತಿವೆ. ತಾತ-ಮುತ್ತಾತನ ಕಾಲದ ಆಸ್ತಿ, ತಂದೆ-ತಾಯಿಯು ಶ್ರಮಪಟ್ಟು ಮಾಡಿಟ್ಟ ಆಸ್ತಿಯು ಮಕ್ಕಳಿಗೆ ಸುಲಭವಾಗಿ ಲಭಿಸುತ್ತಿತ್ತು. ಆದರೆ ಇದರಿಂದ ಕುಟುಂಬಗಳ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಿದ್ದು, ಸಂಬಂಧಗಳು ಮುರಿಯುವ ಪರಿಸ್ಥಿತಿಯನ್ನೂ ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಈ ಹಿನ್ನೆಲೆಗೊಳಿಸಿ, ಕರ್ನಾಟಕ ಸರ್ಕಾರವು ಹೊಸ ಕಾನೂನನ್ನು ಜಾರಿಗೆ ತಂದಿದ್ದು, ಇದು ಆಸ್ತಿಯ ಪಾಲು ಕೇಳುವವರಿಗೆ ಎಚ್ಚರಿಕೆಯನ್ನು ನೀಡಿದೆ

ಇದುವರೆಗೆ ತಂದೆ-ತಾಯಿಯ ಆಸ್ತಿ ಮಕ್ಕಳಿಗೆ ಸ್ವಾಭಾವಿಕವಾಗಿ ಹಸ್ತಾಂತರವಾಗುತ್ತಿತ್ತು. ಆದರೆ ಕೆಲವು ಸಂದರ್ಭಗಳಲ್ಲಿ ಮಕ್ಕಳಿಂದ ನಿರ್ಲಕ್ಷ್ಯ ಅನುಭವಿಸಿದ ಪೋಷಕರು ವೃದ್ಧಾಶ್ರಮದ ಬದುಕಿಗೆ ದಿಕ್ಕು ಹಿಡಿಯಬೇಕಾಗಿತ್ತು. ಈ ಪರಿಸ್ಥಿತಿಯು ಸರ್ಕಾರದ ಗಮನ ಸೆಳೆದಿದೆ. ಕೇಂದ್ರ ಸರ್ಕಾರವು 2007ರಲ್ಲಿಯೇ ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ’ (Maintenance and Welfare of Parents and Senior Citizens Act, 2007) ಜಾರಿಗೆ ತಂದು, ಮಕ್ಕಳಿಗೆ ಪೋಷಕರ ಆರೈಕೆ ಮಾಡುವುದು ಕಡ್ಡಾಯಗೊಳಿಸಿತ್ತು. ಆದರೆ ಇದರ ಬಗ್ಗೆ ಹೆಚ್ಚಿನ ಜನತೆಗೆ ಅರಿವು ಇರಲಿಲ್ಲ.

ಈಗ ಕರ್ನಾಟಕ ಸರ್ಕಾರ(Karnataka Government)ಈ ಕಾಯ್ದೆಯ ಅನುಷ್ಠಾನಕ್ಕೆ ಮತ್ತಷ್ಟು ಕಠಿಣ ನಿಯಮಗಳನ್ನು ರೂಪಿಸಿದ್ದು, ಮಕ್ಕಳು ಪೋಷಕರ ಆರೈಕೆ ಮಾಡದಿದ್ದರೆ ಆಸ್ತಿಯ ಮೇಲಿನ ಹಕ್ಕು ಕಳೆದುಕೊಳ್ಳುತ್ತಾರೆ. ಈ ಕುರಿತಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ವಿಧಾನ ಪರಿಷತ್‌)ನಲ್ಲಿ ಮಾಹಿತಿ ನೀಡಿದ್ದು, ಪೋಷಕರು ಅಥವಾ ಸಂಬಂಧಿಕರ ಆರೈಕೆಯಿಲ್ಲದೆ ಮಕ್ಕಳಿಗೆ ಆಸ್ತಿ ನೀಡುವುದೇ ತಪ್ಪು ಎಂದು ಸ್ಪಷ್ಟಪಡಿಸಿದ್ದಾರೆ.


ಪೋಷಕರು ಮಕ್ಕಳ ವಿರುದ್ಧ ದೂರು ದಾಖಲಿಸಿದರೆ, ಸೆಕ್ಷನ್ 23ರ ಅಡಿಯಲ್ಲಿ ವಿಲ್ ಅಥವಾ ದಾನಪತ್ರ ಅನ್ನು ರದ್ದುಗೊಳಿಸಲು ಅವರಿಗೇ ಅಧಿಕಾರವಿರುತ್ತದೆ. ಮಕ್ಕಳು ಅಥವಾ ಸಂಬಂಧಿಕರು ಪೋಷಕರ ಆರೈಕೆ ಮಾಡದಿದ್ದರೆ, ವಯಸ್ಸಾದ ಪೋಷಕರು ತಮ್ಮ ಹೆಸರಿನಲ್ಲಿ ಆಸ್ತಿಯನ್ನು ಪುನಃ ವಾಪಸ್ ಪಡೆಯಲು ಅವಕಾಶವಿದೆ.ಈ ಹೊಸ ನಿಯಮದ ಪ್ರಕಾರ, ಮಕ್ಕಳು ಪೋಷಕರ ಆರೈಕೆಯಲ್ಲಿ ವಿಫಲರಾದರೆ ಆಸ್ತಿ ಸಿಗುವುದೇ ಇಲ್ಲ. ಕಾನೂನುಬದ್ಧವಾಗಿ ಆಸ್ತಿಯನ್ನು ವಾಪಸ್ ಪಡೆಯಲು ಪೋಷಕರಿಗೆ ಸಂಪೂರ್ಣ ಅಧಿಕಾರವಿದ್ದು, ಅವರ ಹಿತಸಾಧನೆಗೆ ಸರ್ಕಾರ ಬದ್ಧವಾಗಿದೆ.