30*40 ಸೈಟ್ ನಲ್ಲಿ ಮನೆ ಕಟ್ಟುವರಿಗೆ ಸಿಹಿ ಸುದ್ದಿ ಕೊಟ್ಟ ಸರಕಾರ !! ಜನರು ಫುಲ್ ಕುಶ್

30*40 ಸೈಟ್ ನಲ್ಲಿ ಮನೆ ಕಟ್ಟುವರಿಗೆ ಸಿಹಿ ಸುದ್ದಿ ಕೊಟ್ಟ ಸರಕಾರ !! ಜನರು ಫುಲ್ ಕುಶ್

ಕರ್ನಾಟಕ ರಾಜ್ಯ ಸರ್ಕಾರದ ಹೊಸ ನಿಯಮ – ಸ್ವಂತ ಮನೆ ನಿರ್ಮಾಣಕ್ಕೆ ಗುಡ್ ನ್ಯೂಸ್

ಸ್ನೇಹಿತರೆ, ನಮಸ್ಕಾರ! ನೀವು ಸ್ವಂತ ಮನೆಯನ್ನ ನಿರ್ಮಾಣ ಮಾಡುತ್ತಿರುವವರಾದರೆ, ಕರ್ನಾಟಕ ರಾಜ್ಯ ಸರ್ಕಾರದಿಂದ ಬಹು ದೊಡ್ಡ ಗುಡ್ ನ್ಯೂಸ್ ಬಂದಿದೆ. 1200 ಸ್ಕ್ವೇರ್ ಫೀಟ್ ವಿಸ್ತೀರ್ಣದಲ್ಲಿ ಮನೆ ಕಟ್ಟುವವರಿಗೆ ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

ಮನೆ ಕಟ್ಟುವಾಗ ನೀರು ಮತ್ತು ವಿದ್ಯುತ್ ಸಂಪರ್ಕ ಅತ್ಯಗತ್ಯ. ಆದರೆ ಇದುವರೆಗೆ ಕರ್ನಾಟಕದಲ್ಲಿ ಈ ಸೇವೆಗಳನ್ನು ಪಡೆಯಲು ಓಸಿ (Occupancy Certificate) ಮತ್ತು ಸಿಸಿ (Completion Certificate) ಕಡ್ಡಾಯವಾಗಿತ್ತು. ಈ ನಿಯಮವನ್ನು ಇದೀಗ ಬದಲಾವಣೆ ಮಾಡಲಾಗಿದೆ.

ರಾಜ್ಯ ಸರ್ಕಾರದ ಹೊಸ ಆದೇಶದ ಪ್ರಕಾರ, 1200 ಸ್ಕ್ವೇರ್ ಫೀಟ್ ವಿಸ್ತೀರ್ಣದಲ್ಲಿ ಮನೆ ಕಟ್ಟುವವರಿಗೆ ಓಸಿ ಸರ್ಟಿಫಿಕೇಟ್ ಅಗತ್ಯವಿಲ್ಲ. ಅಂದರೆ, ಇನ್ನು ಮುಂದೆ ಇಂತಹ ಮನೆಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕ ಪಡೆಯಲು ಓಸಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ಈ ನಿಯಮವು ಕೇವಲ 1200 ಸ್ಕ್ವೇರ್ ಫೀಟ್ ವಿಸ್ತೀರ್ಣದಲ್ಲಿ ನಿರ್ಮಾಣವಾಗುವ ಮನೆಗಳಿಗೆ ಮಾತ್ರ ಅನ್ವಯಿಸುತ್ತದೆ. ಇಂತಹ ಮನೆಗಳನ್ನು ಕಟ್ಟುವವರು ಓಸಿ ಇಲ್ಲದೆ ನೇರವಾಗಿ ನೀರು ಮತ್ತು ವಿದ್ಯುತ್ ಸೇವೆಗಳನ್ನು ಪಡೆಯಬಹುದು.

ಇದು ಸ್ವಂತ ಮನೆ ನಿರ್ಮಾಣ ಮಾಡುತ್ತಿರುವವರಿಗೆ ನಿಜಕ್ಕೂ ದೊಡ್ಡ ಸೌಲಭ್ಯ. ಸ್ನೇಹಿತರೆ, ಈ ಮಾಹಿತಿಯನ್ನು ಮನೆ ಕಟ್ಟುತ್ತಿರುವ ಪ್ರತಿಯೊಬ್ಬರಿಗೂ ಹಂಚಿಕೊಳ್ಳಿ.