ಸ್ವಂತ ಕಾರು ಮತ್ತು ಬೈಕ್ ಇದ್ದವರು ಮರೆಯದೆ ನೋಡಿ !! ಈ ನಿಯಮ ಪಾಲಿಸದೇ ಇದ್ದರೆ ನಿಮಗೆ ಬೀಳುತ್ತೆ ದಂಡ ?

ಸ್ವಂತ ಕಾರು ಮತ್ತು ಬೈಕ್ ಇದ್ದವರು ಮರೆಯದೆ ನೋಡಿ !! ಈ ನಿಯಮ ಪಾಲಿಸದೇ ಇದ್ದರೆ ನಿಮಗೆ ಬೀಳುತ್ತೆ ದಂಡ ?

ಸ್ನೇಹಿತರೆ, ನಮಸ್ಕಾರ. ನಿಮ್ಮ ಬಳಿ ಬೈಕ್ ಅಥವಾ ಕಾರು ಇದ್ದರೆ ಇನ್ನು ಮುಂದೆ ಹೊಸ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಈಗಿನಿಂದ ನೀವು ಇಷ್ಟ ಬಂದ ಕಡೆ ವಾಹನವನ್ನು ನಿಲ್ಲಿಸಲು ಅವಕಾಶ ಇರುವುದಿಲ್ಲ. ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿದರೆ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿದೆ.

ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿ ರಸ್ತೆಬದಿ ಪಾರ್ಕಿಂಗ್ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಪೇ-ಅಂಡ್-ಪಾರ್ಕ್ ಯೋಜನೆಯನ್ನು ವಿಸ್ತರಿಸಲು ಮುಂದಾಗಿದೆ. ಈ ಯೋಜನೆಯಡಿ ಈಗಾಗಲೇ ಸಿಬಿಡಿ ವ್ಯಾಪ್ತಿಯ 23 ರಸ್ತೆಗಳನ್ನು ಸೇರಿಸಲಾಗಿದೆ. ಈ ರಸ್ತೆಗಳಲ್ಲಿ ಮುಂದಿನ ಮೂರು ವರ್ಷಗಳ ಕಾಲ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸಲು ಖಾಸಗಿ ನಿರ್ವಾಹಕರನ್ನು ನೇಮಿಸುವ ಸಲುವಾಗಿ ಬೆಂಗಳೂರು ಕೇಂದ್ರ ನಗರ ನಿಗಮವು ಟೆಂಡರ್ ಆಹ್ವಾನಿಸಿದೆ.

ಈ ಯೋಜನೆಗೆ ಆಯ್ಕೆಗೊಂಡಿರುವ ಪ್ರಮುಖ ರಸ್ತೆಗಳಲ್ಲಿ ಕಮರ್ಷಿಯಲ್ ಸ್ಟ್ರೀಟ್, ಕೇಂಬ್ರಿಡ್ಜ್ ರಸ್ತೆ, ವುಡ್ ಸ್ಟ್ರೀಟ್, ಕ್ಯಾಸಲ್ ಸ್ಟ್ರೀಟ್, ಮಗ್ರತ್ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ಕ್ರೆಸೆಂಟ್ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಸಂಪಿಗೆ ರಸ್ತೆ ಸೇರಿವೆ. ಇವುಗಳ ಜೊತೆಗೆ ಇನ್ನೂ ಹಲವು ರಸ್ತೆಗಳನ್ನು ಒಳಗೊಂಡು ಒಟ್ಟು 23 ರಸ್ತೆಗಳಲ್ಲಿ ಪೇ-ಅಂಡ್-ಪಾರ್ಕ್ ವ್ಯವಸ್ಥೆ ಜಾರಿಯಾಗಲಿದೆ.

ಬೆಂಗಳೂರು ನಗರದಲ್ಲಿ, ವಿಶೇಷವಾಗಿ ಕಮರ್ಷಿಯಲ್ ರಸ್ತೆಗಳಲ್ಲಿ, ಕರ್ನಾಟಕ ರಾಜ್ಯ ಸರ್ಕಾರ ಈ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಇನ್ನು ಮುಂದೆ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ವಾಹನವನ್ನು ನಿಲ್ಲಿಸಿದರೆ ಗಂಟೆಯ ಲೆಕ್ಕದಲ್ಲಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ದ್ವಿಚಕ್ರ ವಾಹನ ಸವಾರರು ಗಂಟೆಗೆ ₹15 ಹಾಗೂ ದಿನಕ್ಕೆ ₹175 ಪಾವತಿಸಬೇಕಾಗುತ್ತದೆ. ಕಾರು ಮಾಲಿಕರು ಗಂಟೆಗೆ ₹30 ಹಾಗೂ ದಿನಕ್ಕೆ ₹300 ಪಾವತಿಸಬೇಕಾಗುತ್ತದೆ.

ಪ್ರತಿದಿನ ಕಮರ್ಷಿಯಲ್ ರಸ್ತೆಗಳಲ್ಲಿ ವಾಹನವನ್ನು ಪಾರ್ಕ್ ಮಾಡುವವರು ಪಾಸ್ ಪಡೆಯುವ ವ್ಯವಸ್ಥೆಯೂ ಇದೆ. ಬೈಕ್ ಮಾಲಿಕರು ವರ್ಷಕ್ಕೆ ₹3000 ಪಾವತಿಸಿ ವಾರ್ಷಿಕ ಪಾಸ್ ಪಡೆಯಬಹುದು. ಕಾರು ಮಾಲಿಕರು ವರ್ಷಕ್ಕೆ ₹9000 ಪಾವತಿಸಿ ವಾರ್ಷಿಕ ಪಾಸ್ ಪಡೆಯಬಹುದು.

ಇನ್ನೇನು ಕೆಲವೇ ದಿನಗಳಲ್ಲಿ ಈ ನಿಯಮವನ್ನು ಬೆಂಗಳೂರು ನಗರದಲ್ಲಿ ಜಾರಿಗೆ ತರಲಾಗುತ್ತಿದೆ. ಆದ್ದರಿಂದ, ಸ್ನೇಹಿತರೆ, ಈ ಮಾಹಿತಿಯನ್ನು ಕಾರು ಮತ್ತು ಬೈಕ್ ಹೊಂದಿರುವ ಪ್ರತಿಯೊಬ್ಬರಿಗೂ ಹಂಚಿಕೊಳ್ಳಿ.