ಗಂಡನ ಆಸ್ತಿ ಕೇಳುವ ಹೆಂಡತಿಗೆ ಇದೀಗ ಹೊಸ ರೂಲ್ಸ್ !!

ಸ್ನೇಹಿತರೆ ನಮಸ್ತೆ ಆಸ್ತಿ ವಿಷಯವಾಗಿ ಅದೆಷ್ಟೋ ಸಂಬಂಧಗಳು ಈಗ ಕೋರ್ಟ್ ಮೆಟ್ಟಿಲು ಏರ್ತಾ ಇರುವುದನ್ನ ನೀವೆಲ್ಲರೂ ಕೂಡ ನೋಡೆ ಇರ್ತೀರಾ ಹೌದು ಸ್ನೇಹಿತರೆ ಆಸ್ತಿಯ ವಿಷಯವಾಗಿ ಗಂಡ ಹೆಂಡತಿ ಅಪ್ಪ ಮಕ್ಕಳು ಅಣ್ಣ ತಂಗಿ ಅಕ್ಕ ತಂಗಿ ಸಂಬಂಧಗಳು ಈಗ ಕೋರ್ಟ್ ಮೆಟ್ಟಿಲು ಏರ್ತಾ ಇದೆ ಈ ನಡುವೆ ಹೈಕೋರ್ಟ್ ಈಗ ಗಂಡನ ಆಸ್ತಿಗೆ ಸಂಬಂಧಪಟ್ಟಂತೆ ಬಹು ದೊಡ್ಡ ತೀರ್ಪು ಕೊಟ್ಟಿದೆ ಗಂಡನ ಆಸ್ತಿಯಲ್ಲಿ ಹೆಂಡತಿಗೆ ಯಾವಾಗ ಪಾಲು ಸಿಗುತ್ತೆ ಮತ್ತು ಯಾವಾಗ ಪಾಲು ಸಿಗಲ್ಲ ಅನ್ನೋದರ ಬಗ್ಗೆ ಹೈಕೋರ್ಟ್ ಈಗ ಮಹತ್ವದ ತೀರ್ಪನ್ನ ಕೊಟ್ಟಿದೆ.
ಹಾಗಾದರೆ ಗಂಡನ ಆಸ್ತಿಗೆ ಸಂಬಂಧಪಟ್ಟಂತೆ ಹೈಕೋರ್ಟ್ ಕೊಟ್ಟಿರುವ ಆ ತೀರ್ಪು ಯಾವುದು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ನಿಮಗೆ ತಿಳಿಸಿಕೊಡ್ತೀವಿ. . ಸ್ನೇಹಿತರೆ ಹಿಂದೂ ಉತ್ತರಾಧಿಕಾರಿ ಕಾಯ್ದೆ 1956ರ ಪ್ರಕಾರ ಗಂಡನ ಆಸ್ತಿಯನ್ನ ಎರಡು ವಿಧಗಳಾಗಿ ವಿಂಗಡಣೆ ಮಾಡಲಾಗಿದೆ. ಒಂದು ಸ್ವಯಂ ಗಳಿಸಿದ ಆಸ್ತಿ ಇನ್ನೊಂದು ಪಿತ್ರಾರ್ಜಿತ ಆಸ್ತಿಯಾಗಿರುತ್ತೆ.
ಸ್ವಯಂ ಆಸ್ತಿ ಅಂತ ಹೇಳಿದ್ರೆ ಗಂಡ ತನ್ನ ಸ್ವಂತ ಹಣದಿಂದ ಖರೀದಿ ಮಾಡಿದ ಆಸ್ತಿಯಾಗಿರುತ್ತೆ ಅದೇ ರೀತಿಯಲ್ಲಿ ಪಿತ್ರಾಜಿತ ಆಸ್ತಿ ಅಂತ ಹೇಳಿದ್ರೆ ಗಂಡನಿಗೆ ತನ್ನ ಪೂರ್ವಜರಿಂದ ಬಂದ ಆಸ್ತಿಯಾಗಿರುತ್ತೆ ಇನ್ನು ಗಂಡನಾದವನು ತನ್ನ ಸ್ವಂತ ಹಣದಲ್ಲಿ ಆಸ್ತಿಯನ್ನ ಖರೀದಿ ಮಾಡಿದರೆ ಹೆಂಡತಿಯಾದವಳಿಗೆ ಅದರ ಮೇಲೆ ಯಾವುದೇ ಹಕ್ಕು ಇರುವುದಿಲ್ಲ
ಗಂಡ ಬದುಕಿರುವಾಗ ಆಕೆಗೆ ಆ ಆಸ್ತಿಯ ಮೇಲೆ ಯಾವುದೇ ಅಧಿಕಾರ ಸಿಗುವುದಿಲ್ಲ ಒಂದುವೇಳೆ ಗಂಡನಾದವನು ಸತ್ತಿದ್ದು ಆತನಿಗೆ ಪಿತ್ರಾರ್ಜಿತ ಆಸ್ತಿ ಇದ್ದರೆ ಹೆಂಡತಿಯಾದವಳು ಗಂಡನ ಆಸ್ತಿಯನ್ನ ಕೇಳಬಹುದಾಗಿದೆ ಒಂದುವೇಳೆ ಪತಿಯಾದವನು ತನ್ನ ಸ್ವಂತ ಹಣದಿಂದ ಆಸ್ತಿಯನ್ನು ಖರೀದಿ ಮಾಡಿದ್ದು ಆತ ಒಂದು ವೇಳೆ ಇಹ ಲೋಕವನ್ನು ತ್ಯಜಿಸಿದರೆ ಹೆಂಡತಿ ಆ ಆಸ್ತಿಯಲ್ಲಿ ಸಂಪೂರ್ಣ ಅಧಿಕಾರವನ್ನ ಪಡೆದುಕೊಳ್ಳಬಹುದು ಆದರೆ ಗಂಡನಾದವನು ಬದುಕಿರುವಾಗ ಹೆಂಡತಿಗೆ ಯಾವುದೇ ರೀತಿಯಲ್ಲಿ ನೇರವಾಗಿ ಪಾಲು ಸಿಗುವುದಿಲ್ಲ ಒಂದು ವೇಳೆ ಗಂಡನಾದವನು ಹೆಂಡತಿಗೆ ವಿಚ್ಛೇದನವನ್ನ ಕೊಟ್ಟರೆ ಆಕೆ ಆತನ ಆಸ್ತಿಯಲ್ಲಿ ಪಾಲು ಪಡೆದುಕೊಳ್ಳಬಹುದು ಉದಾಹರಣೆಗೆ ವಿಚ್ಛೇದನದ ಸಂದರ್ಭದಲ್ಲಿ ದೇಶಿಯ ಹಿಂಸಾಚಾರ ಕಾಯ್ದೆ 2005 ಅಥವಾ ಮದುವೆ ಕಾಯ್ದೆಗಳ ಅಡಿಯಲ್ಲಿ ಹೆಂಡತಿಯು ಜೀವನಾಂಶ ಅಥವಾ ಆಸ್ತಿಪಾಲನ್ನ ಪಡೆದುಕೊಳ್ಳಬಹುದು. ಇದು ಹಿಂದೂ ಉತ್ತರಾಧಿಕಾರಿ ಕಾಯ್ದೆಯಾಗಿದ್ದು ಬೇರೆ ಬೇರೆ ಧರ್ಮದಲ್ಲಿ ಬೇರೆ ಬೇರೆ ಕಾಯ್ದೆಗಳಿವೆ