ಪತ್ನಿಗೆ ಡಿವೋರ್ಸ್ ನೀಡುವ ಗಂಡಸರಿಗೆ ಕೋರ್ಟ್ ಇಂದ ಹೊಸ ರೂಲ್ಸ್ !!
ಹಲೋ ಫ್ರೆಂಡ್ಸ್, ನಮಸ್ಕಾರ. ಇತ್ತೀಚೆಗೆ ಹೈಕೋರ್ಟ್ ವಿಚ್ಛೇದನ ಪಡೆದ ದಂಪತಿಗಳ ಬಗ್ಗೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇನ್ಮುಂದೆ ವಿಚ್ಛೇದನ ಪಡೆದ ಪತಿಯು ಜೀವನಾಂಶ ಪಾವತಿಸುವಲ್ಲಿ ಕೆಲವು ಬದಲಾವಣೆಗಳನ್ನು ಅನುಸರಿಸಬೇಕಾಗುತ್ತದೆ.
ವೈವಾಹಿಕ ಸಂಬಂಧದಲ್ಲಿ ಬೇರ್ಪಟ್ಟಿರುವ ಅಥವಾ ವಿಚ್ಛೇದನ ಪಡೆದ ಪತ್ನಿಗೆ ಜೀವನಾಂಶ ಪಾವತಿಸದಿರಲು "ನಿರುದ್ಯೋಗ" ಎಂಬ ನೆಪವನ್ನು ಬಳಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಪತಿಯು ಕೆಲಸವಿಲ್ಲದೆ ಇದ್ದರೂ ಸಹ, ತನ್ನ ಪತ್ನಿಗೆ ಜೀವನಾಂಶ ಪಾವತಿಸುವ ಜವಾಬ್ದಾರಿ ಅವನ ಮೇಲಿದೆ ಎಂದು ನ್ಯಾಯಾಲಯ ತಿಳಿಸಿದೆ.
ನ್ಯಾಯಮೂರ್ತಿಗಳ ವಿಭೀಯ ಪೀಠವು ಈ ಪ್ರಕರಣವನ್ನು ವಿಚಾರಣೆ ನಡೆಸಿ, ಆರೋಗ್ಯವಂತ ಮತ್ತು ದುಡಿಯುವ ಸಾಮರ್ಥ್ಯ ಹೊಂದಿರುವ ಯಾವುದೇ ವ್ಯಕ್ತಿ ತನ್ನ ಪತ್ನಿ ಮತ್ತು ಮಕ್ಕಳನ್ನು ನಿರ್ವಹಿಸಲು ಬದ್ಧನಾಗಿರಬೇಕು ಎಂದು ಅಭಿಪ್ರಾಯಪಟ್ಟಿದೆ. ಜೀವನಾಂಶ ಪಾವತಿ ಕೇವಲ ದಯೆ ಅಥವಾ ಆಯ್ಕೆಯಲ್ಲ, ಅದು ಕಾನೂನುಬದ್ದ ಕರ್ತವ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪತಿಯು ಸದ್ಯಕ್ಕೆ ಕೆಲಸದಲ್ಲಿ ಇಲ್ಲದಿದ್ದರೂ, ದುಡಿದು ಹಣ ಗಳಿಸುವ ಸಾಮರ್ಥ್ಯವಿದ್ದರೆ, ಕೇವಲ "ನಿರುದ್ಯೋಗಿ" ಎಂಬ ಕಾರಣ ನೀಡಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ತೀರ್ಪು, ವಿಚ್ಛೇದನ ಅಥವಾ ಪ್ರತ್ಯೇಕಿತೆಯ ನಂತರ ಆರ್ಥಿಕವಾಗಿ ದುರ್ಬಲರಾಗುವ ಮಹಿಳೆಯರಿಗೆ ಬಲ ನೀಡುವಂತಾಗಿದೆ.
ಸ್ನೇಹಿತರೆ, ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ. ಈ ಮಾಹಿತಿ ನಿಮಗೆ ಉಪಯುಕ್ತವೆಂದು ಅನಿಸಿದರೆ ಒಂದು ಲೈಕ್ ನೀಡಿ ಮತ್ತು ನಮ್ಮ ಚಾನೆಲ್ ಅನ್ನು subscribe ಮಾಡಿ.




