ತಂದೆಯ ಅಸ್ತಿ ಮಗಳಿಗೆ ಸಿಗುತ್ತಾ ಇಲ್ಲವ !! ಸುಪ್ರೀಂ ಕೋರ್ಟ್ ಇಂದ ಹೊಸ ಆದೇಶ !ತಪ್ಪದೆ ನೋಡಿ

ತಂದೆಯ ಅಸ್ತಿ ಮಗಳಿಗೆ ಸಿಗುತ್ತಾ ಇಲ್ಲವ !! ಸುಪ್ರೀಂ ಕೋರ್ಟ್ ಇಂದ ಹೊಸ ಆದೇಶ !ತಪ್ಪದೆ ನೋಡಿ

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ. ತವರು ಮನೆ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲನ್ನು ಕೇಳಬಹುದಾ? ಯಾವ ಸಂದರ್ಭಗಳಲ್ಲಿ ಪಾಲು ಸಿಗುತ್ತದೆ? ಯಾವ ಸಂದರ್ಭಗಳಲ್ಲಿ ಸಿಗೋದಿಲ್ಲ?” ಅನ್ನೋ ಪ್ರಶ್ನೆ. ಇದರ ಬಗ್ಗೆ ಸಂಪೂರ್ಣ ವಿವರವಾಗಿ ಹೇಳ್ತೀನಿ.

ಮೊದಲಿಗೆ, 1956ರಲ್ಲಿ ಮಾಡಿದ ತಿದ್ದುಪಡಿ ಪ್ರಕಾರ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ಕೊಡಬಹುದು ಅನ್ನೋದು ಮಾತ್ರ ಘೋಷಿಸಲ್ಪಟ್ಟಿತ್ತು. ಆದರೆ 2005ರಲ್ಲಿ ಮಾಡಿದ ತಿದ್ದುಪಡಿ ಪ್ರಕಾರ ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಂತೆ ಸಮಾನ ಹಕ್ಕು ಇದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅಂದರೆ 2005ರ ನಂತರದಲ್ಲಿ ಬರುವ ಎಲ್ಲಾ ಪಿತ್ರಾರ್ಜಿತ ಆಸ್ತಿಗಳಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಪಾಲು ಸಿಗುತ್ತದೆ.

2005ರ ಒಳಗೆ ಹಂಚಿಕೆ ಆಗಿರುವ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಸಿಗೋದಿಲ್ಲ. ಆದರೆ 2005ರ ನಂತರದಲ್ಲಿ ತಂದೆ ಬದುಕಿದ್ದರೆ, ಆಸ್ತಿಯು ಅವರ ಹೆಸರಲ್ಲಿದ್ದರೆ, ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಿಗೆ ಇರುವಷ್ಟು ಪಾಲು ಸಿಗುತ್ತದೆ. ತಾತನ ಆಸ್ತಿ 2005ರ ನಂತರ ಹಂಚಿಕೆ ಆಗಿದ್ರೆ, ಅದರಲ್ಲಿ ಹೆಣ್ಣು ಮಕ್ಕಳಿಗೂ ಹಕ್ಕು ಇರುತ್ತದೆ.

ಮದುವೆ ಆದ್ರೂನು ಹೆಣ್ಣು ಮಕ್ಕಳಿಗೆ ಹಕ್ಕು ಕಡಿಮೆಯಾಗೋದಿಲ್ಲ. ಮದುವೆಗೂ ಆಸ್ತಿಗೂ ಯಾವುದೇ ಸಂಬಂಧವಿಲ್ಲ. 2005ರ ನಂತರ ಹಂಚಿಕೆ ಆಗುವ ಪಿತ್ರಾರ್ಜಿತ ಆಸ್ತಿಯಲ್ಲಿ ಮದುವೆಯಾದ ಹೆಣ್ಣು ಮಕ್ಕಳಿಗೂ ಸಮಾನ ಪಾಲು ಸಿಗುತ್ತದೆ. ಆದರೆ 2005ರ ಒಳಗೆ ಹಂಚಿಕೆ ಆಗಿರುವ ಆಸ್ತಿಯಲ್ಲಿ ಪಾಲು ಕೇಳಲು ಸಾಧ್ಯವಿಲ್ಲ.

ತಂದೆ 2005ರ ಒಳಗೆ ತೀರಿಕೊಂಡಿದ್ದರೆ, ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಸಿಗೋದಿಲ್ಲ. ಗಂಡು ಮಕ್ಕಳಿಗೆ ಮಾತ್ರ ಹಂಚಿಕೆ ಆಗುತ್ತದೆ. ಅದೇ ರೀತಿ ತಂದೆ ಜೀವಿತಾವಧಿಯಲ್ಲಿ ಗಿಫ್ಟ್ ಡೀಡ್ ಅಥವಾ ವಿಲ್ ಮೂಲಕ ಯಾರಿಗಾದರೂ ಆಸ್ತಿಯನ್ನು ಬರೆದು ಕೊಟ್ಟಿದ್ದರೆ, ಆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು ಇರುವುದಿಲ್ಲ.

ಪಿತ್ರಾರ್ಜಿತ ಆಸ್ತಿ ಇದ್ದರೆ ಹೆಣ್ಣು ಮಕ್ಕಳಿಗೆ ಕಾನೂನುಬದ್ಧವಾಗಿ ಪಾಲು ಸಿಗುತ್ತದೆ. ಆದರೆ ತಂದೆ ಸ್ವಂತ ದುಡಿಮೆಯಿಂದ ಸಂಪಾದಿಸಿದ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಕಾನೂನುಬದ್ಧ ಹಕ್ಕು ಇರುವುದಿಲ್ಲ. ತಂದೆಯ ಇಷ್ಟದಂತೆ ಅವರು ಕೊಟ್ಟರೆ ಮಾತ್ರ ಸಿಗುತ್ತದೆ. ಕೊಟ್ಟಿಲ್ಲ ಅಂದ್ರೆ ಕಾನೂನು ಮೂಲಕ ಹೋರಾಟ ಮಾಡೋದಕ್ಕೆ ಸಾಧ್ಯವಿಲ್ಲ.

2005ರ ಒಳಗೆ ಪಿತ್ರಾರ್ಜಿತ ಆಸ್ತಿ ಹಂಚಿಕೆ ಆಗಿದ್ದರೆ, ಸಹೋದರರ ಬಳಿ ಪಾಲು ಕೇಳಲು ಸಾಧ್ಯವಿಲ್ಲ. ಆದರೆ 2005ರ ನಂತರ ಹಂಚಿಕೆ ಆಗುವ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಹಕ್ಕು ಸಿಗುತ್ತದೆ.

ಇಷ್ಟು ಹೇಳಿದ ಮೇಲೆ ನಿಮಗೆ ಸ್ಪಷ್ಟವಾಗಿ ಅರ್ಥ ಆಗಿರಬೇಕು – ಯಾವ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಸಿಗುತ್ತದೆ, ಯಾವ ಸಂದರ್ಭಗಳಲ್ಲಿ ಸಿಗೋದಿಲ್ಲ ಅನ್ನೋದು.