ಜನವರಿ 1 ರಿಂದ ನೀವು ಈ ಟ್ರಾಫಿಕ್ ರೂಲ್ಸ್ ಫಾಲೋ ಮಾಡದೇ ಇದ್ದರೆ !! ಇಂತಹ ವಾಹನ ಸವಾರರಿಗೆ 5000 /- ರೂ ದಂಡ
ನಮಸ್ಕಾರ ಸ್ನೇಹಿತರೆ, ಹೊಸ ವರ್ಷದಿಂದ ಸರ್ಕಾರವು ಕೆಲವು ಹೊಸ ಟ್ರಾಫಿಕ್ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಈ ನಿಯಮಗಳನ್ನು ಪಾಲಿಸದಿದ್ದರೆ ಕಠಿಣ ದಂಡ ಹಾಗೂ ಶಿಕ್ಷೆಗಳು ವಿಧಿಸಲಾಗುತ್ತವೆ. ಪ್ರತಿದಿನ ಲಕ್ಷಾಂತರ ವಾಹನಗಳು ಸಂಚಾರ ಮಾಡುವಾಗ ನಿಯಮ ಉಲ್ಲಂಘನೆಯಿಂದ ಅನೇಕ ಅಪಘಾತಗಳು ಸಂಭವಿಸುತ್ತವೆ. ಇದರಿಂದ ಜನರು ಪ್ರಾಣ ಕಳೆದುಕೊಳ್ಳುವುದಲ್ಲದೆ ಅವರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ. ಈ ಸಮಸ್ಯೆಗಳನ್ನು ತಪ್ಪಿಸಲು ಶಿಸ್ತುಬದ್ಧ ಹಾಗೂ ಸುರಕ್ಷಿತ ಸಂಚಾರಕ್ಕಾಗಿ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.
ಮೊದಲನೇ ಸಲ ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ ₹10,000 ದಂಡ ಹಾಗೂ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಎರಡನೇ ಸಲ ಇದೇ ತಪ್ಪನ್ನು ಮಾಡಿದರೆ ₹15,000 ದಂಡ ಜೊತೆಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ ಮಾಡಿದರೆ ಈಗ ₹5,000 ದಂಡ ವಿಧಿಸಲಾಗುತ್ತದೆ (ಹಿಂದೆ ₹500 ಇತ್ತು). ಅತ್ಯಂತ ವೇಗವಾಗಿ ವಾಹನ ಚಾಲನೆ ಮಾಡಿದರೂ ₹5,000 ದಂಡ ವಿಧಿಸಲಾಗುತ್ತದೆ. ವಾಣಿಜ್ಯ ವಾಹನದಲ್ಲಿ ಹೆಚ್ಚಿನ ಸಾಮಾನು ಸಾಗಾಟ ಮಾಡಿದರೆ ₹10,000 ದಂಡ ವಿಧಿಸಲಾಗುತ್ತದೆ.
ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದರೆ ₹5,000 ದಂಡ ವಿಧಿಸಲಾಗುತ್ತದೆ. ಆದರೆ ಡಿಜಿಲಾಕರ್ ಅಥವಾ ಎಂ-ಪರಿವಾಹನ್ ಆಪ್‌ನಲ್ಲಿ ಇರುವ ಡಿಜಿಟಲ್ ಕಾಪಿಯನ್ನು ತೋರಿಸಿದರೆ ಅದನ್ನು ಮಾನ್ಯಗೊಳಿಸಲಾಗುತ್ತದೆ. ಮಾಲಿನ್ಯ ಪ್ರಮಾಣಪತ್ರ (PUC) ಇಲ್ಲದಿದ್ದರೆ ₹10,000 ದಂಡ ಜೊತೆಗೆ ಆರು ತಿಂಗಳ ಜೈಲು ಶಿಕ್ಷೆ ಹಾಗೂ ಸಮುದಾಯ ಸೇವೆ ವಿಧಿಸಲಾಗುತ್ತದೆ. ಸೀಟ್ ಬೆಲ್ಟ್ ಇಲ್ಲದೆ ವಾಹನ ಚಾಲನೆ ಮಾಡಿದರೆ ₹1,000 ದಂಡ ಬೀಳುತ್ತದೆ. ಸೀಟ್ ಬೆಲ್ಟ್ ಚಾಲಕರಿಗೂ ಹಾಗೂ ಎಲ್ಲಾ ಪ್ರಯಾಣಿಕರಿಗೂ ಕಡ್ಡಾಯವಾಗಿದೆ.
ದ್ವಿಚಕ್ರ ವಾಹನದಲ್ಲಿ ಮೂರು ಜನರು ಪ್ರಯಾಣ ಮಾಡಿದರೆ ₹1,000 ದಂಡ ವಿಧಿಸಲಾಗುತ್ತದೆ. ಹೆಲ್ಮೆಟ್ ಧರಿಸದೆ ಇದ್ದರೆ ₹1,000 ದಂಡ ಜೊತೆಗೆ ಮೂರು ತಿಂಗಳ ಕಾಲ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡಿದರೆ ₹25,000 ದಂಡ, ಪೋಷಕರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ವಾಹನದ ರಿಜಿಸ್ಟ್ರೇಷನ್ ಒಂದು ವರ್ಷದವರೆಗೆ ರದ್ದು ಮಾಡಲಾಗುತ್ತದೆ. 25ನೇ ವಯಸ್ಸಿನವರೆಗೂ ಅಪ್ರಾಪ್ತರಿಗೆ ಡಿಎಲ್ ನೀಡುವುದನ್ನು ನಿಷೇಧಿಸಲಾಗಿದೆ.
ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿದರೆ ₹5,000 ದಂಡ ವಿಧಿಸಲಾಗುತ್ತದೆ. ಈ ಎಲ್ಲಾ ನಿಯಮಗಳನ್ನು ಜಾರಿಗೆ ತರುವುದರ ಮುಖ್ಯ ಉದ್ದೇಶ ರಸ್ತೆ ಅಪಘಾತಗಳನ್ನು ತಡೆಯುವುದು. ಜನರು ನಿಯಮಗಳನ್ನು ಪಾಲಿಸಿದರೆ ಅಪಘಾತಗಳನ್ನು ತಪ್ಪಿಸಬಹುದು.
ದಂಡಗಳು ನಿಮ್ಮ ಮೇಲೆ ಬೀಳಬಾರದು ಎಂದರೆ ನಿಮ್ಮ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು — ಡಿಎಲ್, ಆರ್ಸಿ, ಪಿಯುಸಿ, ಇನ್ಶೂರೆನ್ಸ್ — ಇವುಗಳನ್ನು ಅಪ್ಡೇಟ್ ಮಾಡಿಕೊಂಡು ನಿಮ್ಮ ಜೊತೆಗೆ ಇಟ್ಟುಕೊಳ್ಳಿ. ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಿ. ಮೊಬೈಲ್ ಬಳಕೆ ನಿಲ್ಲಿಸಿ, ವೇಗವಾಗಿ ಚಾಲನೆ ಮಾಡಬೇಡಿ. ಮಕ್ಕಳಿಗೆ ಸೂಕ್ತ ವಯಸ್ಸಾದ ನಂತರ ಮಾತ್ರ ವಾಹನ ನೀಡಿರಿ ಮತ್ತು ಡಿಎಲ್ ಪಡೆದ ನಂತರವೇ ಚಾಲನೆ ಮಾಡಲು ಅವಕಾಶ ನೀಡಿ. ಈ ನಿಯಮಗಳನ್ನು ಪಾಲಿಸುವುದರಿಂದ ದಂಡ ತಪ್ಪಿಸಿಕೊಳ್ಳಬಹುದು ಹಾಗೂ ಸುರಕ್ಷಿತ ಸಂಚಾರ ಸಾಧ್ಯವಾಗುತ್ತದೆ.




