ಚಿನ್ನಸ್ವಾಮಿ ಕಾಲ್ತುಳಿತ ದುರಂತಕ್ಕೆ ನಟಿ ರಕ್ಷಿತಾ ಶಾಕಿಂಗ್ ಹೇಳಿಕೆ !! ಮಗನ ಬಗ್ಗೆ ಹೇಳಿದ್ದು ಏನು ?

ನಾನು ಕೂಡ ಆರ್‌ಸಿಬಿ ದೊಡ್ಡ ಫ್ಯಾನ್. ರಾತ್ರಿಯೆಲ್ಲ ಇಲ್ಲಿ ಬೈಕ್ ರ‍್ಯಾಲಿ ಮಾಡ್ತಿದ್ರು, ಸಂಭ್ರಮ ಪಡ್ತಿದ್ರು. 18ನೇ ವರ್ಷಕ್ಕೆ ಕಪ್ ಗೆದ್ದ ಸಂಭ್ರಮ ಮನೆ ಮಾಡಿತ್ತು. ಆದರೆ, ನಿನ್ನೆ ನಡೆದ ಘಟನೆ ತುಂಬಾ ನೋವು ತಂದಿದೆ ಎಂದು ನಟಿ ಪ್ರತಿಕ್ರಿಯಿಸಿದ್ದಾರೆ.ವಿಧಾನಸೌದದ ಮುಂದೆ ಸ್ಟೇಡಿಯಂ ಮುಂದೆ ಅಷ್ಟೂ ಜನ ನಿಂತಿದ್ರು. ಆರ್‌ಸಿಬಿ ಪ್ರೈವೈಟ್ ಪ್ರಾಂಚೈಸಿ, ಎರಡ್ಮೂರು ದಿನ ಕಾದು ಕಾರ್ಯಕ್ರಮಕ್ಕೆ ಟಿಕೆಟ್ ಮಾಡಿದ್ರೆ ಇಷ್ಟು ನೂಕು ನುಗ್ಗಲು ಆಗ್ತಿರಲಿಲ್ಲ. ಓಪನ್ ಇನ್ವೈಟ್ ಮಾಡಿದ್ದು ತಪ್ಪು. ಅಲ್ಲದೇ ಪೊಲೀಸರ ಮೇಲೆ ತಪ್ಪು ಹೊರೆಸೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ
ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತಕ್ಕೆ ನಟಿ ರಕ್ಷಿತಾ ಪ್ರೇಮ್ (Rakshitha Prem) ಬೇಸರ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಅಭಿಮಾನಿಗಳ ಸಾವು ನೆನೆದು ನಟಿ ಭಾವುಕರಾಗಿದ್ದಾರೆ.
‘ಅತ್ಯಂತ ಕೆಟ್ಟ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದೊಂದು ಸಂಭ್ರಮಾಚರಣೆ ರೀತಿಯಲ್ಲಿ ಇಲ್ಲವೇ ಇಲ್ಲ, ರಾಜಕೀಯ ಪಕ್ಷದ ಸಭೆಯಂತೆ ಇತ್ತು. ಯಾವುದೇ ರೀತಿಯಲ್ಲಿ ಇದು ಸೂಕ್ತ ರೀತಿಯಲ್ಲಿ ಇರಲಿಲ್ಲ. ಕ್ರೀಡೆ ಯಾವುದೇ ಪಕ್ಷದ ಸಂಭ್ರಮಾಚರಣೆ ಅಲ್ಲ, ಇದು ಯಾವುದೇ ವಿಧದಲ್ಲೂ ರಾಜಕೀಯಕ್ಕೆ ಸಂಬಂಧಪಟ್ಟಿಲ್ಲ’ ಎಂದು ನಟಿ ರಕ್ಷಿತಾ ಪ್ರೇಮ್ ಅವರು ಪೋಸ್ಟ್ ಮಾಡಿದ್ದಾರೆ.
ವಿಧಾನಸೌದದ ಮುಂದೆ ಸ್ಟೇಡಿಯಂ ಮುಂದೆ ಅಷ್ಟೂ ಜನ ನಿಂತಿದ್ರು. ಆರ್‌ಸಿಬಿ ಪ್ರೈವೈಟ್ ಪ್ರಾಂಚೈಸಿ, ಎರಡ್ಮೂರು ದಿನ ಕಾದು ಕಾರ್ಯಕ್ರಮಕ್ಕೆ ಟಿಕೆಟ್ ಮಾಡಿದ್ರೆ ಇಷ್ಟು ನೂಕು ನುಗ್ಗಲು ಆಗ್ತಿರಲಿಲ್ಲ. ಓಪನ್ ಇನ್ವೈಟ್ ಮಾಡಿದ್ದು ತಪ್ಪು. ಅಲ್ಲದೇ ಪೊಲೀಸರ ಮೇಲೆ ತಪ್ಪು ಹೊರೆಸೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಚಿಕ್ಕ ಮಕ್ಕಳು, ಮಹಿಳೆಯರು, ಯುವಕರಿದ್ದರು. ಯಾರು ಇದಕ್ಕೆ ಉತ್ತರ ಕೊಡ್ತಾರೆ? ಇದಕ್ಕೆ ಹೊಣೆ ಯಾರು? ಇದು ವ್ಯವಸ್ಥೆಯ ವಿಫಲತೆ. ಇಷ್ಟು ಜನ ಸೇರ್ತಾರೆ ಅಂತಾ ಗೊತ್ತಿರ್ಲಿಲ್ಲ ಅನ್ನೋದು ಎಷ್ಟು ಸರಿ? ನನಗೂ ಮಗ ಇದ್ದಾನೆ. ಏನಾದ್ರೂ ಆದ್ರೆ ಹೇಗೆ ತಡ್ಕೊಳ್ಳೋಕೆ ಆಗುತ್ತೆ ಎಂದು ದುರಂತಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.