500 /- ರೂ ನೋಟಿಗೆ ಹೊಸ ರೂಲ್ಸ್!! ಅಸಲಿ ಸತ್ಯ ಇಲ್ಲಿದೆ ನೋಡಿ?
ಆರ್ಬಿಐ 500 ರೂಪಾಯಿ ನೋಟು ಕುರಿತು ಸ್ಪಷ್ಟನೆ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇತ್ತೀಚೆಗೆ 500 ರೂಪಾಯಿ ನೋಟಿನ ಬಳಕೆಗೆ ಸಂಬಂಧಿಸಿದಂತೆ ಪ್ರಮುಖ ಆದೇಶವೊಂದನ್ನು ಹೊರಡಿಸಿದೆ. ದೇಶದಲ್ಲಿ ನಕಲಿ 500 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೀವ್ರ ಎಚ್ಚರಿಕೆ ನೀಡಲಾಗಿದೆ.
ನೋಟಿನ ಮೇಲೆ ಮುದ್ರಿಸಲಾದ “Reserve Bank of India” ಎಂಬ ಅಧಿಕೃತ ಶೀರ್ಷಿಕೆಯಲ್ಲಿ ಅಕ್ಷರದ ಸಣ್ಣ ಬದಲಾವಣೆಗಳು ಕಂಡುಬಂದರೆ ಅದು ನಕಲಿ ನೋಟಾಗಿರುವ ಸಾಧ್ಯತೆ ಇದೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ. ಉದಾಹರಣೆಗೆ, “Reserve” ಎಂಬ ಪದದಲ್ಲಿ ಹೆಚ್ಚುವರಿ ಅಕ್ಷರ ಸೇರಿರುವುದು ನಕಲಿ ನೋಟಿನ ಲಕ್ಷಣವಾಗಬಹುದು.
ನಕಲಿ ನೋಟು ಗುರುತಿಸುವ ವಿಧಾನಗಳು
ಆರ್ಬಿಐ ನೀಡಿರುವ ಸೂಚನೆಗಳ ಪ್ರಕಾರ, ನೋಟಿನ ಅಸಲಿತನವನ್ನು ಪರಿಶೀಲಿಸಲು ಕೆಲವು ಪ್ರಮುಖ ಲಕ್ಷಣಗಳನ್ನು ಗಮನಿಸಬೇಕು:
ಗಾಂಧೀಜಿಯವರ ಚಿತ್ರದ ಪಕ್ಕದಲ್ಲಿರುವ ಹಸಿರು ಬಣ್ಣದ ದಾರವನ್ನು ಓರೆಯಾಗಿಸಿದಾಗ ಅದು ನೀಲಿ ಬಣ್ಣಕ್ಕೆ ಬದಲಾಗಬೇಕು. ನಕಲಿ ನೋಟುಗಳಲ್ಲಿ ಇದು ಕೇವಲ ಮುದ್ರಣವಾಗಿರುತ್ತದೆ.
ಗಾಂಧೀಜಿ ಭಾವಚಿತ್ರ ಮತ್ತು ಅಶೋಕ ಸ್ತಂಭದ ಚಿಹ್ನೆಯನ್ನು ಕೈಯಿಂದ ಸ್ಪರ್ಶಿಸಿದಾಗ ಸ್ವಲ್ಪ ಉಬ್ಬಿದಂತೆ ಅನುಭವವಾಗಬೇಕು.
ಗಾಂಧೀಜಿ ಚಿತ್ರದ ಎಡಭಾಗದಲ್ಲಿರುವ ಲಂಬ ಅಂಕಣವನ್ನು ಕಣ್ಣಿನ ಮಟ್ಟದಲ್ಲಿ ಸಮತಲನವಾಗಿ ಹಿಡಿದಾಗ “500” ಎಂಬ ಅಂಕಿ ಗೋಚರಿಸಬೇಕು.
ನೋಟನ್ನು ಬೆಳಕಿಗೆ ಹಿಡಿದಾಗ ಮಹಾತ್ಮಾ ಗಾಂಧೀಜಿಯವರ ಸ್ಪಷ್ಟವಾದ ವಾಟರ್‌ಮಾರ್ಕ್ ಕಾಣಿಸಬೇಕು.
ನೋಟಿನ ಕೆಳಗಿನ ಬಲಭಾಗದಲ್ಲಿರುವ 500 ಅಂಕಿಯ ಬಣ್ಣವು ಓರೆಯಾಗಿಸಿದಾಗ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗಬೇಕು.
ನಕಲಿ ನೋಟು ಸಿಕ್ಕರೆ ಏನು ಮಾಡಬೇಕು?
ಒಂದು ವೇಳೆ ನಕಲಿ ನೋಟು ನಿಮ್ಮ ಕೈಗೆ ಸಿಕ್ಕರೆ ಅದನ್ನು ಯಾವುದೇ ಕಾರಣಕ್ಕೂ ಚಲಾವಣೆಗೆ ತರಬಾರದು. ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಅಥವಾ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಮಾಹಿತಿಯನ್ನು ನೀಡಬೇಕು ಎಂದು ಆರ್ಬಿಐ ಸೂಚಿಸಿದೆ.ಸ್ನೇಹಿತರೆ, ಈ ಮಾಹಿತಿ ಉಪಯುಕ್ತವಾಗಿದೆ ಎಂದು ಭಾಸವಾದರೆ ಹಂಚಿಕೊಳ್ಳಿ ಮತ್ತು ಜಾಗೃತಿಯನ್ನು ಹೆಚ್ಚಿಸಿ.




