ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದವರಿಗೆ ಸರ್ಕಾರದಿಂದ ಬಿಗ್ ಶಾಕ್! ಇನ್ನು ಮುಂದೆ ಇಂತಹವರಿಗೆ ಸಿಗಲ್ಲ ಗೃಹಲಕ್ಷ್ಮಿ ಹಣ !!

ಇತ್ತೀಚೆಗೆ ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆ ನಡೆದಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುವ ₹2,000 ಹಣವು ಸಕಾಲದಲ್ಲಿ ಲಭ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ನಡುವೆ, ಸರ್ಕಾರವು ಸುಮಾರು 2 ಲಕ್ಷ ಮಹಿಳಾ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಟ್ಟಿದೆ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಈ 2 ಲಕ್ಷ ಮಹಿಳೆಯರು ತೆರಿಗೆ ಪಾವತಿ ಮಾಡುವವರು ಎಂಬ ಕಾರಣದಿಂದಾಗಿ ಅನರ್ಹರು ಎಂದು ಪರಿಗಣಿಸಲಾಗಿದೆ. ಆದಾಯ ತೆರಿಗೆ ದಾಖಲೆಗಳನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕ್ರಮದ ಮೊದಲ ಹಂತದಲ್ಲಿ 1.28 ಕೋಟಿ ಫಲಾನುಭವಿಗಳ ಪಟ್ಟಿ ಪರಿಶೀಲನೆಗೆ ಒಳಪಟ್ಟಿದ್ದು, ಹಂತ ಹಂತವಾಗಿ ಅನರ್ಹರನ್ನು ಪತ್ತೆ ಮಾಡುವ ಕಾರ್ಯ ಮುಂದುವರೆದಿದೆ.
ಈ ನಿರ್ಧಾರಕ್ಕೆ ವಿರೋಧ ಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕಾಂಗ್ರೆಸ್ ಸರ್ಕಾರವು ಚುನಾವಣೆಯ ವೇಳೆ ಎಲ್ಲ ಮಹಿಳೆಯರಿಗೆ ಹಣ ನೀಡುವುದಾಗಿ ಭರವಸೆ ನೀಡಿದರೂ, ಈಗ 2,13,064 ಮಹಿಳೆಯರಿಗೆ ಹಣ ನೀಡದೆ ಖಾಲಿ ಚೊಂಬು ನೀಡಿದೆ ಎಂದು ಟೀಕಿಸಲಾಗಿದೆ. ಬಿಜೆಪಿ ಈ ಕ್ರಮವನ್ನು “ದ್ರೋಹ” ಎಂದು ವರ್ಣಿಸಿದ್ದು, ಸಿದ್ದರಾಮಯ್ಯನವರ ಭರವಸೆಗಳು ಅವಾಸ್ತವಿಕ ಮತ್ತು ಸುಳ್ಳುಬುರುಕ ಎಂದು ಆರೋಪಿಸಿದೆ.
ಚುನಾವಣೆಯ ಸಮಯದಲ್ಲಿ ಷರತ್ತುಗಳ ಬಗ್ಗೆ ಸ್ಪಷ್ಟತೆ ನೀಡದೆ ಜನರನ್ನು ಮೋಸಗೊಳಿಸಿದ್ದ ಕಾಂಗ್ರೆಸ್ ಪಕ್ಷದ ಅಸಲಿ ಬಣ್ಣ ಈಗ ಬಹಿರಂಗವಾಗಿದೆ ಎಂದು ಬಿಜೆಪಿ ಹೇಳಿದೆ. ಸಿದ್ದರಾಮಯ್ಯನವರ ಯೋಜನೆಗಳು ಜನರ ಬದುಕು ಸುಧಾರಿಸುವ ಬದಲು ಅಧೋಗತಿಗೆ ತರುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಈ ಬೆಳವಣಿಗೆಗಳು ಗೃಹಲಕ್ಷ್ಮಿ ಯೋಜನೆಯ ಭವಿಷ್ಯ ಮತ್ತು ಸಾರ್ವಜನಿಕ ನಂಬಿಕೆಗೆ ಸಂಬಂಧಿಸಿದಂತೆ ಮಹತ್ವದ ಪ್ರಶ್ನೆಗಳನ್ನು ಎಬ್ಬಿಸುತ್ತಿವೆ.