ಜಮೀನು ಮಾರಿ ಓದಿಸಿ, ಇನ್ಸ್‌ಪೆಕ್ಟರ್ ಮಾಡಿದ ಗಂಡನಿಗೆ ಗುಡ್ ಬೈ ಹೇಳಿ ತನ್ನ ಬ್ಯಾಚ್‌ಮೇಟ್ ಆಗಿರುವ ಮತ್ತೊಬ್ಬ ಸಬ್ ಇನ್ಸ್‌ಪೆಕ್ಟರ್ ಜೊತೆ ಜೀವನ ; ಥು ಎಂದು ಉಗಿದ ನೆಟ್ಟಿಗರು
ಹೌದು ಗೆಳೆಯರೇ ಈಗ ಕಾಲ ತುಂಬಾ ಬದಲಾಗಿದೆ . ಅವಶ್ಯಕತೆ ಇರುವ ತನಕ ಬಳಸಿ ಕೊಂಡು ಆಮೇಲೆ ಅವರನ್ನು ಕ್ಯಾರೇ ಅನ್ನದೆ ದೂರ ತಳ್ಳುವರು ಈಗ ಸಮಾಜದಲ್ಲಿ ಹೆಚ್ಚಾಗಿದ್ದಾರೆ. ಆದರೆ ಇದು ಗೆಳೆಯರಲ್ಲಿ ಓಕೆ ಆದರೆ ಕಷ್ಟ ಪಟ್ಟು ಓದಿಸಿದ ಮತ್ತು ಹಣ ಖರ್ಚು ಮಾಡಿದ ಗಂಡನನ್ನೇ ಬಿಡುವುದು ಎಷ್ಟು ನ್ಯಾಯವಾ ನೀವೇ ಹೇಳಿ . ಇಲ್ಲೊಂದು ಘಟನೆ ನೋಡಿ ಏನಾಗಿದೆ .
2005ರಲ್ಲಿ ರಂಜನ್ ಎಂಬಾತ ಜ್ಯೋತಿ ಎಂಬಾಕೆಯ ಪರಿಚಯವಾಗಿದೆ. ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸತೊಡಗಿದ್ದಾರೆ. 2009 ರಲ್ಲಿ, ಇಬ್ಬರೂ ಮನೆಯಿಂದ ಓಡಿಹೋಗಿ ಗುರ್ಗಾಂವ್‌ನಲ್ಲಿ ವಿವಾಹವಾಗಿದ್ದರು. ಜೀವನಕ್ಕಾಗಿ ಇಬ್ಬರೂ ಖಾಸಗಿ ಉದ್ಯೋಗಗಳನ್ನು ಮಾಡುತ್ತಿದ್ದರು. ಈ ಮಧ್ಯೆ ಜ್ಯೋತಿಗೆ ಓದುವ ಆಸೆಯನ್ನು ವ್ಯಕ್ತಪಡಿಸಿದ್ದರಿಂದ ಪತಿ ಪ್ರಿಯರಂಜನ್ ಆಕೆಯನ್ನ ದುಬಾರಿ ಕೋಚಿಂಗ್ ಸೆಂಟರ್ಗೆ ಸೇರಿಸಿದ್ದರು.
ಪ್ರಿಯರಂಜನ್ ಪತ್ನಿಗೆ ಕೆಲಸ ಕೊಡಿಸುವುದಾಗಿ ಜಮೀನು ಮಾರಿ ಸ್ನೇಹಿತರ ಬಳಿ ಸಾಲ ಮಾಡಿ ಒಟ್ಟು 40 ಲಕ್ಷ ಖರ್ಚು ಮಾಡಿದ್ದ ಎಂದು ತಿಳಿದುಬಂದಿದೆ. ಆದರೆ ಇನ್ಸ್‌ಪೆಕ್ಟರ್ ಆಗುತ್ತಿದ್ದಂತೆ ಜ್ಯೋತಿ ತನ್ನ ಪತಿಯನ್ನು ಪತಿಯನ್ನು ಬಿಟ್ಟು ತನ್ನ ಬ್ಯಾಚ್‌ಮೇಟ್ ಆಗಿರುವ ಮತ್ತೊಬ್ಬ ಸಬ್ ಇನ್ಸ್‌ಪೆಕ್ಟರ್ ಜೊತೆ ಜೀವನ ನಡೆಸಲು ಬಯಸುತ್ತಿದ್ದಾಳೆ ಎಂದು ಪ್ರಿಯರಂಜನ್ ಆರೋಪಿಸಿದ್ದಾರೆ.
ಆದರೆ ಜ್ಯೋತಿ ಪತಿ ಹಾಗೂ ಮಗುವನ್ನು ಬಿಟ್ಟು ಪ್ರಿಯಕರನ ಜೊತೆ ಜೀವನ ಹಂಚಿಕೊಳ್ಳುವ ಯೋಚನೆಯಲ್ಲಿದ್ದಾಳೆ. ಜ್ಯೋತಿಗೂ 10 ವರ್ಷದ ಮಗ ಇದ್ದಾನೆ ಎಂದು ತಿಳಿದುಬಂದಿದೆ.
2019 ರಲ್ಲಿ ಜ್ಯೋತಿ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕವಾಗಿದ್ದಾರೆ. ಪ್ರಸ್ತುತ ಜ್ಯೋತಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದು, ಆಕೆ ತನ್ನ ಪತಿಯನ್ನು ಬಿಟ್ಟು ತನ್ನ ಬ್ಯಾಚ್‌ಮೇಟ್ ಸಬ್ ಇನ್ಸ್‌ಪೆಕ್ಟರ್ ಒಬ್ಬನ ಜೊತೆ ಇರಲು ಬಯಸುತ್ತಿದ್ದಾಳೆ. ನಂತರ ಪತಿ ಈ ವಿಷಯಕ್ಕೆ ಸಂಬಂಧಿಸಿದಂತೆ ಎಸ್‌ಡಿಒ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ ದೂರು ನೀಡಿರುವುದರಿಂದ ಫೇಕ್ ಕೇಸ್ನಲ್ಲಿ ಸಿಲುಕಿಸುವುದಾಗಿ ಪತ್ನಿ ತನ್ನನ್ನು ಬೆದಸುತ್ತಿದ್ದಾಳೆ. ಜೊತೆಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದೂರು ನೀಡಿದ್ದಾರೆ.




