ಮಾನವೀಯತೆ ಮರೆತು ಹೋಗಿರುವ ಕಾಲದಲ್ಲಿ ಲೇಡಿ PSI ಮಾಡಿದ ಕೆಲಸಕ್ಕೆ ಜನ ಏನ್ ಅಂದ್ರು ಗೊತ್ತೆ?
ನಮಸ್ಕಾರ ಸ್ನೇಹಿತರೇ, ನಾವು ಜೀವನ ನಡೆಸುತ್ತಿರುವ ಪ್ರಪಂಚದ ಬದಲಾವಣೆಗಳ ಬಗ್ಗೆ ನಾವು ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಏಕೆಂದರೆ, ಜನರಲ್ಲಿ ಆಗುತ್ತಿರುವ ಬದಲಾವಣೆ ಎಲ್ಲರ ಕನ್ನೋಟಕ್ಕು ಮೀರಿದಂತೆ ಆಗುತ್ತಾ ಬರುತ್ತಿದೆ. ಮೊದಲೆಲ್ಲಾ ಒಳ್ಳೇದು ಮಾಡಿದರೆ ಒಳ್ಳೇದೇ ಆಗುತ್ತೆ ಎಂಬ ನಂಬಿಕೆ ಇತ್ತು. ಆದರೆ, ಈಗ ಒಳ್ಳೇದು ಮಾಡಿದವರಿಗೆ ಒಳ್ಳೇದು ಆಗಲ್ಲ ಎಂಬ ಮಾತು ಹೆಚ್ಚಾಗಿರುವ ಕಾರಣ, ನಮ್ಮಲ್ಲಿ ಒಳ್ಳೆತನ ಹಾಗು ಮಾನವೀಯತೆ ಸಿಗುವುದು ಬೆರಳೆಣಿಕೆಯಲ್ಲಿ ಎಂದರೆ ತಪ್ಪಾಗಲಾರದು. ಕಷ್ಟ ಎಂದ ಕೂಡಲೇ ಹತ್ತಿರ ಬರುವ ಜನರಿಗಿಂತ ಅವರಿಂದ ದೂರ ಸರಿಯುವ ಜನರೇ ಹೆಚ್ಚಾಗಿದ್ದಾರೆ.
ಇಂತಹ ಜನರ ಮದ್ಯ ನಾವು ಇಂದು ನಮ್ಮ ಲೇಖನದಲ್ಲಿ ಹೇಳುವ ಒಬ್ಬ ಮಹಿಳೆಯ ಸಾಧನೆ ನಮ್ಮ ಪೀಳಿಗೆಗೆ ಒಂದು ದೊಡ್ಡ ಪಾಠ ಆಗುತ್ತದೆ ಎಂದರೆ ತಪ್ಪಾಗಲಾರದು. ಹೌದು! 'ಆಂದ್ರದ ಶ್ರೀಕಾಕಂಕೂಲ' ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಯಲ್ಲಿ 'ಪಿ ಯಸ್ ಐ' ಆಗಿ ಸೇವೆ ಸಲ್ಲಿಸುತ್ತಿರುವ "ಕೆ ಸಿರಿಶಾ" ಎಂಬ ಮಹಿಳೆ ತಮ್ಮ ಮಾನವೀಯತೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸರ್ಕಾರಿ ನೌಕರರು ಜನರ ಸಂಕಷ್ಟಕ್ಕೆ ಸ್ಪಂದಿಸುವುದಿಲ್ಲ ಎನ್ನುವ ಕಾಲದಲ್ಲಿ ಈ ಮಹಿಳೆ ಬೀದಿಯಲ್ಲಿ ಬಿದ್ದಿದ್ದ ಬಿಕ್ಷುಕನ ಅನಾಥ ಶವಕ್ಕೆ ಹೆಗಲು ಕೊಟ್ಟು ಸಂಪ್ರದಾಯಿಕವಾಗೀ ಆ ಅನಾಥ ಶವದ ಅಂತಿಮ ಕಾರ್ಯವನ್ನು "ಲಲಿತಾ ಚಾರಿಟಬಲ್ ಟ್ರಸ್ಟ್" ಸಹಾಯದಿಂದ ನೆರವೇರಿಸಿದ್ದಾರೆ.
ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹಿರಿಯರನ್ನು ಬದುಕಿದ್ದಾಗ ಗೌರವಿಸುವುದು ಅಲ್ಲದೆ ಅವರು ಸತ್ತ ನಂತರ ನಿರ್ದಿಷ್ಟ ದಿನದಲ್ಲಿ ತಮ್ಮ ಆಚಾರದ ಪ್ರಕಾರ ಅವರಿಗೆ ಪೂಜೆ ಸಲ್ಲಿಸುತ್ತಿರಬೇಕು. ಹೀಗೆ ಮಾಡಿದ್ದಲ್ಲಿ ಮಾತ್ರ ಸತ್ತವರ ಆತ್ಮಕ್ಕೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಇದೆ. ಅದ್ರಲ್ಲೂ ಸತ್ತ ವ್ಯಕ್ತಿಯ ಮಗ ಆ ಶವದ ಅಂತಿಮ ವಿಧಿ ವಿಧಾನಗಳನ್ನು ಅನುಸರಿಸಿದರೆ ಇನ್ನಷ್ಟು ಸೂಕ್ತ ಎನ್ನುವ ಕಾಲದಲ್ಲಿ. ಈ ಮಹಿಳೆ ಆ ಅನಾಥ ಶವಕ್ಕೆ ಹೆಗಲು ಕೊಟ್ಟು ಅಂತಿಮ ಸಂಸ್ಕಾರವನ್ನು ಕೂಡ ತಾವೇ ನೆರವೇರಿಸಿದ್ದಾರೆ. ಇದೀಗ ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾತಾಣಗಳಲ್ಲಿ ಹೆಚ್ಚು ವೈರಲ್ ಆಗಿದ್ದು. ಈ ಮೂಲಕ ನಮ್ಮ ದೇಶದಲ್ಲಿ ಕಡಿಮೆಯಾಗಿರುವ ಮಾನವೀಯತೆ ಹೆಚ್ಚಾಗಲಿ ಎಂದು ನಾವೆಲ್ಲರೂ ಆಶಿಸೋಣ .