ನಿನ್ನೆಯಷ್ಟೇ ಹೃದಯಾಘಾತದಿಂದ ಮೃತಪಟ್ಟ ಖ್ಯಾತ ಕ್ರಿಕೆಟಿಗ..! ಯಾರು ಗೊತ್ತಾ..?

Updated: Friday, September 25, 2020, 12:30 [IST]

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಜನಪ್ರಿಯ ಕಾಮೆಂಟೇಟರ್‌ ಡೀನ್‌ ಜೋನ್ಸ್‌ ಗುರುವಾರ ಹೃದಯಾಘಾತದಿಂದ ನಿಧನರಾದರು. ಈ ಸುದ್ದಿ ಕ್ರಿಕೆಟ್‌ ಜಗತ್ತಿಗೆ ಬರ ಸಿಡಿಲಿನಂತೆ ಅಪ್ಪಳಿಸಿ ಎಲ್ಲರನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿತು.ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಕಾಮೆಂಟರಿ ಕೆಲಸ ನಿರ್ವಹಿಸಲು ಮುಂಬೈಗೆ ಆಗಮಿಸಿ ಬಯೋ ಸೆಕ್ಯೂರ್‌ ವಾತಾವರಣ ಇದ್ದಂತಹ ಹೋಟೆಲ್‌ ಒಂದರಲ್ಲಿ 59 ವರ್ಷದ ಮಾಜಿ ಕ್ರಿಕೆಟಿಗ ಉಳಿದುಕೊಂಡಿದ್ದರು.  

Advertisement

ಪ್ರೊಫೆಸರ್‌ ಡೀನೊ ಎಂದೇ ಖ್ಯಾತಿ ಪಡೆದಿದ್ದ ಜೋನ್ಸ್‌ ಅವರ ಅಕಾಲಿಕ ನಿಧನದ ಕುರಿತಾಗಿ ಅಚ್ಚರಿ ಹೊರ ಹಾಕಿರುವ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌, ಒಂದು ದಿನದ ಹಿಂದಷ್ಟೇ ಅವರೊಟ್ಟಿಗೆ ಕೆಸಲ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಜೊತೆಯಾಗಿ ಕಾರಿನಲ್ಲಿ ಹೋಗಿದ್ದಾಗಿಯೂ ಹೇಳಿದ ಇರ್ಫಾನ್‌, ಗುರುವಾರ ಬೆಳಗ್ಗಿನವರೆಗೆ ಎಲ್ಲವೂ ಸರಿಯಾಗಿತ್ತು ಎಂದಿದ್ದಾರೆ.  

Advertisement

ಆದರೆ, ವರದಿಗಳ ಪ್ರಕಾರ ಹೋಟೆಲ್‌ನಲ್ಲಿ ಇದ್ದ ವೇಳೆ ಡೀನ್‌ ಜೋನ್ಸ್‌ ಅವರಿಗೆ ಇದ್ದಕ್ಕಿದ್ದಹಾಗೆ ಹೃದಯಾಘಾತವಾಗಿದೆ. ಈ ಸಂದರ್ಭದಲ್ಲಿ ಅವರೊಟ್ಟಿಗೆ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್‌ ಲೀ ಇದ್ದರು ಎಂದು ವರದಿಗಳು ಹೇಳಿವೆ.
ಎನ್‌ಡಿಟಿವಿ ವರದಿ ಮಾಡಿರುವ ಪ್ರಕಾರ ಜೋನ್ಸ್‌ ಮತ್ತು ಲೀ ಇಬ್ಬರೂ ಹೋಟೆಲ್‌ನಲ್ಲಿ ಬೆಳಗ್ಗೆ ಉಪಹಾರ ಸೇವಿಸಿ ಹಿಂದಿರುಗುವಾಗ ಹೋಟೆಲ್‌ನ ಲಾಬಿಯಲ್ಲಿ ಎದೆ ಹಿಡದುಕೊಂಡು ಜೋನ್ಸ್‌ ಕುಸಿದು ಬಿದಿದ್ದಾರೆ. ಈ ಸಂದರ್ಭದಲ್ಲಿ ಜೊತೆಗೇ ಇದ್ದ ಬ್ರೆಟ್‌ ಲೀ, ಅವರ ಎದೆ ಭಾಗವನ್ನು ಕೈಗಳಿಂದ ಒತ್ತಿ ಬಾಯಿಗೆ ಗಾಳಿಯನ್ನು ಊದಿ, ಶ್ವಾಸಕೋಶಗಳಿಗೆ ಆಮ್ಲಜನಕ ಮುಟ್ಟಿಸಿ (ಸಿಪಿಆರ್‌ ಮೂಲಕ) ಹೇಗಾದರೂ ಮಾಡಿ ಉಸಿರಾಟ ಆರಂಭಿಸುವಂತೆ ಮಾಡುವ ಶತಪ್ರಯತ್ನ ನಡೆದ್ದಾರೆ. ಆದರೆ, ಲೀ ಶ್ರಮಕ್ಕೆ ಯಾವುದೇ ಫಲ ಲಭ್ಯವಾಗಿಲ್ಲ. ಜೋನ್ಸ್‌ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.