ಮುಂದಿನ ಐಪಿಎಲ್ ಗೆ ಕೊಹ್ಲಿ ಮತ್ತು ಎಬಿಡಿಯನ್ನು ಬ್ಯಾನ್ ಮಾಡಿ ಎಂದ ಕೆ ಎಲ್ ರಾಹುಲ್..!

Updated: Thursday, October 15, 2020, 12:41 [IST]

ಹೌದು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡದ ಪ್ರಮುಖ ಸ್ಟಾರ್ ಆಟಗಾರರಾದ ನಾಯಕ ವಿರಾಟ್ ಕೊಹ್ಲಿ ಮತ್ತು 360 ಡಿಗ್ರಿ ,ಎಬಿ ಡಿವಿಲಿಯರ್ಸ್ ಅವರನ್ನು ಐಪಿಎಲ್ನಿಂದ ನಿಷೇಧಿಸುವಂತೆ, ಪಂಜಾಬ್ ತಂಡದ ಕ್ಯಾಪ್ಟನ್ ಕೆ.ಎಲ್.ರಾಹುಲ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಸಂಘಟಕರಿಗೆ ಸೂಚಿಸಲು ಬಯಸಿದ್ದಾರೆ ಎಂದು ಕೇಳಿಬಂದಿದೆ. ಟಿ20 ಕ್ರಿಕೆಟ್‌ನಲ್ಲಿ ಚೇಂಜ್ ಮಾಡಲು ಇಚ್ಚಿಸುವ ಒಂದು ನಿಯಮವನ್ನು ವಿರಾಟ್ ಕೊಹ್ಲಿ ಕೇಳಿದ ನಂತರ, ನಮ್ಮ ಕೆ. ಎಲ್. ರಾಹುಲ್ ಈ ಸಲಹೆಯನ್ನು ತಮಾಷೆಯಾಗಿ ಬಹಿರಂಗಪಡಿಸಿದ್ದಾರೆ. 

Advertisement

ಮಂಗಳವಾರ ಪೂಮಾ ಇನ್‌ಸ್ಟಾಗ್ರಾಮ್‌ನ ಸಂವಾದದ ಸಮಯದಲ್ಲಿ ಪಂಜಾಬ್ ತಂಡದ ನಾಯಕ ಕೆ ಎಲ್ ರಾಹುಲ್, " ಮುಂದಿನ ವರ್ಷ ನಿಮ್ಮನ್ನು ಮತ್ತು ಎಬಿಯನ್ನು ಐಪಿಎಲ್ ನಿಂದ ನಿಷೇಧಿಸುವಂತೆ, ಐಪಿಎಲ್ ಅನ್ನು ಕೇಳುತ್ತೇನೆ ಎಂದು ನಾನು ಭಾವಿಸುತ್ತೇನೆ. ಜೊತೆಗೆ ಒಮ್ಮೆ ನೀವು ಒಂದು ನಿರ್ದಿಷ್ಟ ಪ್ರಮಾಣದ ರನ್ ಮಾಡಿದ್ದೀರಿ, ಜನರು "ಇದು ಸಾಕು" ಎಂದು ಹೇಳಬೇಕು. ಒಮ್ಮೆ ನೀವು 5,000 ರನ್ ಗಳಿಸಿದರೆ ಸಾಕು, ಈಗ ನೀವು ಇತರರಿಗೆ ಆಡಲು ಅವಕಾಶ ನೀಡುತ್ತೀರಿ" ಎಂಬುದಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್ ರಾಹುಲ್ ಹೇಳಿದ್ದಾರೆ... 

Advertisement

ವಿರಾಟ್ ಕೊಹ್ಲಿ ಮತ್ತು ಎಬಿ ಡೆವಿಲಿಯರ್ಸ್ ಆರ್‌ಸಿಬಿ ಪರ ಪಾಲುದಾರರಾಗಿ, ಈಗಾಗಲೆ 3000 ಕ್ಕೂ ಹೆಚ್ಚು ಐಪಿಎಲ್ ರನ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟು ಹತ್ತು ಸೆಂಚುರಿಗಳನ್ನು ಹೊಂದಿರುವ ಏಕೈಕ ಜೋಡಿ ವಿರಾಟ್ ಮತ್ತು ಎಬಿಡಿದಾಗಿದೆ. ಮೊನ್ನೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿಯ ಪಂದ್ಯದ ವೇಳೆ ಬೆಂಗಳೂರು ತಂಡದ ಆಟಗಾರ ನಮ್ಮ ಡಿವಿಲಿಯರ್ಸ್ಅವರು ಒಟ್ಟು 33 ಎಸೆತಗಳಲ್ಲಿ 73 ರನ್ ಹೊಡೆದು ಅಜೆಯರಾಗಿ ಉಳಿದರು. 

Advertisement

ನಾನು ಯೋಚಿಸಬಹುದಾದ ಒಂದು ನಿಯಮ ಏನೆಂದರೆ ಅದು, ಬ್ಯಾಟರ್ ಆಗಿ, ಯಾರಾದರೂ 100 ಮೀಟರ್ ಓವರ್‌ಗೆ ಸಿಕ್ಸ್ ಹೊಡೆದರೆ, ಅದಕ್ಕೆ ಹೆಚ್ಚಿನ ರನ್ ಕೊಡಬೇಕು. ಎಂದು ನಾನು ಭಾವಿಸುತ್ತೇನೆ"  ಎಂದು ಕೆ ಎಲ್ ರಾಹುಲ್ ಹೇಳಿದರು. ಇದಕ್ಕೆ  ವಿರಾಟ್ ' 'ಮೊದಲು ನಿಮ್ಮ ಬೌಲರ್‌ಗಳನ್ನು ಕೇಳಿ' ಎಂದು ಉತ್ತರ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ,' 'ಅದಕ್ಕಾಗಿಯೇ ನಾನು ಹೇಳಿದ್ದೇನೆ, ಬ್ಯಾಟರ್ ಆಗಿ, ನಾನು ಅದನ್ನು ಬಯಸುತ್ತೇನೆ' ಎಂದು ಸ್ಪಷ್ಟನೆ ನೀಡಿದರು..

ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಜ್ಞಾನೇಶ್ವರ್ ರಾವ್ ಗುರೂಜಿ 8548998564 ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ , ಜನ ವಶ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 3 ದಿನಗಳಲ್ಲಿ ಸವರ್ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8548998564