ಈ ಬಾರಿ ಎಬಿ ಡಿವಿಲಿಯರ್ಸ್ ಗೆ ಆರ್ ಸಿಬಿ ನೀಡುತ್ತಿರುವ ಹಣವೆಷ್ಟು ಗೊತ್ತಾ..? ನಿಜಕ್ಕೂ ಗ್ರೇಟ್..!

Updated: Monday, January 25, 2021, 18:37 [IST]

ಹೌದು ಇತ್ತೀಚಿಗಷ್ಟೇ 2020ರ ಐಪಿಎಲ್ 13ನೇ ಆವೃತ್ತಿ ಮುಗಿದಿದ್ದು, ಇದೀಗ 2021 ನೇ ವರ್ಷದ ಹದಿನಾಲ್ಕನೇ ಆವೃತ್ತಿಯ ಐಪಿಎಲ್ ಗೆ ಈಗಾಗಲೇ ಎಲ್ಲಾ ಸಿದ್ಧತೆಗಳು ಆರಂಭಗೊಂಡಿವೆ. ಮುಂಬರುವ ಫೆಬ್ರವರಿ 18ಕ್ಕೆ ಮಿನಿ ಹರಾಜು ಪ್ರಕ್ರಿಯೆ ನಡೆಯಲಿರುವ ವಿಚಾರ ಇದೀಗ  ಕೇಳಿಬಂದಿದೆ. ಇದರ ನಡುವೆ ಇತ್ತೀಚಿಗಷ್ಟೇ ಐಪಿಎಲ್ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಉಳಿಸಿಕೊಳ್ಳುವವರ ಪಟ್ಟಿಯನ್ನು ಮತ್ತು ತಮ್ಮ ತಂಡದಿಂದ ಕೈಬಿಟ್ಟಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಈ ವರ್ಷದ ಐಪಿಎಲ್ ಇನ್ನೂ ರೋಚಕವಾಗಿರಲಿದೆ ಎನ್ನುವ ಸುಳಿವು ನೀಡಿದ್ದಾರೆ. 

ಇದರ ನಡುವೆ ಇಡೀ ದೇಶಾದ್ಯಂತ ಹೆಚ್ಚು ಪ್ರಖ್ಯಾತಿ ಪಡೆದಿರುವ ಮತ್ತು ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಏಕೈಕ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಯನ್ನು, ಮತ್ತು ಎಬಿ ಡಿವಿಲಿಯರ್ಸ್ ಇನ್ನು ಕೆಲ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ. ಹಾಗೆ ಹತ್ತು ಆಟಗಾರರನ್ನು ತಂಡದಿಂದ ಕೈಬಿಟ್ಟಿದ್ದು ನಮ್ಮ ಬೆಂಗಳೂರು ತಂಡ ಅಗ್ರಸ್ಥಾನದಲ್ಲಿದೆ. ಈಗ ಬಂದಿರುವ ಮಾಹಿತಿ ಪ್ರಕಾರ ನಮ್ಮ ಭಾರತದ ಮಹೇಂದ್ರಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ನಂತರ ಸುರೇಶ ರೈನಾ 100 ಕೋಟಿ ಕ್ಲಬ್ ಅನ್ನು ಮೊದಲಿಗೆ ಮುಟ್ಟಿದ್ದರು. 

ಇದೀಗ ಮೊದಲ ವಿದೇಶಿ ಆಟಗಾರರಾಗಿ ನಮ್ಮ ಡಿವಿಲಿಯರ್ಸ್ ನೂರು ಕೋಟಿ ಕ್ಲಬ್ಬನ್ನು ತಲುಪಿದ್ದಾರೆ. ಮತ್ತು ಪ್ರತಿವರ್ಷವೂ 11ಕೋಟಿ ಪಡೆಯುವ ಈ ಆಟಗಾರ ಇದೀಗ ನೂರು ಕೋಟಿ ತಲುಪಿದ ಮೊದಲ ವಿದೇಶಿ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಹೌದು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ, ಮಾಹಿತಿ ಇಷ್ಟವಾದಲ್ಲಿ ಮತ್ತು ನೀವು ಕೂಡ ಇಡೀ ಕ್ರಿಕೆಟ್ ಜಗತ್ತಿಗೆ ಅಜಾತಶತ್ರುವಾಗಿರುವ ಡಿವಿಲಿಯರ್ಸ್ ಅವರ ದೊಡ್ಡ ಅಭಿಮಾನಿಯಾಗಿದ್ದರೆ ತಪ್ಪದೆ ಶೇರ್ ಕೂಡ ಮಾಡಿ ಧನ್ಯವಾದಗಳು...