ಭಾರತದ ಬಗ್ಗೆ ಹಾಡಿ ಹೊಗಳಿದ ಪಾಕ್ ತಂಡದ ನಾಯಕ! ಕಾರಣ ಏನೂ ಗೊತ್ತಾ?

ಭಾರತದ ಬಗ್ಗೆ ಹಾಡಿ ಹೊಗಳಿದ ಪಾಕ್ ತಂಡದ ನಾಯಕ!  ಕಾರಣ ಏನೂ ಗೊತ್ತಾ?

ವೈರಿಗಳು ಎಂದ ಕೂಡಲೇ ನಮ್ಮ ತಲೆಗೆ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು "ಪಾಕಿಸ್ತಾನ". ಈ ವೈರತ್ವ ಕೇವಲ ದೇಶಗಳ ನಡುವೆಯದ್ದು ಅಲ್ಲ ಜಾತಿ ಹಾಗೂ ಧರ್ಮಗಳ ನಡುವೆ ಕೊಡ ಈ ಸಂಗರ್ಷ ನಡೆಯುತ್ತಲೇ ಇದೆ. ಇನ್ನೂ ಈ ವೈರತ್ವ ಇಂದಿನದ್ದು ಅಲ್ಲಾ ಅದೆಷ್ಟೋ ವರ್ಗಗಳಿಂದ ಕೂಡ ಈ ಸಂಗರ್ಷ ನಡೆಯುತ್ತಲೇ ಬಂದಿದ್ದು ಈಗಲೂ ನಮ್ಮ ದೇಶದ ತಲೆಯ ಭಾಗವಾದ ಕಾಶ್ಮೀರವನ್ನು ನಮ್ಮದಾಗಿಸಿಕೊಳಲ್ಲೇ ಬೇಕು ಎನ್ನುವ ನಿಟ್ಟಿನಲ್ಲಿ ಎರಡು ಊರುಗಳು ಕೂಡ ಆಗಾಗ ಯುದ್ಧಗಳನ್ನು ಮಾಡುತ್ತಲೇ ಬರುತ್ತಿದೆ. ಇನ್ನೂ ಊರುಗಳ ನಡುವೆ ಶುರುವಾದ ಈ ಯುದ್ದ ಈಗ ಜಾತಿ ಹಾಗೂ ಧರ್ಮದ ವರೆಗೂ ಬಂದಿದೆ. ಕೆಲವೊಮ್ಮೆ ಹಿಂದೂ ಮುಸಲ್ಮಾನರು ಒಂದೇ ಎಂಬ ಭಾವನೆ ಸಾಕಷ್ಟು ಮಂದಿಯಲ್ಲಿ ಇದೆ. ಆದರೆ ಇಮ್ಮ ಅರ್ಧದಷ್ಟು ಮಂದಿಗೆ ತಮ್ಮ ಧರ್ಮವೇ ಹೆಚ್ಚು ಎನ್ನುವ ಉದ್ದೇಶ ಕೂಡ ಇದೆ.

ಹಾಗಾಗಿ ಪಾಕ್ ಹಾಗೂ ಇಂಡಿಯಾ ನಡುವೆ ನಡೆಯುವ ಕ್ರಿಕೆಟ್ ಪಂದ್ಯವನ್ನು ನಮ್ಮ ಜನ ಅಷ್ಟು ನಿಷ್ಠೆಯಾಗಿ ತೆಗೆದುಕೊಳ್ಳುತ್ತಾರೆ. ಆದರೆ ಪಾಕಿಸ್ತಾನದ ಕ್ರಿಕೆಟ್ ತಂಡದ ನಾಯಕ "ಬಾಬರ್" ಎಲ್ಲರ ಮನಸ್ತಿತಿ ಬದಲಾಗುವಂತಹ ಹೇಳಿಕೆಯನ್ನು ನೀಡಿದ್ದಾರೆ. ಇನ್ನೂ ಇವರ ಹೇಳಿಕೆಯಿಂದ ಅದೆಷ್ಟೋ  ಜನರ ನಡುವೆ ಈ ಧರ್ಮದ ಬೇಧ ಭಾವ ಕಡಿಮೆ ಮಾಡಬಹುದು ಎನ್ನುವ ನಿರೀಕ್ಷೆ ಕೂಡ ಹುಟ್ಟಿಕೊಂಡಿದೆ. ಅಷ್ಟಕ್ಕೂ ಬಾಬರ್ ಅವರು ಏನೆಂದು ಹೇಳಿದ್ದಾರೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂದಿನಿಂದ ವರ್ಲ್ಡ್ ಕಪ್ ಶುರುವಾಗಿದೆ.

ಇನ್ನೂ ನೆನ್ನೆಯಷ್ಟೇ ಅಂದರೆ ಅಕ್ಟೋಬರ್ 4 ರಂದು ಎಲ್ಲಾ ದೇಶದ ಕ್ರಿಕೆಟ್ ತಂಡದ ನಾಯಕರ ಸಭೆಯನ್ನು ಅಹಮದಾಬಾದ್ ಏರ್ಪಾಟು ಮಾಡಲಾಗಿತ್ತು. ಅಲ್ಲಿ ಭಾಗಿ ಆಗಿದ್ದ ಬಾಬರ್ ಅವರು ತಮ್ಮ ಮನದಾಳದ ಮಾತು ತಿಳಿಸಿದ್ದಾರೆ. ಇನ್ನೂ ಪಾಕ್ ಆಟಗಾರರು ಮೊದಲ ಬಾರಿಗೆ ನಮ್ಮ ಭಾರತದ ಮಣ್ಣು ತುಳಿದಿದ್ದು. ಅವರನ್ನು ಕೇಸರಿ ಶಾಲ್ ಧರಿಸಿ ಬರಮಾಡಿಕೊಂಡರು. ಬಾಬರ್ ಅವರು ತಮಗೆ ಇಲ್ಲಿ ಒಂಟಿತನ ಕಾಡಬಹುದು ಎಂಬ ಭಾವನೆಯಲ್ಲಿ ಬಂದಿದ್ದರಂತೆ ಆದರೆ ಇಲ್ಲಿಗೆ ಬಂದ ನಂತರ ನಮ್ಮ ಭಾರತದ ಅತಿತ್ಯವನ್ನು ನೋಡಿ ಇವರ ಮನ ತುಂಬಿ ಬಂದಿದೆ. ಇನ್ನೂ ಭಾರತದ ಜನ ಬಹಳ ಒಳ್ಳೆಯವರು ಇಲ್ಲಿ ಯಾವ ಕಲ್ಮಶ ಇಲ್ಲದ ಪ್ರೀತಿಯನ್ನು ನೀಡುತ್ತಾರೆ ಎಂದು ಬಹಿರಂಗವಾಗಿ ತಿಳಿಸಿದ್ದಾರೆ.