ಮೈದಾನದಲ್ಲೇ ಬೈಯ್ದಾಡಿಕೊಂಡ ಪಾಂಡ್ಯ ಬ್ರದರ್ಸ್: ಸಿಟ್ಟಿಗೆ ಕಾರಣವೇನು ಗೊತ್ತಾ?

Updated: Tuesday, October 13, 2020, 09:53 [IST]

ಮೈದಾನದಲ್ಲೇ ಬೈಯ್ದಾಡಿಕೊಂಡ ಪಾಂಡ್ಯ ಬ್ರದರ್ಸ್: ಸಿಟ್ಟಿಗೆ ಕಾರಣವೇನು ಗೊತ್ತಾ?

ಹೌದು, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಪಾಂಡ್ಯ ಬ್ರದರ್ಸ್ ಮೈದಾನದಲ್ಲೇ ಬೈಯ್ದಾಡಿಕೊಂಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಪರ ಶ್ರೇಯಸ್ ಅಯ್ಯರ್ ಹಾಗೂ ಶಿಖರ್ ಧವನ್ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದ್ದರು. ಮೊದಲೇ ವಿಕೆಟ್ ಬೀಳದ ಒತ್ತಡದಲ್ಲಿ ಬೌಲರುಗಳಿದ್ದರು. ಈ ವೇಳೆ 7 ಓವರ್​ನಲ್ಲಿ ಬೌಲಿಂಗ್​ಗೆ ಇಳಿದ ಕೃನಾಲ್ ಪಾಂಡ್ಯ ಅವರ 5ನೇ ಎಸೆತದಲ್ಲಿ ಅಯ್ಯರ್​ ತ್ವರಿತ ಸಿಂಗಲ್ ಓಡಿದರು.

Advertisement

ಅತ್ತ ಕವರ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಹಾರ್ದಿಕ್ ಪಾಂಡ್ಯ ಅಯ್ಯರ್​ನ್ನು ರನೌಟ್ ಮಾಡಲು ಚೆಂಡನ್ನು ನಾನ್​ ಸ್ಟ್ರೈಕರ್​ನತ್ತ ವೇಗವಾಗಿ ಎಸೆದರು. ಆದರೆ ಅದಾಗಲೇ ಕ್ರೀಸ್ ಒಳಗೆ ತಲುಪಿದ್ದರಿಂದ ಆ ಥ್ರೋ ಅಗತ್ಯವಿರಲಿಲ್ಲ. ಇತ್ತ ತಮ್ಮ ವೇಗದ ಎಸೆತವನ್ನು ಹಿಡಿಯಲು ಕೃನಾಲ್ ಪಾಂಡ್ಯಗೂ ಸಾಧ್ಯವಾಗಿರಲಿಲ್ಲ. ಪರಿಣಾಮ ಓವರ್ ಥ್ರೋ ಮೂಲಕ ಮತ್ತೊಂದು ರನ್ ಡೆಲ್ಲಿ ಪಾಲಾಯಿತು.

Advertisement

ತನ್ನ ಸಹೋದರನ ಈ ಫೀಲ್ಡಿಂಗ್ ಕೃನಾಲ್‌ಗೆ ಇಷ್ಟವಾಗಿರಲಿಲ್ಲ. ಅಲ್ಲದೇ ಮೈದಾನದಲ್ಲೇ ಬೈದು ತನ್ನ ಕೋಪವನ್ನು ವ್ಯಕ್ತಪಡಿಸಿದರು. ಇದಕ್ಕೆ ಹಾರ್ದಿಕ್ ಪಾಂಡ್ಯ ಕೂಡ ವಿವರಣೆಯನ್ನು ನೀಡುತ್ತಾ ಫೀಲ್ಡ್‌ ಕವರ್ ಮಾಡಲು ಬರಬೇಕಿತ್ತು ಎಂದು ತಮ್ಮ ಸಿಟ್ಟನ್ನು ಹೊರಹಾಕಿದರು. ಈ ಘಟನೆಯನ್ನು ವೀಕ್ಷಿಸುತ್ತಿದ್ದ ಕಮೆಂಟೇಟರ್ ಪ್ರೀತಿಯಿದ್ದಲ್ಲಿ ಮಾತ್ರ ಕೋಪವಿರುತ್ತೇ ಎನ್ನುವ ಮೂಲಕ ಗಮನ ಸೆಳೆದರು.

ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಜ್ಞಾನೇಶ್ವರ್ ರಾವ್ ಗುರೂಜಿ 8548998564 ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ , ಜನ ವಶ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 3 ದಿನಗಳಲ್ಲಿ ಸವರ್ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8548998564