ಕೆಎಲ್ ರಾಹುಲ್ ಗೆ ಎಚ್ಚರಿಕೆ ನೀಡಿದ ವಿರಾಟ್ ಕೋಹ್ಲಿ

Updated: Friday, October 16, 2020, 08:43 [IST]

ಕೆಎಲ್ ರಾಹುಲ್ ಗೆ ಎಚ್ಚರಿಕೆ ನೀಡಿದ ವಿರಾಟ್ ಕೋಹ್ಲಿ

ಪಂಜಾಬ್ ಮತ್ತು ಆರ್ಸಿಬಿ ಮತ್ತೆ ಮುಖಾಮುಖಿ ಆಗುತ್ತಿವೆ. ಕಳೆದ ಬಾರಿ ರಾಹುಲ್ ಶತಕ ಬಾರಿಸಿದ್ದರು. ಇದಕ್ಕೆ ಕಾರಣ ಕೊಹ್ಲಿ ಎರಡು ಬಾರಿ ರಾಹುಲ್ ನ ಕ್ಯಾಚ್ ಬಿಟ್ಟಿದ್ದರು. ಒಮ್ಮೆ 83 ರನ್ ಇದ್ದಾಗ ಕ್ಯಾಚ್ ಬಿಟ್ಟ ಕೋಹ್ಲಿ ರಾಹುಲ್ ಶತಕ ಬಾರಿಸಲು ಕಾರಣರಾಗಿದ್ದರು. ನಂತರ ಇನ್ನೊಂದು ಕ್ಯಾಚ್ ಬಿಟ್ಟು ಮ್ಯಾಚ್ ಸೋತಿದ್ದರು.

 

Advertisement

ಇತ್ತೀಚೆಗೆ ಕೋಹ್ಲಿ ಮತ್ತು ರಾಹುಲ್ ರ ಇನ್ಸ್ಟಾಗ್ರಾಂ ಲೈವ್ ಚಾಟ್ ಬಾರೀ ಸುದ್ದಿಯಾಗಿತ್ತು. ಅದರಲ್ಲಿ ರಾಹುಲ್ ಕೋಹ್ಲಿಯ ಕಾಲೆಳೆದಿದ್ದರು. ತಮಾಷೆಗೆ ಇಬ್ಬರೂ ಮಾತಾಡಿದ್ದು ಖುಷಿ ವಿಚಾರವಾಗಿತ್ತು. ಮೈದಾನದಲ್ಲಿರುವ ಮುಖಾಮುಖಿ ಆದರೂ ಇಬ್ಬರೂ ಉತ್ತಮ ಸ್ನೇಹಿತರೇ.

ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ವಿರಾಟ್ ಮತ್ತು ರಾಹುಲ್ ಮಾತನಾಡುತ್ತಿದ್ದಾಗ ರಾಹುಲ್ ತಮಾಷೆ ಮಾಡಿದರು. 'ಆರ್‌ಸಿಬಿ ವಿರುದ್ಧ ಆಡುವುದೆಂದರೆ ಖುಷಿ. ಹೀಗಾಗಿ ನಾನು ಮತ್ತೊಂದು ಗೆಲುವಿನತ್ತ ಎದುರು ನೋಡುತ್ತಿದ್ದೇನೆ. ಯಾಕೆಂದರೆ ಕೆಲ ಫೀಲ್ಡರ್‌ಗಳು ಒಂದಿಷ್ಟು ಕ್ಯಾಚ್ ಡ್ರಾಪ್ ಮಾಡಲಿದ್ದಾರೆ,' ಎಂದು ರಾಹುಲ್ ಅವರು ಕೊಹ್ಲಿಯ ಕಾಲೆಳೆದರು.

 

Advertisement

ರಾಹುಲ್ ಮಾತಿಗೆ ಪ್ರತಿಕ್ರಿಯಿಸಿದ ವಿರಾಟ್, 'ಹಿಂದಿನ ಬಾರಿಯಂತೆ ಈ ಬಾರಿಯೂ ನಾನು ಅದೇ ಜಾಗದಲ್ಲಿ ನಿಲ್ಲುತ್ತೇನೆ. ಆದರೆ ಈ ಬಾರಿ ಬಾನೆತ್ತರಕ್ಕೆ ಚೆಂಡು ಹೊಡೆಯುವ ಮೊದಲು ಎರಡೆರಡು ಬಾರಿ ಯೋಚಿಸು,' ಎಂದು ಎಚ್ಚರಿಸಿದ್ದಾರೆ.