ರೆಬಲ್ ಸ್ಟಾರ್ ಸೊಸೆಯ ಜಿಮ್ ವಿಡಿಯೋ ಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನ ಹೆಮ್ಮೆಯ ಕಲಾವಿದರಲ್ಲಿ ಒಬ್ಬರಾದ "ರೆಬಲ್ ಸ್ಟಾರ್" 'ಅಂಬರೀಶ್ ' ಕೂಡ ನಮ್ಮ ಕನ್ನಡ ಚಿತ್ರದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದರು ಎಂದರೆ ತಪ್ಪಾಗಲಾರದು. ಅವರ ಚಿತ್ರಗಳಲ್ಲಿ ತಮ್ಮ ರೆಬಲ್ ಮಾತಿನ ಮೂಲಕವೇ ಇಂದಿಗೂ ನಮ್ಮ ನೆನಪಿನಲ್ಲಿ ಜೀವಂತವಾಗಿ ಇದ್ದಾರೆ. ಇವರು ನಮ್ಮನ್ನು ಆಗಳಿದ್ದರು ಕೂಡ ನಮ್ಮಲ್ಲಿ ಇಂದಿಗೂ ಜೀವಂತವಾಗಿ ಇದ್ದಾರೆ. ಇದೀಗ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸ್ಯಾಂಡಲ್ ವುಡ್ ನ ಚಲುವೆಯರಲ್ಲಿ ಒಬ್ಬರಾಗಿ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೂಡ ನಟಿಸಿ ಮೆಚ್ಚುಗೆ ಪಡೆದಿರುವ "ಸುಮಲತಾ ಅಂಬರೀಶ್" ಅವರ ಏಕೈಕ ಪುತ್ರ ಕೂಡ ಹೋರ ದೇಶದಲ್ಲಿ ವ್ಯಾಸಂಗ ಮುಗಿಸಿ ಈಗ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ.
ಇನ್ನೂ ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ "ಜೂನಿಯರ್ ರೆಬಲ್ ಸ್ಟಾರ್" ಆಗಿ "ಅಭಿಷೇಕ್ ಗೌಡ" ಅವರು ಚಿತ್ರ ರಂಗಕ್ಕೆ ಕಲಿಟ್ಟಿದ್ದಾರೆ. ಇನ್ನೂ ಇವರ ಚೊಚ್ಚಲ ಚಿತ್ರ ಕೂಡ ' ಅಮರ್ ' ಚಿತ್ರ ಕೂಡ ದೊಡ್ಡ ಹಿಟ್ ಪಡೆದುಕೊಂಡಿದೆ. ಇದೀಗ ಅಭಿಷೇಕ್ ತಮ್ಮ ಮುಂದಿನ ಚಿತ್ರ "ಕಾಳಿ ಹಾಗೂ ಬ್ಯಾಡ್ ಮ್ಯಾನರ್ಸ್" ಸಿನಿಮಾದ ಬಗ್ಗೆ ಕೂಡ ಜನರಲ್ಲಿ ಸಾಕಷ್ಟು ಕುತೂಹಲವನ್ನು ಹೆಚ್ಚಿಸಿದ್ದಾರೆ. ಇನ್ನೂ ಈ ಎರಡು ಸಿನಿಮಾಗಳ ಶೂಟಿಂಗ್ ರಭಸದಿಂದ ನಡೆಯುತ್ತಿದ್ದು ಆದಷ್ಟು ಬೇಗ ನಮ್ಮ ಜೂನಿಯರ್ ರೆಬರ್ ಸ್ಟಾರ್ ಅವರನ್ನು ದೊಡ್ಡ ಪರದೆಯಲ್ಲಿ ನೋಡುವ ಅವಕಾಶ ಮಾಡಿಕೊಡಲಾಗುವುದು ಎನ್ನಲಾಗಿದೆ.
ಹಾಗೆಯೇ ಇದೆ ವರ್ಷ ಜೂನ್ ತಿಂಗಳಲ್ಲಿ ತಮ್ಮ ದೀರ್ಘ ಕಾಲದ ಸ್ನೇಹಿತೆ ಯೊಂದಿಗೆ ಅಭಿಷೇಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹೌದು ಜೂನ್ 5 ರಂದು "ಅವಿವಾ ಬಿಡಪ್ಪ " ಎನ್ನುವ ' ಫ್ಯಾಷನ್ ಡಿಸೈನರ್ ' ಆಗಿರುವ ಯುವತಿಯೊಂದಿಗೆ ಪಕ್ಕ ಮಂಡ್ಯ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವಿವ ಅವರು ನೀಡುವುದಕ್ಕೆ ಮಾಡ್ರನ್ ಆಗಿದ್ದರು ಕೂಡ ಕೆಲ ಸಂಧರ್ಭದಲ್ಲಿ ಅವರು ಕೊಡ ಮಂಡ್ಯ ಮನೆಯ ಹೆಣ್ಣು ಮಗುವಿನಂತೆ ಕಾಣಿಸಿಕೊಳ್ಳುತ್ತಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅವರು ಜಿಮ್ ನಲ್ಲಿ ವರ್ಕೌ್ ಮಾಡುತ್ತಿರುವ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ಈ ವೀಡಿಯೊ ಗೆ ಜನರು "ನಮ್ಮ ಅತ್ತಿಗೆ ಕ್ಲಾಸ್ ಗು ಸೈ ಹಾಗೂ ಮಾಸ್ ಗೂ ಸೈ" ಎನ್ನುವ ಕಾಮೆಂಟ್ ಹಾಕುತ್ತಾ ಇದ್ದಾರೆ.