ಬಿಗ್ ಬಾಸ್ ಸ್ಪರ್ಧಿ ಐಶ್ವರ್ಯಾ ಸಿಂಧೋಗಿ ಕಥೆ ಕೇಳಿದರೆ ಎಂತವರಿಗೂ ಕಣ್ಣೀರು ಬರುತ್ತೆ :ಏನದು ನೋಡಿ ?
ಹೌದು ಗೆಳೆಯರೇ ಒಬ್ಬಬ್ಬರಾ ಜೇವನದಲ್ಲಿ ಒಂದು ಕಣ್ಣೀರು ಕಥೆ ಇರುತ್ತೆ . ಅವರು ಎಷ್ಟೆಲ್ಲ ಕಷ್ಟ ಪಟ್ಟು ಮುಂದೆ ಬಂದಿರುತ್ತಾರೆ ಅನ್ನೋದು ಅವರು ಹೇಳಿದ ಮೇಲೆ ಗೊತ್ತಾಗುತ್ತೆ .
ಕನ್ನಡ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಬೆಡಗಿ ಐಶ್ವರ್ಯಾ ಸಿಂಧೋಗಿ. ಮೊದಲು ಸಿನಿಮಾ ಹೀರೋಯಿನ್ ಆಗಿ ಬಣ್ಣದ ಲೋಕಕ್ಕೆ ಐಶ್ವರ್ಯಾ ಸಿಂಧೋಗಿ ಕಾಲಿಟ್ಟರು. ಸೃಜನ್ ಲೋಕೇಶ್ ನಟನೆಯ ‘ಸಪ್ನೋಂಕಿ ರಾಣಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ‘ಸಿಂಹಾದ್ರಿ’, ‘ಮಟಾಷ್’, ‘ಸಂಯುಕ್ತ 2’, ‘ವಾವ್’, ‘ಯಾರು ಯಾರು ನೀ ಯಾರು?’, ‘ಸೈತಾನ್’ ಮುಂತಾದ ಚಿತ್ರಗಳಲ್ಲಿ ಐಶ್ವರ್ಯಾ ಸಿಂಧೋಗಿ ನಟಿಸಿದರು
‘ಬಿಗ್ ಬಾಸ್’ ಅನ್ನೋದು ಎಲ್ಲರ ಕನಸು. ಹಲವಾರು ಜನ ಇಲ್ಲಿಗೆ ಬರೋಕೆ ತುಂಬಾ ಕನಸು ಕಟ್ಟಿರುತ್ತಾರೆ. ನನ್ನ ಕನಸು ಇಂದು ಈಡೇರಿದೆ. ನನ್ನ ಮೇಲೆ ನನಗೆ ಹೆಮ್ಮೆ ಇದೆ’’ ಎಂದಿದ್ದಾರೆ ಐಶ್ವರ್ಯಾ ಸಿಂಧೋಗಿ.
’ಅಪ್ಪ - ಅಮ್ಮನಿಗೆ ನಾನು ಒಬ್ಬಳೇ ಮಗಳು. ತುಂಬಾ ಮುದ್ದಾಗಿ, ಬಂಗಾರದ ಹಾಗೆ ನನ್ನನ್ನ ನೋಡಿಕೊಂಡಿದ್ದಾರೆ. ಅಪ್ಪ-ಅಮ್ಮನ ಜೊತೆಗೆ ಮಾತ್ರ ನಾನು ಬೆಳೆದಿದ್ದು. ಜಾಯಿಂಟ್ ಫ್ಯಾಮಿಲಿ ಕಾನ್ಸೆಪ್ಟ್ ನನಗೆ ಗೊತ್ತಿಲ್ಲ. ನಾನು ಇಂಡಿಪೆಂಡೆಂಟ್ ಗರ್ಲ್. ನಟಿ ಆಗಬೇಕು ಅಂತ ನಾನು ಕನಸಲ್ಲೂ ಅಂದುಕೊಂಡಿರಲಿಲ್ಲ. ಅಪ್ಪ - ಅಮ್ಮ ಎಲ್ಲಾ ಆಗಿದ್ದರು. ಮೊದಲು ನಾನು ಅಪ್ಪನನ್ನ ಕಳೆದುಕೊಂಡೆ. ವಿಷಯ ಗೊತ್ತಾದಾಗ ನನಗೆ ಕೈ ಕಾಲೇ ಆಡಲಿಲ್ಲ. ಅಮ್ಮ ಹೋದಾಗ ಇನ್ನೊಂಥರಾ ನೋವು. ಈಗ ನನ್ನ ಲೈಫ್‌ನಲ್ಲಿ ಯಾರೂ ಇಲ್ಲ. ಗೈಡ್ ಮಾಡೋಕೆ ಯಾರೂ ನನಗೆ ಇರಲಿಲ್ಲ’’
‘’2018ರಲ್ಲಿ ಅಪ್ಪನಿಗೆ (ಸುರೇಶ್) ಕಾರ್ಡಿಯಾಕ್ ಅರೆಸ್ಟ್ ಆಯ್ತು. ತುಂಬಾ ಆರೋಗ್ಯವಾಗಿ ಇದ್ದರು. ಹಠಾತ್ ಸಾವನ್ನಪ್ಪಿದರು. ಹೈದರಾಬಾದ್‌ನಲ್ಲಿ ಮೃತಪಟ್ಟರು. ಅವರು ಸಫರ್ ಆಗೋದನ್ನ ಇಡೀ ಜೀವನದಲ್ಲಿ ನಾನು ನೋಡಿರಲಿಲ್ಲ. ಅವರು ಹೋಗುವಾಗಲೂ ನಾನು ನೋಡಲಿಲ್ಲ. ಅಮ್ಮನಿಗೆ ಆರೋಗ್ಯ ಸಮಸ್ಯೆ ಇತ್ತು. ಮಲ್ಟಿಪಲ್ ಆರ್ಗನ್ ಫೇಲ್ಯೂರ್‌ನಿಂದ 2020ರಲ್ಲಿ ಅಮ್ಮ ಮೃತಪಟ್ಟರು’’ ಎಂದು ಹೇಳಿ ಐಶ್ವರ್ಯಾ ಸಿಂಧೋಗಿ ಭಾವುಕರಾದರು.