ಪ್ರಪಂಚದ ಅವನತಿ ಎಂದ ಬಾಬಾ ವಂಗಾ! ಇಲ್ಲಿದೆ ನೋಡಿ 2025ರ ಶಾಕಿಂಗ್ ಭವಿಷ್ಯ?

ಪ್ರಪಂಚದ ಅವನತಿ ಎಂದ ಬಾಬಾ ವಂಗಾ! ಇಲ್ಲಿದೆ ನೋಡಿ 2025ರ ಶಾಕಿಂಗ್ ಭವಿಷ್ಯ?

ನಮ್ಮ ಕಾಲ ಎಷ್ಟೇ ಅಪ್ಡೇಟ್ ಆಗುತ್ತಾ ಹೋಗುತ್ತಿದ್ದರು ಕೊಡ ನಮ್ಮಲ್ಲಿ ಇರುವ ಸನಾತನದ ಧರ್ಮಗಳ ಮೇಲೆ ಇರುವ ನಂಬಿಕೆ ಕೊಂಚವೂ ಕೊಡ ಕುಗ್ಗಿಲ್ಲ ಎಂದು ಹೇಳಬಹುದು. ಈ ನಂಬಿಕೆ ಯಾವ ಟೆಕ್ನಾಲಜಿ ಬಂದರು ಬರುತ್ತಿದ್ದರು ಕೊಡ ಶಾಶ್ವತವಾಗಿ ಇರುತ್ತದೆ ಎಂದು ಹೇಳಬಹುದು. ಇನ್ನೂ ನಮ್ಮ ಹಿಂದೂ ಧರ್ಮದ ಇರುವ ಪವರ್ ಎಂದ್ರೆ ತಮ್ಮಲ್ಲಿ ಇರುವ ದೈವ ಆರಾಧನೆ ಮಾಡುವವರಿಗೆ ತಮ್ಮ ಕಾಲ ಜ್ಞಾನದ ಮೂಲಕ ಪ್ರಪಂಚದ ಭವಿಷ್ಯವನ್ನು ನೋಡುವ ಶಕ್ತಿಯನ್ನು ನೀಡಲಿದೆ. ಈ ಕಾಲ ಜ್ಞಾನಿಗಳು ಸಮಯದ ಬಗ್ಗೆ ಅತ್ಯುನ್ನತ ಅರಿವನ್ನು ಹೊಂದಿರುವ ವ್ಯಕ್ತಿಗಳು ಎಂದು ಅರ್ಥ. ಇವರು ಭವಿಷ್ಯವನ್ನು ಮುನ್ನಡೆಸುವುದಕ್ಕೆ ಸಹಾಯ ಮಾಡುವುದು ಹೆಚ್ಚು ಸುಲಭವಾಗುತ್ತದೆ.

ಈ ಭವಿಷ್ಯ ಹೇಳುವುದರ ವಿಷಯಕ್ಕೆ ಬಂದರೆ ವಾಂಗ ಬಾಬಾ ಕೊಡ ಅಷ್ಟೇ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಇನ್ನೂ `ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ’ ಎಂದು ಕರೆಯಲ್ಪಡುವ ವಂಗಾ ತಮ್ಮ 12 ನೇ ವಯಸ್ಸಿನಲ್ಲಿ  ದೃಷ್ಟಿಯನ್ನು  ಸ್ಫೋಟದಿಂದ  ಕಳೆದುಕೊಂಡರು. ತಮ್ಮ ದೃಷ್ಟಿ ಕಳೆದುಕೊಂಡ ನಂತರ ಇವರಿಗೆ ಭವಿಷ್ಯವನ್ನು ಹೇಳುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದಾಗಿ ಬಹಿರಂಗವಾಗಿ ಕೊಡ ತಿಳಿಸಿದರು. ಇನ್ನೂ ಸೆಪ್ಟೆಂಬರ್ 11, 2001 ರಂದು ನ್ಯೂಯಾರ್ಕ್‌ನಲ್ಲಿ ಅವಳಿ ಗೋಪುರಗಳ ಮೇಲಿನ ದಾಳಿಯು ಬಗ್ಗೆ ಆಕೆ ಮೊದಲನೇ ಭವಿಷ್ಯ ನೀಡಿದ್ದ ಗಮನಾರ್ಹವಾಗಿ ಕಾರ್ಯ ರೂಪಕ್ಕೆ ಕೊಡ ಬಂದಿತ್ತು. “ಎರಡು ಲೋಹದ ಹಕ್ಕಿಗಳು ನಮ್ಮ ಅಮೇರಿಕನ್ ಸಹೋದರರ ಮೇಲೆ ಅಪ್ಪಳಿಸುತ್ತವೆ , ತೋಳಗಳು ಪೊದೆಗಳಿಂದ ಕೂಗುತ್ತವೆ ಮತ್ತು ಮುಗ್ಧರ ರಕ್ತವು ನದಿಯಂತೆ ಹರಿಯುತ್ತದೆ” ಎಂದು ಅವರು ಭವಿಷ್ಯ ತಿಳಿಸಿದ್ದರು. 


ಇದೀಗ ಹಿಂದೆಯೇ 5029ರ ವರೆಗೂ ಜಗತ್ತಿನ ಭವಿಷ್ಯ ಬರೆದಿರುವ ಇವರ ಪುಸ್ತಕದ ಅನುಯಿಗಳು ಕೊಡ ಸಾಕಷ್ಟು ಮಂದಿ ಇದ್ದಾರೆ ಏಕೆಂದ್ರೆ ಇವರ ಭವಿಷ್ಯ ನೂರಕ್ಕೆ ನೂರು ಕಾರ್ಯ ರೂಪಕ್ಕೆ ಬರುತ್ತಿದ್ದರಿಂದ.ಇದೀಗ  ಬಾಬಾ ವಂಗಾ ಅವರ ಪ್ರಕಾರ 2025 ರಲ್ಲಿ ಯುರೋಪ್ನಲ್ಲಿ ದೊಡ್ಡ ಸಂಘರ್ಷ ಉಂಟಾಗಲಿದ್ದು,  ಇದು ಖಂಡದಲ್ಲಿ ಜನಸಂಖ್ಯೆಯ ದೊಡ್ಡ ಇಳಿಕೆಯನ್ನು ಕಾಣಲಿದೆ  ಎಂದು ತಿಳಿಸಿದ್ದಾರೆ. 2028 ರಲ್ಲಿ, ಮಾನವೀಯತೆಯು ಹೊಸ ಶಕ್ತಿಯ ಹುಡುಕಲು ಪ್ರಯತ್ನಿಸಲು ಶುಕ್ರವನ್ನು ತಲುಪಲು ಪ್ರಯತ್ನ ನಡೆಯುತ್ತದೆ. ಐದು ವರ್ಷಗಳ ನಂತರ, 2033 ರಲ್ಲಿ, ಧ್ರುವಗಳಲ್ಲಿನ ಮಂಜುಗಡ್ಡೆಯ ಕರಗುವಿಕೆಯು ಸಮುದ್ರ ಮಟ್ಟವನ್ನು ಹೆಚ್ಚಿಸುತ್ತದೆ, 2076ಕ್ಕೆ ವಿಶ್ವದಾದ್ಯಂತ ಕಮ್ಯುನಿಸಂ ಆಡಳಿತ ಮರಳುತ್ತದೆ, 2130 ರಲ್ಲಿ ಭೂಮ್ಯತೀತ ನಾಗರಿಕತೆಗಳೊಂದಿಗೆ ಸಂಪರ್ಕ ಸಿಗಲಿದ್ದು, 2170 ರಲ್ಲಿ ಜಾಗತಿಕ ಬರ, 3005 ರಲ್ಲಿ ಮಂಗಳದ ಮೇಲೆ ಯುದ್ಧ ಮತ್ತು 3797 ರಲ್ಲಿ ಭೂಮಿಯ ನಾಶವನ್ನು ಕಾಣಲಿದೆ. ಯಾವುದೇ ಸಂದರ್ಭದಲ್ಲಿ, ಮಾನವರು ಸೌರವ್ಯೂಹದ ಮತ್ತೊಂದು ಗ್ರಹಕ್ಕೆ ತೆರಳಲು ಸಾಧ್ಯವಾಗಬಹುದು ಎಂದು ಭವಿಷ್ಯ ಈಗಾಗಲೇ ತಿಳಿಸಿದ್ದಾರೆ.   ( video credit : YOYO Tv Kannada )